Locust Attack - ಕಳೆದ ಮೂರು ದಶಕದಲ್ಲೇ ಅತ್ಯಂತ ಭೀಕರ ಮಿಡತೆ ದಾಳಿಗೆ ನಡುಗುತ್ತಿರುವ ಉತ್ತರ ಭಾರತ
ಮಿಡತೆ ದಾಳಿಗಳು ಹೊಸದೇನಲ್ಲ. ಈ ಬಾರಿ ಬಂದಿರುವ ಮಿಡತೆಗಳು ದೊಡ್ಡ ಪ್ರಮಾಣದಲ್ಲಷ್ಟೇ ಅಲ್ಲ, ಉಗ್ರ ಸ್ವರೂಪ ಕೂಡ ಹೊಂದಿವೆ. ಹಿಂದೆಲ್ಲಾ ಮಿಡತೆ ದಾಳಿಯಾದಾಗ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲೇ ಅವುಗಳನ್ನು ನಿಯಂತ್ರಣಕ್ಕೆ ತರಲಾಗುತ್ತಿತ್ತು.

ಮಿಡತೆಗಳ ಗುಂಪು
- News18
- Last Updated: May 28, 2020, 9:28 AM IST
ನವದೆಹಲಿ(ಮೇ 28): ರೈತರ ಪಾಲಿಗೆ ಸಿಂಹಸ್ವಪ್ನ ಎನಿಸಿರುವ ಮಿಡತೆಗಳು ಉತ್ತರ ಭಾರತದಲ್ಲಿ ಆರ್ಭಟ ಮಾಡುತ್ತಿವೆ. ರಾಜಸ್ಥಾನ, ಗುಜರಾತ್, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹಸಿರು ಹೊಲವನ್ನು ತಿಂದುಂಡು ಈ ಮಿಡತೆಗಳು(Locusts) ದಾಂಗುಡಿ ಇಡುತ್ತಿವೆ. ದಕ್ಷಿಣದತ್ತ ಮುಖ ಮಾಡಿರುವ ಈ ಮಿಡತೆಗಳು ಮಹಾರಾಷ್ಟ್ರ ಹಾಗೂ ಆ ಮೂಲಕ ಕರ್ನಾಟಕಕ್ಕೂ ಪ್ರವೇಶ ಕೊಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಳೆದ 26 ವರ್ಷಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಿಡತೆಗಳ ದಾಳಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ. ಪಾಕಿಸ್ತಾನದ ಮೂಲಕ ಭಾರತವನ್ನು ಇವು ಪ್ರವೇಶ ಮಾಡುವ ಮುನ್ಸೂಚನೆ ಇದ್ದದ್ದರಿಂದ ಹಲವು ಕಡೆ ಸರ್ಕಾರ ಕೆಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಮಿಡತೆಗಳನ್ನ ನಾಶ ಮಾಡಲು ಡ್ರೋನ್ಗಳ ಮೂಲಕ ಕೀಟನಾಶಕಗಳನ್ನ ಸಿಂಪಡಿಸುವ ಪ್ರಯತ್ನವಾಗುತ್ತಿದೆ. ರಾಜಸ್ಥಾನದ 21 ಜಿಲ್ಲೆಗಳು, ಮಧ್ಯಪ್ರದೇಶದ 18 ಜಿಲ್ಲೆಗಳಲ್ಲಿ ಮಿಡತೆ ಕಾಟ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈವರೆಗೆ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಸುಮಾರು 47,308 ಹೆಕ್ಟೇರ್ ಪ್ರದೇಶದ ಬೆಳೆಯನ್ನು ಮಿಡತೆ ದಾಳಿಯಿಂದ ಸಂರಕ್ಷಿಸಲಾಗಿದೆ. ಇದನ್ನೂ ಓದಿ: Viral Video: ಸತ್ತ ಅಮ್ಮನನ್ನು ಎಬ್ಬಿಸಲು ಮಗುವಿನ ಪರದಾಟ; ಟ್ವಿಟ್ಟರ್ನಲ್ಲಿ ಮನಕಲಕುವ ವಿಡಿಯೋ ವೈರಲ್
ಮಿಡತೆ ದಾಳಿಗಳು ಹೊಸದೇನಲ್ಲ. ಈ ಬಾರಿ ಬಂದಿರುವ ಮಿಡತೆಗಳು ದೊಡ್ಡ ಪ್ರಮಾಣದಲ್ಲಷ್ಟೇ ಅಲ್ಲ, ಉಗ್ರ ಸ್ವರೂಪ ಕೂಡ ಹೊಂದಿವೆ. ಹಿಂದೆಲ್ಲಾ ಮಿಡತೆ ದಾಳಿಯಾದಾಗ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲೇ ಅವುಗಳನ್ನು ನಿಯಂತ್ರಣಕ್ಕೆ ತರಲಾಗುತ್ತಿತ್ತು. ಆದರೆ, ಈ ಬಾರಿ ರೈತರ ಬೆಳೆಗಳೆಲ್ಲಾ ಕಟಾವ್ ಆಗಿದ್ದು ಮಿಡತೆಗಳಿಗೆ ತಿನ್ನಲು ಸಾಕಷ್ಟು ಹಸಿರು ಸಿಕ್ಕುತ್ತಿಲ್ಲ. ಹೀಗಾಗಿ, ಉಗ್ರ ಸ್ವರೂಪದಲ್ಲಿ ಈ ಮಿಡತೆ ಪಡೆಗಳು ವಿವಿಧ ರಾಜ್ಯಗಳಿಗೆ ಮುನ್ನುಗ್ಗುತ್ತಿವೆ.
ಉತ್ತರ ಪ್ರದೇಶದ ಜಾನ್ಸಿಗೆ ನಿನ್ನೆ ಬುಧವಾರ ಪ್ರವೇಶ ಮಾಡಿರುವ ಮಿಡತೆ ಪಡೆಯ ವಿಸ್ತಾರ ಬರೋಬ್ಬರಿ ಒಂದು ಚದರ ಕಿಲೋಮೀಟರ್ ಇದೆ. ಅಂದರೆ, ಒಂದು ಚದರ ಕಿಮೀಯಲ್ಲಿ ಬರೋಬ್ಬರಿ 4 ಕೋಟಿ ಮಿಡತೆಗಳಿರುತ್ತವೆ.
ಮಹಾರಾಷ್ಟ್ರದಲ್ಲೂ ಕೆಲ ಮಿಡತೆ ಗುಂಪುಗಳು ಆರ್ಭಟ ಮಾಡುತ್ತಿವೆ. ಆದರೆ, ಕರ್ನಾಟಕವನ್ನು ಇವು ಇನ್ನೂ ಪ್ರವೇಶ ಮಾಡಿಲ್ಲ. ಈ ಮಿಡತೆಗಳು ಯಾವ ದಿಕ್ಕಿಗೆ ತಿರುಗಿಕೊಳ್ಳುತ್ತವೆ; ಯಾವ್ಯಾವ ಕಡೆ ಹೋಗುತ್ತವೆ ಎಂಬುದನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ: HAL Tejas: ಎರಡನೇ ಸ್ಕ್ವಾಡ್ರನ್ ಅಭಿವೃದ್ಧಿಪಡಿಸಿದ ಭಾರತೀಯ ಸೇನೆ; ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಮಹತ್ವದ ಅಂಶಗಳುಯಾವುದಿವು ಮಿಡತೆಗಳು?
ಮಿಡತೆಗಳು ಆಫ್ರಿಕಾ ಮತ್ತು ಏಷ್ಯನ್ ಮರುಭೂಮಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದರೆ ಇವುಗಳ ಸಂತಾನೋತ್ಪತ್ತಿ ಹೆಚ್ಚಾಗುವುದಷ್ಟೇ ಅಲ್ಲದೆ, ಉಗ್ರ ಸ್ವಭಾವ ಕೂಡ ಹೊಂದುತ್ತವೆ. ಹೆಚ್ಚೆಚ್ಚು ಆಹಾರ ತಿನ್ನುವ ಬಕಾಸುರಗಳಾಗುತ್ತವೆ. ಹಸಿವು ಇಂಗಿಸಿಕೊಳ್ಳಲು ಹಸಿರು ಹುಡುಕಿಕೊಂಡು ಹೋಗುತ್ತವೆ. ಮರುಭೂಮಿಯಿಂದ ಇವು ಹಸಿರುಭೂಮಿಗೆ ಹಾರಿ ಹೋಗುತ್ತವೆ. ರೈತರ ಹೊಲಗಳಲ್ಲಿರುವ ಬೆಳೆಗಳೇ ಇವುಗಳಿಗೆ ಮೆಚ್ಚಿನ ಆಹಾರ. ರೈತರ ಹೊಲಗಳಿಗೆ ಮಿಡತೆ ಗುಂಪು ದಾಳಿ ಇಟ್ಟರೆ ನಿಮಿಷಮಾತ್ರದಲ್ಲಿ ಇಡೀ ಬೆಳೆ ನಾಶವಾಗಿ ಹೊಲ ಬೋಳುಬೋಳಾಗಿಬಿಡುತ್ತದೆ. ಅಷ್ಟರಮಟ್ಟಿಗೆ ಈ ಮಿಡತೆಗಳು ಅಪಾಯಕಾರಿ.
ಕಳೆದ 26 ವರ್ಷಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಿಡತೆಗಳ ದಾಳಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ. ಪಾಕಿಸ್ತಾನದ ಮೂಲಕ ಭಾರತವನ್ನು ಇವು ಪ್ರವೇಶ ಮಾಡುವ ಮುನ್ಸೂಚನೆ ಇದ್ದದ್ದರಿಂದ ಹಲವು ಕಡೆ ಸರ್ಕಾರ ಕೆಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಮಿಡತೆಗಳನ್ನ ನಾಶ ಮಾಡಲು ಡ್ರೋನ್ಗಳ ಮೂಲಕ ಕೀಟನಾಶಕಗಳನ್ನ ಸಿಂಪಡಿಸುವ ಪ್ರಯತ್ನವಾಗುತ್ತಿದೆ. ರಾಜಸ್ಥಾನದ 21 ಜಿಲ್ಲೆಗಳು, ಮಧ್ಯಪ್ರದೇಶದ 18 ಜಿಲ್ಲೆಗಳಲ್ಲಿ ಮಿಡತೆ ಕಾಟ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈವರೆಗೆ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಸುಮಾರು 47,308 ಹೆಕ್ಟೇರ್ ಪ್ರದೇಶದ ಬೆಳೆಯನ್ನು ಮಿಡತೆ ದಾಳಿಯಿಂದ ಸಂರಕ್ಷಿಸಲಾಗಿದೆ.