LIVE NOW

Lok Sabha Election Voting Live: 4ನೇ ಹಂತದ ಲೋಕಸಭಾ ಚುನಾವಣೆ; ಶೇಕಡ 64ರಷ್ಟು ಮತದಾನ

Phase Four Lok Sabha Election 2019 Voting Live Updates | 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳು, ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ . ಹಾಗೆಯೇ 6 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯೂ ಆಗುತ್ತಿದೆ.

Kannada.news18.com | April 29, 2019, 8:09 PM IST
facebook Twitter Linkedin
Last Updated April 29, 2019
auto-refresh
ಏಳು ಹಂತಗಳ ಲೋಕಸಭೆ ಚುನಾವಣೆ ಅರ್ಧ ಹಾದಿಗೆ ಬಂದಿದ್ದು, ಇವತ್ತು 4ನೇ ಹಂತದ ಚುನಾವಣೆ ನಡೆಯಲಿದೆ. ಇಂದು ಒಟ್ಟು 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 6ಕ್ಕೆ ಮುಕ್ತಾಯವಾಗುತ್ತದೆ. ಸೂಕ್ಷ್ಮ ಭದ್ರತಾ ಸ್ಥಿತಿ ಇರುವ ಕೆಲ ಕ್ಷೇತ್ರಗಳಲ್ಲಿ ಮತದಾನ ಸಂಜೆ 4ಕ್ಕೇ ಅಂತ್ಯವಾಗಲಿದೆ. ಇವತ್ತಿನ ಮತದಾನದ ಕ್ಷಣಕ್ಷಣದ ವಿವರ ನಿಮ್ಮ ನ್ಯೂಸ್​18  ಕನ್ನಡದಲ್ಲಿ. Read More
4:17 pm (IST)

ಗಡಿಭದ್ರತಾ ಪಡೆಯ ಪೇದೆಯಾಗಿದ್ದ ತೇಜ್ ಬಹದ್ದೂರ್ ಯಾದವ್ ಅವರನ್ನು 2 ವರ್ಷದ ಹಿಂದೆ ಸೇವೆಯಿಂದ ವಜಾ ಮಾಡಲಾಗಿತ್ತು. ಬಿಎಸ್​ಎಫ್ ಜವಾನರಿಗೆ ಕಳಪೆ ಅಹಾರವಸ್ತುಗಳು ಪೂರೈಕೆಯಾಗುತ್ತಿವೆ ಎಂದು ತೇಜ್ ಬಹದ್ದೂರ್ ಅವರು ಸಾಕ್ಷಿ ಸಮೇತವಾಗಿ ಲೈವ್ ಆಗಿ ಫೇಸ್​ಬುಕ್​ನಲ್ಲಿ ಮಾತನಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸರಕಾರದಿಂದ ಸೈನಿಕರಿಗೆ ಆಹಾರ ಪೂರೈಕೆಗೆ ಹಣ ಕೊಡಲಾಗುತ್ತಿದ್ದರೂ ಮಧ್ಯ ಮಾರ್ಗದಲ್ಲಿ ಭ್ರಷ್ಟಾಚಾರದಿಂದ ಅವು ಸೈನಿಕರಿಗೆ ಸಿಗುತ್ತಿಲ್ಲ. ತೀರಾ ವೈಪರೀತ್ಯದ ಹವಾಮಾನದಲ್ಲಿ ಕೆಲಸ ಮಾಡುವ ಬಿಎಸ್​ಎಫ್ ಯೋಧರಿಗೆ ತಿನ್ನಲು ಯೋಗ್ಯವಲ್ಲದ ಆಹಾರವೇ ಗತಿಯಾಗಿದೆ ಎಂದು ತೇಜ್ ಬಹದ್ದೂರ್ ಅವರು ಹಲವು ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು. ಅದಾದ ಬಳಿಕ ಅವರನ್ನು ಸೇವೆಯಿಂದ ವಜಾ ಮಾಡಲಾಯಿತು.

Load More