ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ; ಆಂಧ್ರದಲ್ಲಿ ಅಗ್ನಿಪರೀಕ್ಷೆಗೊಳಗಾಗಲಿರುವ ಚಂದ್ರಬಾಬು

ಪ್ರಧಾನಿ ಮೋದಿ ಜೊತೆಗಿನ ಭಿನ್ನಾಬಿಪ್ರಾಯದಿಂದಾಗಿ ಎನ್​ಡಿಎ ಮೈತ್ರಿಕೂಟದಿಂದ ಹೊರಬಂದು ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಚಂದ್ರಬಾಬು ನಾಯ್ಡು ಅವಕಾಶ ಸಿಕ್ಕಾಗಲೆಲ್ಲ ಮೋದಿಯ ವಿರುದ್ಧ ಮಾತನಾಡುತ್ತಾ ಬಂದಿದ್ದಾರೆ. ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ಸಾಭೀತುಪಡಿಸಬೇಕು ಎಂಬ ಹಪಹಪಿ ಅವರಲ್ಲಿದೆ. ಹೀಗಾಗಿ ಈ ಚುನಾವಣೆ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಲಿದೆ ಎಂದರೆ ತಪ್ಪಾಗಲಾರದು.

MAshok Kumar | news18
Updated:April 10, 2019, 8:50 AM IST
ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ; ಆಂಧ್ರದಲ್ಲಿ ಅಗ್ನಿಪರೀಕ್ಷೆಗೊಳಗಾಗಲಿರುವ ಚಂದ್ರಬಾಬು
ಮತದಾರರ ಪ್ರಾತಿನಿಧಿಕ ಚಿತ್ರ
MAshok Kumar | news18
Updated: April 10, 2019, 8:50 AM IST
ನವ ದೆಹಲಿ(ಏ.10): ಬಹುನಿರೀಕ್ಷಿತ ಲೋಕಸಭಾ ಚುನಾವಣೆ 2019ರ ಮೊದಲ ಹಂತದ ಮತದಾನಕ್ಕೆ ಗುರುವಾರ ಚಾಲನೆ ಸಿಗಲಿದ್ದು, 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.

ಭಾರತದಲ್ಲಿ ಈವರೆಗೆ ನಡೆದ ಲೋಕಸಭಾ ಚುನಾವಣೆಗಳಿಗಿಂತ  2019ರ ಲೋಕಸಭಾ ಚುನಾವಣೆ ಹೈವೋಲ್ಟೇಜ್ ಪಡೆದಿರುವುದು ಸುಳ್ಳಲ್ಲ. ಈ ಚುನಾವಣೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರ? ಅಥವಾ ಪರ್ಯಾಯ ಸರ್ಕಾರ ರಚನೆಯಾಗುತ್ತದೆಯೇ? ಎಂಬುದನ್ನು ನಿರ್ಧರಿಸಲಿದೆ. ಇದೇ ಕಾರಣಕ್ಕೆ ಇಡೀ ವಿಶ್ವವೇ ಈ ಚುನಾವಣೆಯ ಕುರಿತು ಕುತೂಹಲದಿಂದ ಎದುರು ನೋಡುತ್ತಿದೆ.

ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲಪ್ರದೇಶ, ಸಿಕ್ಕಿಂ ಹಾಗೂ ಒಡಿಶಾದ ನಾಲ್ಕು ಲೋಕಸಭಾ ವ್ಯಾಪ್ತಿಯಲ್ಲಿ ನಾಳೆ ಮೊದಲ ಹಂತದ ಮತದಾನ ಜರುಗಲಿದೆ. ಲೋಕಸಭೆಯ ಜೊತೆಗೆ ಆಂಧ್ರಪ್ರದೇಶ, ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆಗೂ ನಾಳೆಯೇ ಚುನಾವಣೆ ನಡೆಯಲಿರುವುದು ವಿಶೇಷ.

ಇದನ್ನೂ ಓದಿ : ನರೇಂದ್ರಮೋದಿ ಬಂದ ನಂತರ ರಾಜ್ಯದಲ್ಲಿ ಬಿಜೆಪಿ ಸುನಾಮಿ ಉಂಟಾಗಿದೆ: ಜಗದೀಶ್​ ಶೆಟ್ಟರ್​

ಮೊದಲ ಹಂತದ ಮತದಾನ ಜರುಗುವ ಈ ಕ್ಷೇತ್ರಗಳಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಅಭ್ಯರ್ಥಿಗಳ ಪರವಾಗಿ ಈ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಈ ಇಬ್ಬರೂ ರಾಷ್ಟ್ರ ನಾಯಕರ ಸಾಮರ್ಥ್ಯ ಈ ಚುನಾವಣೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೊಳಗಾಗಲಿದೆ.

ಆದರೆ, ಬಹುತೇಕ ರಾಷ್ಟ್ರ ಮಟ್ಟದ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಆಡಳಿತರೂಢ ಬಿಜೆಪಿ ಪಕ್ಷ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಲಿಗೆ ಈ ಚುನಾವಣೆಯ ಗೆಲುವು ಮತ್ತಷ್ಟು ಮಹತ್ವ ಪಡೆದಿದೆ.
Loading...

ಚಂದ್ರಬಾಬುಗೆ ಅಗ್ನಿ ಪರೀಕ್ಷೆ : ಮೊದಲ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶದ 25 ಲೋಕಸಭೆ ಹಾಗೂ ವಿಧಾನಸಭೆಯ ಎಲ್ಲಾ 176 ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಆದರೂ, ಕಳೆದ ಬಾರಿ ಟಿಡಿಪಿ ಎನ್​ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿತ್ತು.

ಆಂಧ್ರಪ್ರದೇಶವನ್ನು ತಕ್ಕ ಮಟ್ಟಿಗೆ ಟಿಡಿಪಿಗೆ ಪ್ರಮುಖ ಎದುರಾಳಿ ಎಂದರೆ ಜಗಮೋಹನ್ ರೆಡ್ಡಿಯ ವೈಎಸ್​ಆರ್ ಕಾಂಗ್ರೆಸ್. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಎರಡೂ ಚುನಾವಣೆಗಳಲ್ಲಿ ವೈಎಸ್​ಆರ್ ಕಾಂಗ್ರೆಸ್ ಟಿಡಿಪಿಗೆ ಪ್ರಬಲ ಪೈಪೋಟಿ ನೀಡಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.

ಇದನ್ನೂ ಓದಿ : ದೇಶಪ್ರೇಮಿಗಳು V/S ದೇಶದ್ರೋಹಿಗಳ ನಡುವಿನ ಧರ್ಮಯುದ್ಧ ಈ ಲೋಕಸಭಾ ಚುನಾವಣೆ: ಪ್ರಹ್ಲಾದ್​​ ಜೋಶಿ!

ಕಳೆದ ಎರಡು ವರ್ಷಗಳಿಂದ ವೈಎಸ್​ಆರ್ ಕಾಂಗ್ರೆಸ್ ನ ಸಂಸ್ಥಾಪಕ ಅಧ್ಯಕ್ಷ ಜಗಮೋಹನ್ ರೆಡ್ಡಿ ಇಡೀ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಸಂಚಲನ ಮೂಡಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳು ವೈಎಸ್​ಆರ್ ಕಾಂಗ್ರೆಸ್​ ಟಿಡಿಪಿಗಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗಳಿಸಲಿದೆ. ಅಲ್ಲದೆ ಆಂಧ್ರಪ್ರದೇಶದಲ್ಲಿ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಭವಿಷ್ಯ ನುಡಿದಿರುವುದು ಚಂದ್ರಬಾಬು ನಾಯ್ಡುಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ನಡುವೆ ಪ್ರಧಾನಿ ಮೋದಿ ಜೊತೆಗಿನ ಭಿನ್ನಾಬಿಪ್ರಾಯದಿಂದಾಗಿ ಎನ್​ಡಿಎ ಮೈತ್ರಿಕೂಟದಿಂದ ಹೊರಬಂದು ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಚಂದ್ರಬಾಬು ನಾಯ್ಡು ಅವಕಾಶ ಸಿಕ್ಕಾಗಲೆಲ್ಲ ಮೋದಿಯ ವಿರುದ್ಧ ಮಾತನಾಡುತ್ತಾ ಬಂದಿದ್ದಾರೆ. ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ಸಾಭೀತುಪಡಿಸಬೇಕು ಎಂಬ ಹಪಹಪಿ ಅವರಲ್ಲಿದೆ. ಹೀಗಾಗಿ ಈ ಚುನಾವಣೆ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಲಿದೆ ಎಂದರೆ ತಪ್ಪಾಗಲಾರದು.

ಆಂಧ್ರಪ್ರದೇಶದ ಜೊತೆಗೆ ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೂ ನಾಳೆಯೆ ಚುನಾವಣೆ ಜರುಗಲಿದೆ. ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತೊಮ್ಮೆ ಸರಳ ಬಹುಮತ ಗಳಿಸಿ ಸರಕಾರ ರಚಿಸಿದೆ.
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626