• Home
 • »
 • News
 • »
 • national-international
 • »
 • China Lockdown: ಚೀನಾದ ಐಫೋನ್‌ ಫ್ಯಾಕ್ಟರಿ ಬಳಿ ಲಾಕ್‌ ಡೌನ್‌ ಘೋಷಣೆ!

China Lockdown: ಚೀನಾದ ಐಫೋನ್‌ ಫ್ಯಾಕ್ಟರಿ ಬಳಿ ಲಾಕ್‌ ಡೌನ್‌ ಘೋಷಣೆ!

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

“ನಮಗೆ ಆಹಾರ ಬೇಕು, PCR ಪರೀಕ್ಷೆಗಳಲ್ಲ. ನಮಗೆ ಸ್ವಾತಂತ್ರ್ಯ ಬೇಕು, ಲಾಕ್‌ಡೌನ್‌ಗಳು ಮತ್ತು ನಿಯಂತ್ರಣಗಳಲ್ಲ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇಲ್ಲಿ ಜನರಿಗೆ ಈ ಲಾಕ್‌ಡೌನ್‌ನಿಂದ ಜನರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದಾರೆಂದು ತಿಳಿಸಿದ್ದಾರೆ.

 • Share this:

  ಚೀನಾದ ಐಫೋನ್ (I Phone) ಫ್ಯಾಕ್ಟರಿ ಬಳಿ ಸುಮಾರು ಒಂದು ಮಿಲಿಯನ್ ಜನರನ್ನು ಲಾಕ್ ಮಾಡಿದೆ. ಜೆಂಗ್‌ ಜೂ ಬಳಿಯ ಐಫೋನ್ ಉತ್ಪಾದನಾ ಕೇಂದ್ರದ ಬಳಿ ಹೆಚ್ಚುತ್ತಿರುವ ವೈರಸ್‌ (Corona virus) ಪ್ರಸರಣವನ್ನು ತಡೆಯೋದಕ್ಕೆ ಲಾಕ್‌ಡೌನ್‌ (Lockdown) ಮಾಡಿರೋದಾಗಿ ಚೀನಾ ಸರ್ಕಾರ (China Government) ಹೇಳಿಕೊಂಡಿದೆ. ಕೋವಿಡ್‌ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಚೀನಾದಾದ್ಯಂತ ಹೇರಲಾಗಿರುವ ಈ ನಿರ್ಬಂಧಗಳು ಕಂಪನಿಗಳು (Company) ಎದುರಿಸುತ್ತಿರುವ ತೊಂದರೆಯನ್ನು ಒತ್ತಿ ಹೇಳುತ್ತಿವೆ. ಈ ಲಾಕ್‌ಡೌನ್‌ನಿಂದ ಚೀನಾ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಜೊತೆಗೆ ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ.


  ಮನೆಯಲ್ಲೇ ಇರಲು ಆದೇಶ!


  ಅಂದಹಾಗೆ, ಝೊಂಗ್ಯುವಾನ್ ಜಿಲ್ಲೆಯ ಸುಮಾರು 1 ಮಿಲಿಯನ್ ನಿವಾಸಿಗಳಿಗೆ ಸೋಮವಾರದಿಂದ ಮನೆಯಲ್ಲಿಯೇ ಇರಲು ಆದೇಶಿಸಲಾಗಿದೆ. ಅವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾದ ಸಂದರ್ಭಗಳನ್ನು ಹೊರತುಪಡಿಸಿ ಅನಿವಾರ್ಯವಲ್ಲದ ವ್ಯವಹಾರಗಳಿಗೆ ಹೊರಬೀಳುವುದನ್ನು ಸರ್ಕಾರ ನಿರ್ಬಂಧಿಸಿದೆ.


  ನಗರದಾದ್ಯಂತ ಲಾಕ್‌ ಡೌನ್‌ ಇರುವುದಿಲ್ಲ ಎಂದು ಹೇಳಿದ್ದ ಅಧಿಕಾರಿಗಳು ಇದೀಗ ಇಡೀ ಜಿಲ್ಲೆಯನ್ನೇ ಲಾಕ್‌ ಡೌನ್‌ ಮಾಡಿರೋದು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಐಫೋನ್ ತಯಾರಕ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಸ್ಥಾವರಗಳು ಲಾಕ್‌ಡೌನ್ ಆಗಿರುವ ಜಿಲ್ಲೆಯಲ್ಲಿ ನೆಲೆಗೊಂಡಿಲ್ಲ. ಆದಾಗ್ಯೂ ಕಂಪನಿಯ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.


  Lockdown announced near China s iPhone factory
  ಸಾಂದರ್ಭಿಕ ಚಿತ್ರ


  ಕೇಸ್‌ ಕಡಿಮೆ ಇದ್ದರೂ ಲಾಕ್‌ ಡೌನ್‌ !


  ನಗರದಲ್ಲಿ ಕಳೆದ ಭಾನುವಾರ 6 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಅಕ್ಟೋಬರ್ 9 ರಂದು ಇತ್ತೀಚಿನ ಗರಿಷ್ಠ ಪ್ರಕರಣ 40 ಆಗಿದ್ದು, ಪ್ರಕರಣಗಳು ಕಡಿಮೆಯಾಗುತ್ತಿವೆ. ರಾಷ್ಟ್ರವ್ಯಾಪಿ ಪ್ರಕರಣಗಳು 697 ಕ್ಕೆ ಇಳಿದಿವೆ. ಇನ್ನು ಮಂಗೋಲಿಯಾ ಮತ್ತು ಕ್ಸಿನ್‌ಜಿಯಾಂಗ್‌ ಭಾಗಗಳಲ್ಲಿ ಏಕಾಏಕಿ ನಿಯಂತ್ರಣಕ್ಕೆ ಬಂದಂತೆ ಎರಡು ವಾರಗಳಲ್ಲಿ ಪ್ರಕರಣಗಳು ಕಡಿಮೆಯಾಗಿದೆ. ಇನ್ನು ರಾಜಧಾನಿ ಬೀಜಿಂಗ್‌ನಲ್ಲಿ 13 ಹೊಸ ಪ್ರಕರಣಗಳು ಮತ್ತು ಶಾಂಘೈನಲ್ಲಿ 32 ಪ್ರಕರಣಗಳು ಪತ್ತೆಯಾಗಿವೆ.


  ಭಾರೀ ವೆಚ್ಚದ ಹೊರತಾಗಿಯೂ ಕೋವಿಡ್‌ ಪ್ರಕರಣಗಳನ್ನು ತಡೆಗಟ್ಟಲು ಲಾಕ್‌ ಡೌನ್‌ ಹಾಗೂ ಸಾಮೂಹಿಕ ಪರೀಕ್ಷೆಗಳಿಗೆ ಚೀನಾ ಮುಂದಾಗಿದೆ. ಆದರೆ ದೇಶದ ಈ ನೀತಿಯು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಬೆಳವಣಿಗೆಯನ್ನು ಎಳೆದು ತಂದಿದೆ. ಜಾಗತಿಕ ಪೂರೈಕೆ ಸರಪಳಿಗಳನ್ನು ಅದರಲ್ಲೂ ಪ್ರಮುಖವಾಗಿ ಉತ್ಪಾದನಾ ಕೇಂದ್ರಗಳು, ಕಾರುಗಳಿಂದ ಹಿಡಿದು ಫೋನ್‌ಗಳು, ಕ್ರಿಸ್ಮಸ್‌ ಟ್ರೀಗಳವರೆಗೂ ಸ್ಥಗಿತಗೊಳಿಸುವುದರಿಂದ ಇದನ್ನು ಮತ್ತೆಆರಂಭಿಸಲು ಹೋರಾಡುವಂತಾಗಿದೆ.


  Lockdown announced near China s iPhone factory
  ಸಾಂದರ್ಭಿಕ ಚಿತ್ರ


  ಇನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಲಾಕ್‌ ಡೌನ್‌ ನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದು, ನಿರ್ಬಂಧಗಳು ಸಡಿಲಗೊಳ್ಳಬಹುದೇನೋ ಎಂದು ಭಾವಿಸಿದ್ದ ಹೂಡಿಕೆದಾರರು ನಿರಾಶೆಗೊಳ್ಳುವಂತಾಗಿದೆ. . ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಠಿಣ ನಿಯಮಗಳು ಜನರ ಜೀವವನ್ನು ರಕ್ಷಿಸುತ್ತದೆ ಎಂದು ಹೇಳಿದರೇ ಹೊರತು ಆರ್ಥಿಕತೆಯ ನಷ್ಟದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.


  ಬ್ಲೂಮ್‌ಬರ್ಗ್ ಸಮೀಕ್ಷೆ ನಡೆಸಿದ ಅರ್ಥಶಾಸ್ತ್ರಜ್ಞರು ಈ ವರ್ಷ ಕೇವಲ 3.3% ರಷ್ಟು ಆರ್ಥಿಕತೆಯ ಬೆಳವಣಿಗೆಯನ್ನು ಅಂದಾಜಿಸುತ್ತಾರೆ. ಇದು ನಾಲ್ಕು ದಶಕಗಳ ಅವಧಿಯಲ್ಲಿ ಎರಡನೇ ದುರ್ಬಲ ವೇಗವಾಗಿದೆ.


  ಲಾಕ್‌ ಡೌನ್‌ನಿಂದ ಭುಗಿಲೆದ್ದ ಅಸಮಾಧಾನ!


  ಇನ್ನು ಚೀನಾದಲ್ಲಿ ವಿಧಿಸಲಾಗುತ್ತಿರುವ ಕಟ್ಟುನಿಟ್ಟಿನ ಕೋವಿಡ್‌ ನಿರ್ಬಂಧಗಳು ಜನರನ್ನು ರೊಚ್ಚಿಗೇಳುವಂತೆ ಮಾಡುತ್ತಿವೆ. ಇಲ್ಲಿನ ಜನರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅಧ್ಯಕ್ಷ ಕ್ಸಿ ಮತ್ತು ಕೋವಿಡ್ ಝೀರೋವನ್ನು ಟೀಕಿಸುವ ಎರಡು ಬ್ಯಾನರ್‌ಗಳನ್ನು ರಾಜಧಾನಿಯಲ್ಲಿನ ಸೇತುವೆಯ ಮೇಲೆ ಪ್ರದರ್ಶಿಸಿದ ನಂತರ “ಬೀಜಿಂಗ್” ಮತ್ತು “ಬ್ರಿಡ್ಜ್” ನಂತಹ ಪದಗಳನ್ನು ವೈಬೊ ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರ್ಬಂಧಿಸಲಾಗಿದೆ.


  “ನಮಗೆ ಆಹಾರ ಬೇಕು, PCR ಪರೀಕ್ಷೆಗಳಲ್ಲ. ನಮಗೆ ಸ್ವಾತಂತ್ರ್ಯ ಬೇಕು, ಲಾಕ್‌ಡೌನ್‌ಗಳು ಮತ್ತು ನಿಯಂತ್ರಣಗಳಲ್ಲ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.


  ಇನ್ನು, ಚೀನಾದ ಪ್ರಮುಖ ನಗರಗಳು ಇಲ್ಲಿಯವರೆಗೆ ದೊಡ್ಡ ಪ್ರಮಾಣದ ಲಾಕ್‌ಡೌನ್‌ಗಳನ್ನು ತಪ್ಪಿಸಿದ್ದರೂ, ಅಧಿಕಾರಿಗಳು ಬೆಳೆಯುತ್ತಿರುವ ಚಟುವಟಿಕೆಗಳ ಪಟ್ಟಿಯನ್ನು ಸದ್ದಿಲ್ಲದೆ ನಿಲ್ಲಿಸುತ್ತಿದ್ದಾರೆ. ಪೋಷಕರು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಪ್ರಕಾರ, ಸೋಂಕಿನ ಹರಡುವಿಕೆಯ ಭಯ ಹೆಚ್ಚಾಗುತ್ತಿದ್ದಂತೆ ಶಾಂಘೈನ ಹಲವಾರು ಶಾಲೆಗಳು ವೈಯಕ್ತಿಕ ತರಗತಿಗಳನ್ನು ಸ್ಥಗಿತಗೊಳಿಸಿವೆ.

  Published by:Harshith AS
  First published: