ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ. 64 ವೋಟಿಂಗ್​​; ದೀದಿ ನಾಡಲ್ಲಿ ಹಿಂಸಾಚಾರ; ಬಹುತೇಕ ಶಾಂತಿಯುತ ಮತದಾನ

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಆಯೋಗ ಪ್ರಕರಣ ದಾಖಲಿಸಿದೆ.

Ganesh Nachikethu | news18
Updated:April 29, 2019, 11:13 PM IST
ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ. 64 ವೋಟಿಂಗ್​​; ದೀದಿ ನಾಡಲ್ಲಿ ಹಿಂಸಾಚಾರ; ಬಹುತೇಕ ಶಾಂತಿಯುತ ಮತದಾನ
ಪ್ರಾತಿನಿಧಿಕ ಚಿತ್ರ
 • News18
 • Last Updated: April 29, 2019, 11:13 PM IST
 • Share this:
ನವದೆಹಲಿ(ಏ.29):ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೇ ಬಹುತೇಕ ಶಾಂತಿಯುತವಾಗಿ ನಡೆದಿದೆ. ದೇಶದ 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇಕಡ 64ರಷ್ಟು ಮತದಾನ ದಾಖಲಾಗಿದೆ.

ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್‌, ಸುಭಾಷ್ ಭಾಮ್ರೆ, ಎಸ್‌ಎಸ್‌ ಅಹ್ಲುವಾಲಿಯಾ ಮತ್ತು ಬಿಜೆಪಿಯ ಬಾಬುಲ್ ಸುಪ್ರಿಯೊ ಹಾಗೂ ಕೇಂದ್ರ ಮಾಜಿ ಸಚಿವರಾದ ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್, ಅಧೀರ್ ರಂಜನ್ ಚೌಧರಿ, ಕನ್ನಯ್ಯ ತರಹದ ಘಟಾನುಘಟಿಗಳು ಕಣದಲ್ಲಿದ್ದಾರೆ. ಅಲ್ಲದೇ ಮುಂದಿನ ತಿಂಗಳು ಮೇ 23 ರಂದು ಚುನಾವಣಾ ಫಲಿತಾಂಶ ಅಧಿಕೃತವಾಗಿ ಹೊರಬೀಳಲಿದ್ದು, ಎಲ್ಲರೂ ಗೆಲುವಿನ ನಿರೀಕ್ಷೆಯಲ್ಲಿದ್ಧಾರೆ.

ಎಂದಿನಂತೆಯೇ ಇಂದು ಕೂಡ ಬೆಳಗ್ಗೆ 7ರಿಂದಲೇ ಶುರುವಾದ ಮತದಾನ ಸಂಜೆ 6 ಗಂಟೆಗೆ ಶಾಂತಿಯುತವಾಗಿ ಮುಕ್ತಯವಾಗಿದೆ. ಸಿಎಂ ಮಮತಾ ಬ್ಯಾನರ್ಜಿ ತವರು ಪಶ್ಚಿಮ ಬಂಗಾಳದಲ್ಲಿ ಶೇಕಡ 77ರಷ್ಟು ಮತದಾನ ನಡೆದಿದೆ. ಮಧ್ಯಪ್ರದೇಶದಲ್ಲಿ ಶೇಕಡ 65, ರಾಜಸ್ಥಾನದಲ್ಲಿ 64.48, ಜಾರ್ಖಂಡ್‌ನಲ್ಲಿ ಶೇಕಡ 63 ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: 3ನೇ ಹಂತದ ಮತದಾನ ಮುಕ್ತಾಯ; ಶೇ.66 ವೋಟಿಂಗ್; ಬಂಗಾಳ, ಒಡಿಶಾ ಮತ್ತು ಕಾಶ್ಮೀರದ ಕೆಲವೆಡೆ ಹಿಂಸಾಚಾರ; ಒಬ್ಬ ಬಲಿ

ನಾಲ್ಕನೇ ಹಂತದಲ್ಲಿ ಒಟ್ಟು 900 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಘಟಾನುಘಟಿ ನಾಯಕರ ಹಣೆ ಬರಹ ಸದ್ಯ ಮತ ಪೆಟ್ಟಿಗೆಯಲ್ಲಿ ಅಡಗಿದೆ. ಬಿಗಿ ಪೊಲೀಸ್​ ಬಂದೋಬಸ್ತ್​​ ನಡುವೇ 9 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡಯದಂತೇ ಆಯೋಗ ಎಚ್ಚರವಹಿಸಿದೆ.

ರಾಜ್ಯದ ಶೇಕಡಾವಾರು ಮತದಾನ ವಿವರ ಹೀಗಿದೆ:
 • ಬಿಹಾರ- ಶೇ. 53.67

 • ಜಮ್ಮು ಮತ್ತು ಕಾಶ್ಮೀರ- ಶೇ.9.79

 • ಮಹಾರಾಷ್ಟ್ರ- ಶೇ.54.70

 • ಮಧ್ಯಪ್ರದೇಶ- ಶೇ.65.86

 • ಒರಿಸ್ಸಾ- ಶೇ.64.05

 • ರಾಜಸ್ಥಾನ- ಶೇ.64.48

 • ಉತ್ತರಪ್ರದೇಶ- ಶೇ.53.12

 • ಪ.ಬಂಗಾಳ-ಶೇ.76.47

 • ಜಾರ್ಖಂಡ್​​- ಶೇ.63.76


ಕಣದಲ್ಲಿದ್ದ ಘಟಾನುಘಟಿಗಳು: 4ನೇ ಹಂತದ ಚುನಾವಣೆಯಲ್ಲಿ ಬಿಜೆಪಿಯಿಂದ ಬಾಬುಲ್ ಸುಪ್ರಿಯೋ, ಗಿರಿರಾಜ್ ಸಿಂಗ್. ಉಪೇಂದ್ರ ಕುಶ್ವಾಹ, ಸಾಕ್ಷಿ ಮಹಾರಾಜ್ ಪೂನಂ ಮಹಾಜನ್ ಕಣದಲ್ಲಿದ್ದರೇ, ಕಾಂಗ್ರೆಸ್​​ನಿಂದ ಸಂಜಯ್ ನಿರುಪಮ್ ಮತ್ತು ಮಿಲಿಂದ್ ದೇವೋರಾ ಸೇರಿದಂತೆ ಹಲವು ನಾಯಕರು ಸ್ಪರ್ಧೆ ಮಾಡುವ ಮೂಲಕ ಅಗ್ನಿಪರೀಕ್ಷೆಗೆ ಮುಂದಾಗಿದ್ಧಾರೆ.

ಕುಟುಂಬ ರಾಜಕಾರಣ: ಇನ್ನೊಂದೆಡೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಪುತ್ರ ರಾಮಚಂದ್ರ ಪಾಸ್ವಾನ್, ಸುನೀಲ್ ದತ್ ಪುತ್ರಿ ಪ್ರಿಯಾ ದತ್, ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಜಾರ್ಖಂಡ್​ನ ಮಾಜಿ ಸಿಎಂ ಶಿಬು ಸೊರೇನ್ ಪುತ್ರಿ ಅಂಜನಿ ಸೊರೇನ್ ಕೂಡ ಸ್ಪರ್ಧೆಗಿಳಿದಿದ್ದು, ಕುಟುಂಬ ರಾಜಕಾರಣ ರಾರಾಜಿಸುತ್ತಿತ್ತು ಎನ್ನಲಾಗಿದೆ.

ಈ ಮಧ್ಯೆ ಜೆಎನ್​​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಕೂಡ ಬಿಹಾರದ ಬೇಗುಸರೈ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಬಿಜೆಪಿ ಪೈರ್​​ ಬ್ರ್ಯಾಂಡ್​ ಗಿರಿರಾಜ್​ ಸಿಂಗ್​​ ವಿರುದ್ಧ ಕಣಕ್ಕಿಳಿದಿದ್ಧಾರೆ.

ಇದನ್ನೂ ಓದಿ: ಕನ್ನೌಜ್​ನಲ್ಲಿ ಡಿಂಪಲ್ ಫೈಟ್; ಕಳೆದ 30 ವರ್ಷದಲ್ಲಿ ಅವಿರೋಧವಾಗಿ ಸಂಸದೆಯಾದ ಏಕೈಕ ಮಹಿಳೆ ಡಿಂಪಲ್ ಯಾದವ್

ದೀದಿ ನಾಡಲ್ಲಿ ಹಿಂಸಾಚಾರ: ಇನ್ನು ಪಶ್ಚಿಮ ಬಂಗಾಳದಲ್ಲಿ ಕೆಲವೆಡೆ ಹಿಂಸಾಚಾರ ನಡೆದಿದೆ. ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದನ್ನು ಹೊರತುಪಡಿಸಿದರೇ ಮತದಾನ ಬಹತೇಕ ಶಾಂತಿಯುತವಾಗಿ ನಡೆದಿದೆ ಎಂದು ಆಯೋಗ ತಿಳಿಸಿದೆ.

ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಆಯೋಗ ಪ್ರಕರಣ ದಾಖಲಿಸಿದೆ.

ಇವಿಎಂ ದೋಷ: ಉತ್ತರ ಪ್ರದೇಶದ ಹಮೀರ್‌ಪುರದ 111ನೇ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಮತದಾನ ಸ್ವಲ್ಪಕಾಲ ಸ್ಥಗಿತಗೊಂಡಿತು. ಬಳಿಕ ಚುನಾವಣಾ ಅಧಿಕಾರಿಗಳು ಆಗಮಿಸಿ ಸರಿಪಡಿಸಿದರು. ಇಲ್ಲಿ ಹೊರತುಪಡಿಸಿದರೇ ಇನ್ನೆಲ್ಲೂ ಇವಿಎಂ ದೋಷ ಕಾಣಿಸಿಕೊಂಡಿಲ್ಲ.

ಇಂದು ಮತದಾನ ನಡೆದ 72 ಸೀಟುಗಳ ಪೈಕಿ 56 ಸ್ಥಾನಗಳನ್ನು 2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ಕೇವಲ 2, ಟಿಎಂಸಿ 6, ಬಿಜೆಡಿ 6 ಸೀಟುಗಳನ್ನು ಗೆದ್ದಿದ್ದವು ಎನ್ನಲಾಗಿದೆ. ನಾಲ್ಕನೇ ಹಂತದ ಚುನಾವಣೆಗಾಗಿ ಚುನಾವಣೆ ಆಯೋಗ ಒಟ್ಟು 1.40 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಿತ್ತು. ಈ ಮೂಲಕ ಸುಗಮ ಮತದಾನಕ್ಕೆ ವ್ಯಾಪಕ ವ್ಯವಸ್ಥೆ ಮಾಡಿಕೊಂಡಿತ್ತು.
--------------
First published: April 29, 2019, 10:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading