News18 India World Cup 2019

Lok Sabha Elections Exit Polls: ಇಲ್ಲಿದೆ 11 ಮತಗಟ್ಟೆ ಸಮೀಕ್ಷೆಗಳ ಪಟ್ಟಿ; ಎನ್​ಡಿಎ ಗೆಲುವು ಬಹುತೇಕ ಖಚಿತ?

General Elections 2019 Exit Poll: ಎಲ್ಲಾ ಸಮೀಕ್ಷೆಗಳ ಸರಾಸರಿ ತೆಗೆದುಕೊಂಡರೆ ಎನ್​ಡಿಎಗೆ 300 ಸ್ಥಾನಗಳು ಸಿಕ್ಕು ಬಹುಮತ ದೊರಕುವ ನಿರೀಕ್ಷೆ ಇದೆ.

Vijayasarthy SN | news18
Updated:May 19, 2019, 10:51 PM IST
Lok Sabha Elections Exit Polls: ಇಲ್ಲಿದೆ 11 ಮತಗಟ್ಟೆ ಸಮೀಕ್ಷೆಗಳ ಪಟ್ಟಿ; ಎನ್​ಡಿಎ ಗೆಲುವು ಬಹುತೇಕ ಖಚಿತ?
ಲೋಕಸಭಾ ಚುಣಾವಣೆ 2019
Vijayasarthy SN | news18
Updated: May 19, 2019, 10:51 PM IST
ಬೆಂಗಳೂರು(ಮೇ 19): ಏಳು ಹಂತಗಳ ಚುನಾವಣೆಯಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಉಳಿದ 542 ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದೆ. ಇವತ್ತು ಬಹುತೇಕ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮತಗಟ್ಟೆ ಸಮೀಕ್ಷೆ ನಡೆಸಿವೆ. ಈ ಸಮೀಕ್ಷೆಗಳೆಲ್ಲವೂ ಬಹುತೇಕ ಎನ್​ಡಿಎ ಮೈತ್ರಿಕೂಟ ಬಹುಮತ ಪಡೆಯಬಹುದೆಂದು ಅಂದಾಜಿಸಿವೆ. ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ IPSOS ಸಂಸ್ಥೆ ಜೊತೆ ನ್ಯೂಸ್18 ವಾಹಿನಿ ನಡೆಸಿದ ಸಮೀಕ್ಷೆ ಪ್ರಕಾರ ಎನ್​ಡಿಎ 336 ಸ್ಥಾನ ಗಳಿಸುವ ಸಾಧ್ಯತೆ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ನಿಖರವಾಗಿ ಅಂದಾಜು ಮಾಡಿದ್ದ ಚಾಣಕ್ಯ ಸಂಸ್ಥೆ ಈ ಬಾರಿ ಎನ್​ಡಿಎಗೆ 350 ಸ್ಥಾನ ನೀಡಿದೆ. ಇದು ಎಲ್ಲಾ ಸಮೀಕ್ಷೆಗಳಲ್ಲಿ ಎನ್​ಡಿಎಗೆ ಸಿಕ್ಕಿರುವ ಅತಿ ಹೆಚ್ಚು ಸ್ಥಾನವಾಗಿದೆ. ಎಕ್ಸಿಸ್ ಸಮೀಕ್ಷೆಯಲ್ಲೂ ಎನ್​ಡಿಎಗೆ 350 ಸೀಟು ಸಿಗುವ ಅಂದಾಜು ವ್ಯಕ್ತವಾಗಿದೆ. ಇನ್ನು, ನ್ಯೂಸ್ಎಕ್ಸ್ ಮತ್ತು ನೇತಾ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಲ್ಲಿ ಎನ್​ಡಿಎಗೆ 242 ಸೀಟು ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದು ಎನ್​​ಡಿಎಗೆ ಕನಿಷ್ಠವಾಗಿದೆ. ಅಂದರೆ, ವಿವಿಧ ಸಮೀಕ್ಷೆಗಳ ಪ್ರಕಾರ ಎನ್​ಡಿಎಗೆ 248ರಿಂದ 350 ಸ್ಥಾನಗಳು ಸಿಗುವ ಅಂದಾಜು ಇದೆ.

ಇಲ್ಲಿದೆ ವಿವಿಧ ಸಮೀಕ್ಷೆಗಳ ಪಟ್ಟಿ:





Loading...








































































ಸಮೀಕ್ಷೆಗಳುಎನ್​ಡಿಎ ಯುಪಿಎ ಇತರೆ
ನ್ಯೂಸ್18-IPSOS 336 82 124
IANS-ಸಿವೋಟರ್ 287 128 237
ನ್ಯೂಸ್24-ಚಾಣಕ್ಯ 350 95 97
ಟೈಮ್ಸ್ ನೌ-ವಿಎಂಆರ್ 306 132 104
ಇಂಡಿಯಾ ನ್ಯೂಸ್ 298 118 127
ಎಬಿಪಿ ನೀಲ್ಸನ್ 267 127 148
ನ್ಯೂಸ್ ಎಕ್ಸ್-ನೇತಾ 242 164 136
ನ್ಯೂಸ್ ನೇಷನ್ 290 126 138
ಇಂಡಿಯಾ ಟುಡೇ-ಆ್ಯಕ್ಸಿಸ್ 352 92 82
ರಿಪಬ್ಲಿಕ್-ಸಿವೋಟರ್ 287 128 127
ರಿಪಬ್ಲಿಕ್-ಜನ್​ ಕೀ ಬಾತ್ 305 124 113

ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಮತಗಟ್ಟೆ ಸಮೀಕ್ಷೆಗಳು ಹೆಚ್ಚು ನಿಖರವಾಗಿರುತ್ತವೆ. ಆದರೆ, ಹಿಂದಿನ ಕೆಲ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್​ಗಳ ಲೆಕ್ಕಾಚಾರವೇ ಉಲ್ಟಾ ಹೊಡೆದಿರುವ ಉದಾಹರಣೆಗಳುಂಟು. ಈ ಬಾರಿ ನಡೆದಿರುವ ಸಮೀಕ್ಷೆಗಳೆಲ್ಲವೂ ಎನ್​ಡಿಎಗೆ ಅತಿ ಹೆಚ್ಚು ಸ್ಥಾನಗಳು ಸಿಗಬಹುದೆಂದು ಒಮ್ಮತದಿಂದ ನಿರ್ಧರಿಸಿವೆ. ಇವೇನೇ ಅಂದಾಜು ಇದ್ದರೂ ಮೇ 23ರಂದು ಚುನಾವಣಾ ಆಯೋಗದಿಂದ ಅಧಿಕೃತವಾಗಿ ಪ್ರಕಟವಾಗುವ ಫಲಿತಾಂಶದಲ್ಲಿ ಜನಾದೇಶ ಏನೆಂಬುದು ತಿಳಿಯಲಿದೆ.

ನ್ಯೂಸ್18-IPSOS ಸಮೀಕ್ಷೆಯಂತೆ ವಿವಿಧ ರಾಜ್ಯಗಳಲ್ಲಿ ಹೀಗಿರಲಿದೆ ಸ್ಥಿತಿ:

ಕರ್ನಾಟಕ:
ಒಟ್ಟು ಕ್ಷೇತ್ರಗಳು: 28
ಬಿಜೆಪಿ: 21-23
ಕಾಂಗ್ರೆಸ್-ಜೆಡಿಎಸ್: 5-7

ಆಂಧ್ರ ಪ್ರದೇಶ:
ಒಟ್ಟು ಕ್ಷೇತ್ರಗಳು: 25
ಟಿಡಿಪಿ: 10-12
ವೈಎಸ್​ಆರ್​ಪಿ: 13-14
ಬಿಜೆಪಿ: 1
ಕಾಂಗ್ರೆಸ್: 0

ತೆಲಂಗಾಣ:
ಒಟ್ಟು ಕ್ಷೇತ್ರಗಳು: 17
ಟಿಆರ್​ಎಸ್: 11-13
ಬಿಜೆಪಿ: 1-2
ಕಾಂಗ್ರೆಸ್: 1-2
ಎಐಎಂಐಎಂ: 1

ತಮಿಳುನಾಡು:
ಒಟ್ಟು ಕ್ಷೇತ್ರಗಳು: 38
ಎಐಎಡಿಎಂಕೆ+: 14-16
ಡಿಎಂಕೆ+: 22-24

ಉತ್ತರಾಖಂಡ್:
ಒಟ್ಟು ಕ್ಷೇತ್ರಗಳು: 5
ಬಿಜೆಪಿ: 4-5
ಕಾಂಗ್ರೆಸ್: 0-1

ಕೇರಳ:
ಒಟ್ಟು ಕ್ಷೇತ್ರಗಳು: 20
ಎಲ್​ಡಿಎಫ್: 11-13(ಸಿಪಿಎಂ)
ಯುಡಿಎಫ್: 7-9
ಕಾಂಗ್ರೆಸ್: 4-6
ಐಯುಎಂಎಲ್: 1-3

ಗುಜರಾತ್:
ಒಟ್ಟು ಕ್ಷೇತ್ರಗಳು: 26
ಬಿಜೆಪಿ: 25-27
ಕಾಂಗ್ರೆಸ್: 0-1

ಛತ್ತೀಸ್​ಗಡ:
ಒಟ್ಟು ಕ್ಷೇತ್ರಗಳು: 11
ಬಿಜೆಪಿ: 7-9
ಕಾಂಗ್ರೆಸ್: 2-4

ಅಸ್ಸಾಮ್:
ಒಟ್ಟು ಕ್ಷೇತ್ರಗಳು: 14
ಎನ್​ಡಿಎ: 8-10
ಕಾಂಗ್ರೆಸ್: 2-4
ಎಐಯುಡಿಎಫ್: 2-3

ಒಡಿಶಾ:
ಒಟ್ಟು ಕ್ಷೇತ್ರಗಳು: 21
ಬಿಜೆಡಿ: 12-14
ಬಿಜೆಪಿ: 6-8
ಕಾಂಗ್ರೆಸ್: 1-2

ಮಹಾರಾಷ್ಟ್ರ:
ಒಟ್ಟು ಕ್ಷೇತ್ರಗಳು: 48
ಎನ್​ಡಿಎ: 42-45
ಯುಪಿಎ: 4-6

ರಾಜಸ್ಥಾನ:
ಒಟ್ಟು ಕ್ಷೇತ್ರಗಳು: 25
ಎನ್​ಡಿಎ: 22-24
ಕಾಂಗ್ರೆಸ್: 2-3

ಹರಿಯಾಣ:
ಒಟ್ಟು ಕ್ಷೇತ್ರಗಳು: 10
ಬಿಜೆಪಿ: 8-10
ಕಾಂಗ್ರೆಸ್: 2-4

ದೆಹಲಿ:
ಒಟ್ಟು ಕ್ಷೇತ್ರಗಳು: 7
ಬಿಜೆಪಿ: 6-7
ಕಾಂಗ್ರೆಸ್: 0-1
First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...