ಬಿಹಾರ: ಕುಡಿತ ಮನೆ ಕೆಡಿಸಿತು ಅಂತಾರೆ. ಇಲ್ಲಿ ಕುಡಿತ ಸಾವಿರಾರು ಪ್ರಯಾಣಿಕರ (Passengers) ಪ್ರಯಾಣವನ್ನೇ (Journey) ಕೆಡಿಸಿದೆ. ಭಾರತೀಯ ರೈಲ್ವೆ ಇಲಾಖೆಯ (Indian Railway Department) ಕುಡುಕ ರೈಲು ಚಾಲಕನೊಬ್ಬ (Loco Pilot) ಮಾಡಿದ ಅವಾಂತರದಿಂದ ಬಿಹಾರದ (Bihar) ಸಾವಿರಾರು ರೈಲ್ವೆ ಪ್ರಯಾಣಿಕರು ಪರದಾಡುವಂತೆ ಆಯಿತು. ಹಿಂದಿನ ಸ್ಟೇಷನ್ನಿಂದ (Station) ಹೊರಟು, ಮುಂದಿನ ಸ್ಟೇಷನ್ ತಲುಪದೇ ಗಂಟೆ ಗಟ್ಟೆಲೆ ಜನರು ದಾರಿ ಮಧ್ಯೆ, ಹಳಿ ಮೇಲೆಯೇ ನಿಲ್ಲುವಂತಾಯಿತು. ಈ ಸುದ್ದಿಯೀಗ (News) ವೈರಲ್ (Viral) ಆಗಿದು, ರೈಲ್ವೆ ಇಲಾಖೆ ಬೇಜವಾಬ್ದಾರಿ, ಲೋಕೋ ಪೈಲಟ್ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಬಿಹಾರದಲ್ಲಿ ನಡೆಯಿತು ವಿಚಿತ್ರ ಘಟನೆ
ಬಿಹಾರದ ರೈಲ್ವೆ ಇಲಾಖೆಯ ಸಮಷ್ಟಿಪುರ ವಿಭಾಗದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಸಮಷ್ಟಿಪುರ-ಸಹರ್ಸಾ ಮೆಮು ವಿಶೇಷ ರೈಲು ನಡೆಸುತ್ತಿದ್ದ ಲೋಕೋ ಪೈಲಟ್ ಒಬ್ಬ, ಮದ್ಯಪಾನಕ್ಕಾಗಿ ರೈಲು ನಿಲ್ಲಿಸಿ ಹೋದ ಘಟನೆ ನಡೆದಿದೆ. ಲೋಕೋ ಪೈಲಟ್ ಹಸನ್ಪುರ ರೋಡ್ ನಿಲ್ದಾಣದಿಂದ ಸ್ವಲ್ಪ ಮುಂದೆ ಹಳಿಗಳ ಮಧ್ಯೆ ರೈಲನ್ನು ನಿಲ್ಲಿಸಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಸಹಾಯಕ ಲೋಕೋ ಪೈಲಟ್ ಕರಮ್ವೀರ್ ಪ್ರಸಾದ್ ಯಾದವ್ ಎಂಬಾತನನ್ನು ಅಮಾನತು ಮಾಡಿದ್ದು, ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಒಂದು ಗಂಟೆ ರೈಲು ನಿಲ್ಲಿಸಿ ಹೋದ ಲೋಕೋ ಪೈಲಟ್
ಪೂರ್ವ ಕೇಂದ್ರ ರೈಲ್ವೆಯ ಸಮಷ್ಟಿಪುರ ವಿಭಾಗದಲ್ಲಿ ಸಹಾಯಕ ಲೋಕೋ ಪೈಲಟ್ ಕರಮ್ವೀರ್ ಪ್ರಸಾದ್ ಯಾದವ್ ಮದ್ಯ ಖರೀದಿಸುವುದಕ್ಕಾಗಿ ರೈಲು ನಿಲ್ಲಿಸಿ ತೆರಳಿದ್ದಾನೆ. ಸುಮಾರು ಒಂದು ಗಂಟೆ ಕಾಲ ಈ ರೈಲು ಅಲ್ಲಿಯೇ ನಿಂತಿತ್ತು. ಇದರಿಂದ ಬೇರೆ ರೈಲುಗಳ ಸಂಚಾರಕ್ಕೂ ಅಡ್ಡಿಯಾಗಿತ್ತು.
ಕೊನೆಗೆ ಅದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮತ್ತೊಬ್ಬ ಸಹಾಯಕ ಲೋಕೋ ಪೈಲಟ್ ಪೈಲಟ್ ರಿಷಿ ರಾಜ್ ಕುಮಾರ್ ಅವರಿಗೆ ಮನವಿ ಮಾಡಿದ ಸ್ಟೇಷನ್ ಮಾಸ್ಟರ್ ಮನೋಜ್ ಕುಮಾರ್ ಜೌಧರಿ, ರೈಲನ್ನು ಅದರ ಕೊನೆಯ ನಿಲ್ದಾಣದತ್ತ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Poison Whiskey: ವಿಸ್ಕಿ ಕುಡಿಸಿ 4 ವರ್ಷದ ಮಗುವನ್ನೇ ಕೊಂದ ಅಮ್ಮ, ಅಜ್ಜಿ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ
ಒಂದು ಗಂಟೆ ಬಳಿಕ ಬಾಟಲಿ ಹಿಡಿದು ಬಂದ ಭೂಪ
ಹೀಗೆ ರೈಲನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋದ ಲೋಕೋ ಪೈಲಟ್ ಕರಮ್ವೀರ್ ಪ್ರಸಾದ್ ಯಾದವ್ ಬರೋಬ್ಬರಿ 1 ಗಂಟೆಗಳ ಬಳಿಕ ತಿರುಗಿ ಬಂದಿದ್ದಾನೆ. "ಒಂದು ಗಂಟೆಯ ಬಳಿಕ ಆತ ಒಂದು ಬಾಟಲಿ ಮದ್ಯ ಹಿಡಿದು ತೂರಾಡುತ್ತಾ ಬಂದಿದ್ದ. ಆತ ರೈಲು ಚಲಾಯಿಸುವ ಸ್ಥಿತಿಯಲ್ಲಿ ಇರಲಿಲ್ಲ.
ಆತನ ಬಳಿ ಇದ್ದ, ಸ್ವಲ್ಪ ಖಾಲಿಯಾಗಿದ್ದ ಮದ್ಯದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ” ಅಂತ ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ
ರೈಲು ವಿಳಂಬದಿಂದ ಪ್ರಯಾಣಿಕರು ಕಂಗೆಟ್ಟಿದ್ದಾರೆ. ರೈಲು ನಿಲ್ಲಿಸಿ ಹೋದ ಲೋಕೋ ಪೈಲಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೊನೆಗೆ ತಾಳ್ಮೆ ಕಳೆದುಕೊಂಡು ಕೆಲವರು ರೈಲಿನ ಮೇಲೆ ಕಲ್ಲು ಎಸೆದಿದ್ದಾರೆ. 6 ಗಂಟೆಗೆ ಹೊರಟಿದ್ದ ರೈಲು, ಚಾಲಕನಿಂದಾಗಿ ಒಂದು ಗಂಟೆ ತಡವಾಗಿ ಅಂದರೆ 7 ಗಂಟೆಗೆ ಹೊರಟಿತು.
ಇದನ್ನೂ ಓದಿ: Rameswar Teli: ಕೇಂದ್ರ ಸಚಿವರ ಕಾರ್ಯಕ್ರಮದ ವೇದಿಕೆಯಲ್ಲಿಯೇ ನೀಲಿ ಚಿತ್ರ ಪ್ರಸಾರ!
ಕುಡುಕು ಲೋಕೋ ಪೈಲಟ್ ಅಮಾನತು
ಕುಡುಕ ಲೋಕೋ ಪೈಲಟ್ ಕರಮ್ವೀರ್ ವಿರುದ್ಧ ಬಿಹಾರದ ರಾಜ್ಯದ ಮದ್ಯ ನಿಷೇಧ ಮತ್ತು ಅಬಕಾರಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆತನನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ