ಐದನೇ ಹಂತದ ಚುನಾವಣೆ: 7 ರಾಜ್ಯಗಳ 51 ಕ್ಷೇತ್ರಗಳಿಗೆ ಇಂದು ಮತದಾನ; ಕಣದಲ್ಲಿ ಯಾರ‍್ಯಾರು?

5th Phase Lok Sabha Election: ಒಟ್ಟು ದೇಶದ ಏಲು ರಾಜ್ಯಗಳಲ್ಲಿ 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಬಿಗಿ ಪೊಲೀಸ್​​ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Ganesh Nachikethu | news18
Updated:May 6, 2019, 8:46 AM IST
ಐದನೇ ಹಂತದ ಚುನಾವಣೆ: 7 ರಾಜ್ಯಗಳ 51 ಕ್ಷೇತ್ರಗಳಿಗೆ ಇಂದು ಮತದಾನ; ಕಣದಲ್ಲಿ ಯಾರ‍್ಯಾರು?
ಪ್ರಾತಿನಿಧಿಕ ಚಿತ್ರ
  • News18
  • Last Updated: May 6, 2019, 8:46 AM IST
  • Share this:
ಬೆಂಗಳೂರು(ಮೇ.06): ದೇಶದ 7 ರಾಜ್ಯಗಳ, 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ಆರಂಭವಾಗಿದೆ. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ನಡೆಯುತ್ತಿರುವ ಈ ಚುನಾವಣೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ ದಾಖಲಾಗುವ ಸಾಧ್ಯತೆಯಿದೆ.

ಉತ್ತರಪ್ರದೇಶದ 14 ಕ್ಷೇತ್ರ, ರಾಜಸ್ಥಾನದ 12, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ತಲಾ 7, ಬಿಹಾರದಲ್ಲಿನ 5, ಜಾರ್ಖಂಡ್​​ನಲ್ಲಿ 4, ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಹಾಗೂ ಲಡಾಖ್ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಸುಮಾರು 8.75 ಕೋಟಿ ಜನ ತಮ್ಮ ಮತದಾನ ಹಕ್ಕು ಚಲಾವಣೆ ಮಾಡಲಿದ್ದಾರೆ.

ಪ್ರತಿಷ್ಠೆ ಕಣವೆಂದೇ ಹೇಳಲಾಗುತ್ತಿರುವ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​​ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅಲ್ಲದೇ ರಾಯಬರೇಲಿ ಕ್ಷೇತ್ರದಿಂದ ಸಂಸತ್ತಿಗೆ ಪುನರ್ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಸೋನಿಯಾ ಗಾಂಧಿ ಹೊಂದಿದ್ದಾರೆ. ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಎದುರಾಳಿಯಾಗಿದ್ದಾರೆ.

ಇದನ್ನೂ ಓದಿ: ಅಮೇಥಿ, ರಾಯ್​​​ ಬರೇಲಿಯಲ್ಲಿ ಕಾಂಗ್ರೆಸ್​​ಗೆ ವೋಟ್​​ ಮಾಡಿ; ಎಸ್​​ಪಿ-ಬಿಎಸ್​​​ಪಿ ಕಾರ್ಯಕರ್ತರಿಗೆ ಮಾಯಾವತಿ ಕರೆ

ಇನ್ನು ಬಿಜೆಪಿಯ ರಾಜನಾಥ್ ಸಿಂಗ್ ಲಖನೌ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕೇಂದ್ರ ಸಚಿವರಾದ ರಾಜ್ಯ ವರ್ಧನ್ ಸಿಂಗ್ ರಾಥೋಡ್, ಅರ್ಜುನ್ ರಾಮ್ ಮೇಘ್ ವಾಲ್, ಮತ್ತು ಜಯಂತ್ ಸಿನ್ಹಾ ಕ್ರಮವಾಗಿ ಜೈಪುರ ಗ್ರಾಮಾಂತರ, ಬಿಕನೇರ್ ಹಾಗೂ ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಒಟ್ಟು ಏಳು ರಾಜ್ಯಗಳಲ್ಲಿ 674 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧರವಾಗಲಿದೆ.

ಒಟ್ಟು ದೇಶದ ಏಲು ರಾಜ್ಯಗಳಲ್ಲಿ 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಬಿಗಿ ಪೊಲೀಸ್​​ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಏಪ್ರಿಲ್ 1ರಿಂದ ಏಪ್ರಿಲ್ 29ರ ವರೆಗೆ ನಡೆದ ಮೊದಲ ನಾಲ್ಕು ಹಂತಗಳ ಚುನಾವಣೆಗಳಲ್ಲಿ ಶೇ 70ರಷ್ಟು ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಇಂದು ಐದನೇ ಹಂತ, ಮೇ 12 ರಂದು 6 ಹಾಗೂ ಮೇ 19 ರಂದು ಏಳನೇ ಹಂತದ ಚುನಾವಣೆ ನಡೆಯಲಿದೆ. ಮೇ 23 ರಂದು ಮತ ಎಣಿಕೆ ಘೋಷಣೆಯಾಗಲಿದೆ.ಇದನ್ನೂ ಓದಿ: 'ಮೋದಿ ಜಿ ನಿಮ್ಮ ಕರ್ಮ ನಿಮಗಾಗಿ ಕಾದಿದೆ'; ರಾಜೀವ್ ಗಾಂಧಿ ಕುರಿತ ಪ್ರಧಾನಿ ಹೇಳಿಕೆಗೆ ನಯವಾಗಿ ತಿರುಗೇಟು ನೀಡಿದ ರಾಹುಲ್

First published:May 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ