ಹತ್ತಿ ಮಾರಾಟ ಮಾಡಲು ಯಾದಿಗಿರಿ ರೈತರ ಪರದಾಟ; ಸಾಲುತ್ತಿಲ್ಲ ಮಾರಾಟ ಕೇಂದ್ರಗಳ ಸಂಖ್ಯೆ

ಜಿಲ್ಲಾಧಿಕಾರಿ ಅವರು ರೈತರ ಸಂಕಷ್ಟ ಅರಿತು, ಯಾದಗಿರಿ ಜಿಲ್ಲೆಯ ಶಹಾಪುರನ ಮದ್ರಿಕಿ ಸಮೀಪ ಖಾಸಗಿ ಕಾಟನ್ ಮೀಲ್ ನಲ್ಲಿ ಭಾರತೀಯ ಹತ್ತಿ ನಿಗಮದ ಮೂಲಕ   ಖರೀದಿ ಕೇಂದ್ರ ಆರಂಭ ಮಾಡಿದರು.ಇದರಿಂದ ರೈತರಿಗೆ ಅನುಕೂಲವಾಗಿದೆ. ಆದರೆ,ನಿತ್ಯವು 20 ರೈತರಿಂದ ಅಂದರೆ ಪ್ರತಿ ರೈತರಿಂದ 40 ಕ್ವಿಂಟಾಲ್ ಹತ್ತಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡಲಾಗುತ್ತಿದೆ.

news18-kannada
Updated:May 4, 2020, 1:27 PM IST
ಹತ್ತಿ ಮಾರಾಟ ಮಾಡಲು ಯಾದಿಗಿರಿ ರೈತರ ಪರದಾಟ; ಸಾಲುತ್ತಿಲ್ಲ ಮಾರಾಟ ಕೇಂದ್ರಗಳ ಸಂಖ್ಯೆ
ಯಾದಗಿರಿ ಹತ್ತಿ ಕೇಂದ್ರ
  • Share this:
ಯಾದಗಿರಿ (ಮೇ 4): ಲಾಕ್ ಡೌನ್ ನಡುವೆ ಜಿಲ್ಲೆಯಲ್ಲಿ ಭಾರತೀಯ ಹತ್ತಿ ನಿಗಮದಿಂದ ಹತ್ತಿ ಖರೀದಿ ಕೇಂದ್ರ ಆರಂಭ ಮಾಡಿ ಹತ್ತಿ ಖರೀದಿ ಮಾಡಲಾಗುತ್ತಿದ್ದು ಇದು ಅನ್ನದಾತರಿಗೆ ಬಹಳಷ್ಟು ಅನುಕೂಲವಾಗಿದೆ. ಆದರೆ,ಭಾರತೀಯ ಹತ್ತಿ ನಿಗಮವು( ಸಿಸಿಐ) ಕಡಿಮೆ ಪ್ರಮಾಣದಲ್ಲಿ ರೈತರಿಂದ ಹತ್ತಿ ಖರೀದಿ ಮಾಡುತ್ತಿರುವದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಅಕ್ಟೋಬರ್ ನಿಂದ ಫೆಬ್ರವರಿ 14 ರ ವರಗೆ ಭಾರತೀಯ ಹತ್ತಿ ನಿಗಮವು ಹತ್ತಿ ಖರೀದಿ ಕೇಂದ್ರದ  ಮೂಲಕ 2933 ರೈತರಿಂದ 128000 ಕ್ವಿಂಟಾಲ್ ಹತ್ತಿ ಖರೀದಿ ಮಾಡಿತ್ತು. ಅಂದಾಜು 57 ಕೋಟಿ ರೂ ರೈತರಿಗೆ ಕೂಡ ಹಣ ಪಾವತಿ ಮಾಡಲಾಗಿತ್ತು. ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಯೋಜನೆಯಡಿ ಗ್ರೇಡ್ -1 ಹತ್ತಿಗೆ ಪ್ರತಿ ಕ್ವಿಂಟಾಲ್​ಗೆ 5550 ರೂ ಹಾಗೂ ‌ಗ್ರೇಡ್ -2 ಹತ್ತಿಗೆ 5225 ರೂ ನಂತೆ ಪ್ರತಿ ಕ್ವಿಂಟಾಲ್ ನಂತೆ ಹತ್ತಿ ಖರೀದಿ ಮಾಡಲಾಗಿತ್ತು. ನಂತರ ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬಾರದ ಕಾರಣ ಖರೀದಿ ಕೇಂದ್ರ ಸ್ಥಗೀತಗೊಳಿಸಲಾಗಿತ್ತು.

ಲಾಕ್ ಡೌನ್ ನಡುವೆ ಹತ್ತಿ ಮಾರಾಟ ಮಾಡಲು ಪರದಾಟ..!:

ಬಹಳಷ್ಟು ರೈತರು ಹತ್ತಿ ಮಾರಾಟ ಮಾಡಿರಲಿಲ್ಲ. ಮತ್ತೆ ಭಾರತೀಯ ಹತ್ತಿ ನಿಗಮದ ಮೂಲಕ ಹತ್ತಿ ಖರೀದಿ ಮಾಡಬೇಕೆಂದು ಹೆಚ್ಚಿನ ಪ್ರಮಾಣದಲ್ಲಿ ರೈತರು ಒತ್ತಾಯ ಮಾಡಿದರು. ಖುದ್ದು ‌ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅವರ ಗಮನಕ್ಕೆ ತಂದಿದ್ದರು. ನಂತರ ಜಿಲ್ಲಾಧಿಕಾರಿ ಅವರು ರೈತರ ಸಂಕಷ್ಟ ಅರಿತು, ಯಾದಗಿರಿ ಜಿಲ್ಲೆಯ ಶಹಾಪುರನ ಮದ್ರಿಕಿ ಸಮೀಪ ಖಾಸಗಿ ಕಾಟನ್ ಮೀಲ್ ನಲ್ಲಿ ಭಾರತೀಯ ಹತ್ತಿ ನಿಗಮದ ಮೂಲಕ   ಖರೀದಿ ಕೇಂದ್ರ ಆರಂಭ ಮಾಡಿದರು.ಇದರಿಂದ ರೈತರಿಗೆ ಅನುಕೂಲವಾಗಿದೆ. ಆದರೆ,ನಿತ್ಯವು 20 ರೈತರಿಂದ ಅಂದರೆ ಪ್ರತಿ ರೈತರಿಂದ 40 ಕ್ವಿಂಟಾಲ್ ಹತ್ತಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಹೆಚ್ಚು ರೈತರು ಈಗಾಗಲೇ ಶಹಾಪುರನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹತ್ತಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡು ದೃಢೀಕರಣ ‌ಪತ್ರ ಪಡೆಯುತ್ತಿದ್ದಾರೆ.

ಇದನ್ನೂ ಓದಿ:  ಜಿಯೋದ ಶೇ.1 ಪಾಲನ್ನು ಖರೀದಿಸಿದ ಸಿಲ್ವರ್ ಲೇಕ್; ಏನಿದು ಒಪ್ಪಂದ?

ಎಪಿಎಂಸಿಯಲ್ಲಿ ಕೂಡ ಅಗತ್ಯ ಸಿಬ್ಬಂದಿಗಳ ಕೊರತೆ ಹಿನ್ನಲೆ ರೈತರ ನೋಂದಣಿ ಕಾರ್ಯ ವೇಗವಾಗಿ ಆಗುತ್ತಿಲ್ಲ. ಈಗಾಗಲೇ ಮಳೆ ಬರುತಿದ್ದು ರೈತರು ಬಿತ್ತನೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.ನಿತ್ಯವು ಕಡಿಮೆ ಪ್ರಮಾಣದಲ್ಲಿ ರೈತರಿಂದ ಹತ್ತಿ ಖರೀದಿ ಮಾಡಿದರೆ ಜೂಲೈ ವರಗೆ ಹತ್ತಿ ಮಾರಾಟ ಮಾಡಬೇಕಾದ ದುಸ್ಥಿತಿ ತಲೆ ದೊರಲಿದೆ.ಬೇಗ ಹತ್ತಿ ಮಾರಾಟ ಮಾಡಿದರೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಹಣ ಅವಶ್ಯವಾಗುತ್ತದೆ ವಿಳಂಬ ಮಾಡಿದರೆ ಕೃಷಿ ಕೆಲಸದ ಜೊತೆ ರೈತರು ಹತ್ತಿ ಮಾರಾಟ ಮಾಡಿ ಜೀವನ ಸಾಗಿಸಬೇಕೆಂದರೆ ಪ್ರಯಾಸಪಡುವಂತಾಗುತ್ತದೆ.

ಮೂರು ನಾಲ್ಕು ದಿನ ಕಾದು ಸುಸ್ತಾಗಿ ಟ್ರಾಕ್ಟರ್ ಬಾಡಿಗೆ ಹಣ ಪಾವತಿ ಮಾಡುವುದೆ ಕಷ್ಟ..!ಜಿಲ್ಲೆಯಲ್ಲಿ ಒಂದೆ ಖರೀದಿ ಕೇಂದ್ರ ಆರಂಭ ಮಾಡಿರುವದರಿಂದ ಕಡಿಮೆ ರೈತರಿಂದ ಹತ್ತಿ ಖರೀದಿ ಮಾಡಲಾಗುತ್ತಿದೆ. ರೈತರು ದೂರದ ಊರುಗಳಿಂದ ಹತ್ತಾರು ಟ್ರಾಕ್ಟರ್ ಗಳಲ್ಲಿ ಹತ್ತಿ ತುಂಬಿಕೊಂಡು ಬಂದು ಹತ್ತಿ ಕೇಂದ್ರದ ಮುಂದೆ ಪಾಳಿ ಹಚ್ಚಲಾಗಿದೆ.ಆದರೆ,ಬೇಗ ಖರೀದಿ ಮಾಡದ ಹಿನ್ನಲೆ ಟ್ರಾಕ್ಟರ್ ಬಾಡಿಗೆ ಹಣ ಕಟ್ಟಲು ರೈತರು ಪರದಾಡುವಂತಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮೂಡಬೂಳ ಗ್ರಾಮದ ರೈತ ಮುಖಂಡ ಅಶೋಕ್ ಮಾತಮಾಡಿ, ಕಡಿಮೆ ರೈತರಿಂದ ಹತ್ತಿ ಖರೀದಿ ಮಾಡಲಾಗುತ್ತಿದೆ ಇದರಿಂದ ಟ್ರಾಕ್ಟರ್ ಬಾಡಿಗೆ ತೆಗೆದುಕೊಂಡು ಹೋಗಿ ಹತ್ತಿ ಮಾರಾಟ ಮಾಡಬೇಕೆಂದರೆ ಮೂರ್ನಾಲ್ಕು ದಿನ ಕಾದ್ರು ಖರೀದಿ ಮಾಡುತ್ತಿಲ್ಲ. ಇದರಿಂದ ಟ್ರಾಕ್ಟರ್ ಬಾಡಿಗೆ ಹಣ ಕಟ್ಟುವದೆ ಕಷ್ಟವಾಗಿದೆ.ಹೆಚ್ಚು ಖರೀದಿ ಕೇಂದ್ರ ಆರಂಭ ಮಾಡಿದರೆ ಅನುಕೂಲವಾಗುತ್ತದೆ ಎಂದರು.

ಹತ್ತಿ ಖರೀದಿ ಕೇಂದ್ರ ಹೆಚ್ಚಳ ಮಾಡಿ..!:

ಖಾಸಗಿ ಕಾಟನ್ ಮೀಲ್ ನಲ್ಲಿ 3800 ರೂ ನಂತೆ ಪ್ರತಿ ಕ್ವಿಂಟಾಲ್ ಹತ್ತಿ ಖರೀದಿ ಮಾಡಲಾಗುತ್ತಿದೆ.ಇದರಿಂದ ರೈತರು ನಷ್ಟ ಹೊಂದಲಿದ್ದಾರೆ.ಕೇಂದ್ರ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಹತ್ತಿ ಮಾರಾಟ ಮಾಡಿದರೆ ರೈತರಿಗೆ ಆಶ್ರಯವಾಗಲಿದೆ ಈ ಹಿನ್ನಲೆ ರೈತರು ಖರೀದಿ ಕೇಂದ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಎಪಿಎಂಸಿ ಅಧಿಕಾರಿ ಭೀಮರಾಯ ಮಾತಮಾಡಿ,ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಸರಕಾರ ರೈತರ ಸಂಕಷ್ಟ ಅರಿತು ಜಿಲ್ಲೆಯಲ್ಲಿ‌ ಹತ್ತಿ ಖರೀದಿ ಕೇಂದ್ರ ಹೆಚ್ಚು ಆರಂಭ ಮಾಡಬೇಕಿದೆ.

(ವರದಿ: ನಾಗಪ್ಪ ಮಾಲಿಪಾಟೀಲ)
First published: May 4, 2020, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading