ಗೋವುಗಳನ್ನು ಉಪವಾಸವಿಟ್ಟು ಕೂಡಿ ಹಾಕಿದರು; ಹಸುಗಳ ಸಾವಿಗೆ ಕಾರಣರಾದ ರೈತರು!

ಒಟ್ಟು 8 ಹಸುಗಳಲ್ಲಿ 4 ಹಸುಗಳು ಹಸಿವಿನಿಂದ ಮೃತಪಟ್ಟಿವೆ. ಇನ್ನುಳಿದ ಹಸುಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latha CG | news18
Updated:June 17, 2019, 1:20 PM IST
ಗೋವುಗಳನ್ನು ಉಪವಾಸವಿಟ್ಟು ಕೂಡಿ ಹಾಕಿದರು; ಹಸುಗಳ ಸಾವಿಗೆ ಕಾರಣರಾದ ರೈತರು!
ಸಾಂದರ್ಭಿಕ ಚಿತ್ರ
  • News18
  • Last Updated: June 17, 2019, 1:20 PM IST
  • Share this:
ಮುಜಾಫರ್​ನಗರ,(ಜೂ.17):  ದೇಶದ ಬೆನ್ನೆಲುಬು ರೈತರು. ರೈತರಿಗೆ ಗೋವುಗಳು ಬೆನ್ನೆಲುಬು. ಹೀಗಾಗಿ ರೈತರು ಗೋವನ್ನು ದೇವರ ರೀತಿಯಲ್ಲಿ ಕಾಣುತ್ತಾರೆ. ಆದರೆ,  ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ರೈತರು ಮಾತ್ರ ಇದಕ್ಕೆ ಅಪವಾದ.  ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಬೀಡಾಡಿ ಹಸುಗಳನ್ನೇ ಕೊಂದು ಕ್ರೂರ ಕೃತ್ಯ ಎಸಗಿದ್ದಾರೆ.

ಹೌದು, ಬೀಡಾಡಿ ಹಸುಗಳು ತಾವು ಬೆಳೆದ ಬೆಳೆಗಳನ್ನು ತಿಂದು ನಾಶ ಮಾಡುತ್ತವೆ ಎಂದು ಅವುಗಳನ್ನು ಶಾಲೆಯೊಳಗೆ ಕೂಡಿಹಾಕಿ ನಿಷ್ಕರುಣೆ ತೋರಿದ್ದಾರೆ. ಆ ಹಸುಗಳು ತಿನ್ನಲು ಮೇವು ಇಲ್ಲದೇ, ಹಸಿವಿನಿಂದ ಬಳಲಿ ಸಾವನ್ನಪ್ಪಿವೆ.

ಇದನ್ನೂ ಓದಿ: ಬಿಹಾರದಲ್ಲಿ ಬಿಸಿಗಾಳಿಗೆ ತತ್ತರಿಸಿದ ಜನ: ಒಟ್ಟು 44 ಮಂದಿ ಬಲಿ; ಮುಂದುವರಿದ ಚಿಕಿತ್ಸೆ

ಕರೊಂಡಾ ಹತ್ತಿ ಎಂಬ ಗ್ರಾಮದ ಕೆಲವು ರೈತರು ಸ್ವಲ್ಪ ದಿನಗಳ ಹಿಂದೆ ಹಸುಗಳ ಹಾವಳಿ ತಡೆಯಲಾಗದೆ, 8 ಬೀಡಾಡಿ ಹಸುಗಳನ್ನು ಶಾಲೆಯೊಳಗೆ ಕೂಡಿಹಾಕಿದ್ದಾರೆ. ಆದರೆ ಅವುಗಳಲ್ಲಿ 4 ಹಸುಗಳು ತೀವ್ರ ಹಸಿವು ತಾಳಲಾರದೆ ಬಳಲಿ ಸಾವನ್ನಪ್ಪಿವೆ.

ಬೇಸಿಗೆ ರಜೆ ಇದ್ದ ಕಾರಣ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿತ್ತು. ಈ ವೇಳೆ ರೈತರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಖಾಲಿ ಇದ್ದ ಶಾಲೆಯ ಒಳಾಂಗಣದಲ್ಲಿ ಹಸುಗಳನ್ನು ಬಿಟ್ಟು ಬೀಗ ಜಡಿದಿದ್ದಾರೆ. ಒಟ್ಟು 8 ಹಸುಗಳಲ್ಲಿ 4 ಹಸುಗಳು ಹಸಿವಿನಿಂದ ಮೃತಪಟ್ಟಿವೆ. ಇನ್ನುಳಿದ ಹಸುಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯ ಎಸಗಿರುವವರು ಯಾರೆಂದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ