Lok Sabha Election Voting: 4ನೇ ಹಂತದ ಚುನಾವಣೆ – 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ

Fourth Phase of Voting for 17th Lok Sabha Elections 2019: ಲೋಕಸಭಾ ಚುನಾವಣೆಯ ಜೊತೆಗೆ ಇವತ್ತು ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾಗಲಿದೆ. ಹಾಗೆಯೇ, ನಾಲ್ಕು ರಾಜ್ಯಗಳ 6 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯೂ ಆಗಲಿದೆ.

Vijayasarthy SN | news18
Updated:April 29, 2019, 11:40 AM IST
Lok Sabha Election Voting: 4ನೇ ಹಂತದ ಚುನಾವಣೆ – 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ
ಸಾಂದರ್ಭಿಕ ಚಿತ್ರ.
  • News18
  • Last Updated: April 29, 2019, 11:40 AM IST
  • Share this:
ಬೆಂಗಳೂರು(ಏ. 29): ಏಳು ಹಂತಗಳ ಲೋಕಸಭೆ ಚುನಾವಣೆ ಅರ್ಧ ಹಾದಿಗೆ ಬಂದಿದ್ದು, ಇವತ್ತು 4ನೇ ಹಂತದ ಚುನಾವಣೆ ನಡೆಯಲಿದೆ. ಇಂದು ಒಟ್ಟು 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 6ಕ್ಕೆ ಮುಕ್ತಾಯವಾಗುತ್ತದೆ. ಸೂಕ್ಷ್ಮ ಭದ್ರತಾ ಸ್ಥಿತಿ ಇರುವ ಕೆಲ ಕ್ಷೇತ್ರಗಳಲ್ಲಿ ಮತದಾನ ಸಂಜೆ 4ಕ್ಕೇ ಅಂತ್ಯವಾಗಲಿದೆ.

ಇವತ್ತು ಬಿಹಾರ, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಧ್ಯ ಪದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ವಿವಿಧ ಕ್ಷೇತ್ರಗಳಲ್ಲಿ ಚುನಾವಣೆಯಾಗುತ್ತಿದೆ.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ಮತಗಟ್ಟೆ ಹುಡುಕುವುದು ಹೀಗೆ…

ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರವೊಂದರಲ್ಲೇ 3 ಹಂತಗಳಲ್ಲಿ ಮತದಾನವಾಗುತ್ತಿದ್ದು, ಇವತ್ತು ಅದರ 2ನೇ ಹಂತವಾಗಿದೆ. ಪ್ರತ್ಯೇಕತಾವಾದಿಗಳ ಬಿಸಿ ಇರುವ ಈ ಕ್ಷೇತ್ರದಲ್ಲಿ ಮತದಾನ ಸಂಜೆ 4ಕ್ಕೇ ಮುಕ್ತಾಯವಾಗುತ್ತದೆ. ಹಾಗೆಯೇ, ನಕ್ಸಲ್ ಪೀಡಿತ ಜಾರ್ಖಂಡ್​ನ ಛಾತ್ರ, ಲೋಹರ್​ದಾಗ ಮತ್ತು ಪಲಾಮು ಕ್ಷೇತ್ರಗಳಲ್ಲೂ ಸಂಜೆ 4ರವರೆಗೆ ಮಾತ್ರ ಮತದಾನದ ಅವಕಾಶವಿದೆ. ಮಧ್ಯ ಪ್ರದೇಶದ ಬಾಲಘಾಟ್​ನ ಕೆಲ ಸ್ಥಳಗಳಲ್ಲೂ ಮತದಾನ ಬೇಗ ಅಂತ್ಯವಾಗುತ್ತದೆ. ಇದು ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಕೈಗೊಂಡ ನಿರ್ಧಾರವಾಗಿದೆ.

ಮತದಾನವಾಗುತ್ತಿರುವ ಲೋಕಸಭಾ ಕ್ಷೇತ್ರಗಳು:

ಬಿಹಾರ: 5 ಕ್ಷೇತ್ರ
ದರ್ಭಾಂಗ, ಮುಂಗೇರ್, ಉರಿಯಾರ್​ಪುರ್, ಸಮಷ್ಟಿಪುರ್, ಬೇಗುಸರೈಜಮ್ಮು-ಕಾಶ್ಮೀರ: 1
ಅನಂತನಾಗ್

ಜಾರ್ಖಂಡ್: 3
ಛಾತ್ರ, ಲೋಹರ್ದಗಾ, ಪಲಮು

ಮಧ್ಯ ಪ್ರದೇಶ: 6
ಬಾಲಘಾಟ್, ಸಿದ್ಧಿ, ಶಹದೋಲ್, ಜಬಲ್​ಪುರ್, ಮಾಂಡ್ಲಾ, ಚಿಂದ್​ವಾರ.

ಮಹಾರಾಷ್ಟ್ರ: 17
ನಂದೂರ್​ಬರ್, ಧುಲೆ, ದಿಂಡೋರಿ, ನಾಶಿಕ್, ಪಾಲಗಡ್, ಭಿವಾಂಡಿ, ಕಲ್ಯಾಣ್, ಥಾಣೆ, ಮುಂಬೈ ನಾರ್ಥ್, ಮುಂಬೈ ನಾರ್ಥ್-ವೆಸ್ಟ್, ಮುಂಬೈ ನಾರ್ಥ್-ಈಸ್ಟ್, ಮುಂಬೈ ನಾರ್ಥ್-ಸೆಂಟ್ರಲ್, ಮುಂಬೈ ಸೌಥ್-ಸೆಂಟ್ರಲ್, ಮುಂಬೈ ಸೌಥ್, ಮಾವಲ್, ಶಿರೂರ್, ಶಿರಡಿ.

ಒಡಿಶಾ: 6
ಮಯೂರ್​ಭಂಜ್, ಬಾಲಸೂರ್, ಭದ್ರಕ್, ಜಾಜಪುರ್, ಕೇಂದ್ರಪಾರಾ, ಜಗತ್​ಸಿಂಗ್​ಪುರ್.

ರಾಜಸ್ಥಾನ: 13
ತೋನಕ್-ಸವಾಯ್ ಮಾಧೋಪುರ್, ಅಜ್ಮೇರ್, ಪಾಲಿ, ಜೋಧಪುರ್, ಬಾರ್ಮೆರ್, ಜಾಲೋರ್, ಉದಯಪುರ್, ಬನ್​ಸ್ವಾರಾ, ಚಿತ್ತೋಡಗಡ್, ರಾಜಸಮಂದ್, ಭಿಲ್ವಾರ, ಕೋಟಾ, ಜಲವಾರ್-ಬರನ್.

ಉತ್ತರ ಪ್ರದೇಶ: 13
ಶಹಜಾನ್​ಪುರ್, ಖೇರಿ, ಹರ್ದೋಯ್, ಮಿಸ್ರಿಖ್, ಉನ್ನಾವೋ, ಫಾರೂಖಾಬಾದ್, ಇಟಾವಾ, ಕನ್ನೋಜ್, ಕಾನಪುರ್, ಅಕ್ಬರ್​ಪುರ್, ಜಲಾಂವ್, ಝಾನ್ಸಿ, ಹಮೀರ್​ಪುರ್.

ಪಶ್ಚಿಮ ಬಂಗಾಳ: 8
ಬಹರಾಮ್​ಪುರ್, ಕೃಷ್ಣನಗರ್, ರಾಣಾಘಟ್, ಬರ್ಧಮಾನ್ ಪುರ್ಬ, ಬರ್ಧಮಾನ್ ದುರ್ಗಾಪುರ್, ಅಸಾನ್ಸೋಲ್, ಬೋಲ್​ಪುರ್, ಬೀರ್​ಭುಮ್.

ಇದನ್ನೂ ಓದಿ: ಪ್ರಧಾನಿ ಹುದ್ದೆ ರೇಸ್​ನಲ್ಲಿ​ ರಾಹುಲ್ ಗಾಂಧಿ ಇಲ್ಲವೇ ಇಲ್ಲ; ಕುತೂಹಲ ಸೃಷ್ಟಿಸಿದ ಶರದ್ ಪವಾರ್ ಹೇಳಿಕೆ

ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆ:

ಇವಲ್ಲದೆ, ಒಡಿಶಾದಲ್ಲಿ ಚುನಾವಣೆ ಎದುರಿಸುತ್ತಿರುವ 6 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 42 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಮತದಾನ ಆಗುತ್ತಿದೆ. ಇದು ಒಡಿಶಾ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನವೂ ಹೌದು. ಇವತ್ತಿಗೆ ಒಡಿಶಾ ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆ ಮುಕ್ತಾಯಗೊಂಡಂತಾಗುತ್ತದೆ.

ಇವತ್ತು, ನಾಲ್ಕು ರಾಜ್ಯಗಳ 6 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯೂ ನಡೆಯುತ್ತಿದೆ. ಗುಜರಾತ್​ನ 3, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಒಂದೊಂದು ಕ್ಷೇತ್ರಗಳಿಗೆ ಉಪಚುನಾವಣೆಯಾಗುತ್ತಿದೆ.

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada
First published: April 29, 2019, 6:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading