ದೆಹಲಿಯಲ್ಲಿ ಕ್ರಿಮಿನಲ್ ಕೇಸ್​​ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಗೆ ಅಗ್ರ ಸ್ಥಾನ, 2ನೇ ಸ್ಥಾನದಲ್ಲಿ ಆಪ್​

ದಕ್ಷಿಣ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಬಿದುರಿ ತನ್ನ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಘೋಷಿಸಿದ್ದಾರೆ. ಪಶ್ಚಿಮ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಮಹಾಬಲ ಮಿಶ್ರಾ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳಿವೆ ಎನ್ನಲಾಗಿದೆ

Ganesh Nachikethu | news18
Updated:May 6, 2019, 11:35 AM IST
ದೆಹಲಿಯಲ್ಲಿ ಕ್ರಿಮಿನಲ್ ಕೇಸ್​​ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಗೆ ಅಗ್ರ ಸ್ಥಾನ, 2ನೇ ಸ್ಥಾನದಲ್ಲಿ ಆಪ್​
ಮೋದಿ ಮತ್ತು ಕೇಜ್ರಿವಾಲ್​​
Ganesh Nachikethu | news18
Updated: May 6, 2019, 11:35 AM IST
ನವದೆಹಲಿ(ಮೇ.06): ದೆಹಲಿಯಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್​​-ಆಪ್​​ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಇಲ್ಲಿ ಕದನದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಹೆಚ್ಚು ಕ್ರಿಮಿನಲ್​ ಮೊಖದ್ದಮೆಗಳಲ್ಲಿ ಆರೋಪಿಯಾಗಿರುವವರು ಬಿಜೆಪಿ ಪಕ್ಷದವರು ಎಂಬುದು ಗಮನಾರ್ಹ. ಹಾಗೆಯೇ ಈ ಪಟ್ಟಿಯಲ್ಲಿ ಆಮ್​ ಆದ್ಮಿ ಪಕ್ಷ​​ ನಂತರದ ಸ್ಥಾನದಲ್ಲಿದೆ ಎಂದು ಕೇಂದ್ರ ಚುನಾವಣೆ ಆಯೋಗ ತಿಳಿಸಿದೆ.

ಇದೇ ಮೇ 12ರಂದು ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಬಿಜೆಪಿ, ಆಪ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಣದಲ್ಲಿರುವ ಬಿಜೆಪಿ 7 ಅಭ್ಯರ್ಥಿಗಳ ಪೈಕಿ ಮೂವರು, ಆಪ್‌ನ ಇಬ್ಬರು ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್​​ನ ಓರ್ವ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಘೋಷಿಸಲಾಗಿದೆ.

ಈಶಾನ್ಯ ದೆಹಲಿಯಿಂದ ಮತ್ತೊಮ್ಮೆ ಕಣಕ್ಕಿಳಿದಿರುವ ಹಾಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಮೇಲೆ ಮೂರು ಕ್ರಿಮಿನಲ್​​ ಕೇಸ್ ದಾಖಲಾಗಿವೆ. ಜತೆಗೆ ಇದೇ ಕ್ಷೇತ್ರದ​​ ಆಪ್‌ನ ದಿಲೀಪ್ ಪಾಂಡೆ ಒಂದು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಪೂರ್ವ ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಗೌತಮ್​ ಗಂಭೀರ್ ಮತ್ತು ಆಪ್‌ನ ಅತಿಷಿ ತಲಾ ಒಂದು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ.

ದಕ್ಷಿಣ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಬಿದುರಿ ತನ್ನ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಘೋಷಿಸಿದ್ದಾರೆ. ಪಶ್ಚಿಮ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಮಹಾಬಲ ಮಿಶ್ರಾ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳಿವೆ ಎನ್ನಲಾಗಿದೆ.

ಇದನ್ನೂ ಓದಿ: ರಾಜೀವ್​​ ಗಾಂಧಿ ಬಗೆಗಿನ ಮೋದಿ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ; ಸಿಎಂ ಕುಮಾರಸ್ವಾಮಿ

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ವಿಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದವು. ಪರಸ್ಪರ ವೈರತ್ವ ಮರೆತು ಲೋಕಸಭೆ ಚುನಾವಣೆಯಲ್ಲಿ ಒಂದಾಗುತ್ತಿವೆ ಎನ್ನಲಾಗಿತ್ತು. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡೇ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅದೇ ಕಾಂಗ್ರೆಸ್ ಕೈ ಹಿಡಿಯಲು ಮುಂದಾಗಿತ್ತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಆಮ್ ಆದ್ಮಿ ಮತ್ತೆ ಆಸಕ್ತಿ ತೋರಿತ್ತು.

ಇದನ್ನೂ ಓದಿ: ಐದನೇ ಹಂತದ ಚುನಾವಣೆ: 7 ರಾಜ್ಯಗಳ 51 ಕ್ಷೇತ್ರಗಳಿಗೆ ಇಂದು ಮತದಾನ; ಕಣದಲ್ಲಿ ಯಾರ‍್ಯಾರು?
Loading...

ಆದರೆ, ದೆಹಲಿ ಘಟಕದ ಕಾಂಗ್ರೆಸ್ ಮುಖ್ಯಸ್ಥರು ಮಾತ್ರ ಈ ಮೈತ್ರಿಗೆ ಅಡ್ಡಗಾಲಾದರು. ದಿನೇದಿನೇ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಆಮ್ ಆದ್ಮಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಏನು ಪ್ರಯೋಜನ ಎಂದು ತಿರಸ್ಕರಿಸಿದರು. ದೆಹಲಿಯಲ್ಲಷ್ಟೇ ಅಲ್ಲ ಪಂಜಾಬ್​ನಲ್ಲೂ ಮೈತ್ರಿಗೆ ಆಮ್ ಆದ್ಮಿ ಪಕ್ಷ ಒತ್ತಾಯಿಸಿತ್ತು ಎನ್ನುವ ಕಾರಣಕ್ಕೆ ಕಾಂಗ್ರೆಸ್​​ ಅಂತರ ಕಾಯ್ದುಕೊಂಡಿತು.

ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಬೇರೆಬೇರೆಯಾಗಿ ಸ್ಪರ್ಧಿಸಿದರೆ ಮತಗಳು ಹಂಚಿಹೋಗಿ ಬಿಜೆಪಿಗೆ ಲಾಭವಾಗುತ್ತದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿಗೆ ಬರುವ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿತ ಮತಗಳು ಹಂಚಿಹೋಗುವುದರಿಂದ ಬಿಜೆಪಿಗೆ ಅನುಕೂಲವಾಗಿ ಎಲ್ಲಾ 7 ಸ್ಥಾನಗಳೂ ಅದರ ಪಾಲಾಗಿಬಿಡುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಒಟ್ಟುಗೂಡಿ ಸ್ಪರ್ಧಿಸಿದರೆ ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದಿತ್ತು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿತ್ತು.

First published:May 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...