ಮಥುರಾ (ಆ. 29): ಲವ್ ಜಿಹಾದ್ (Love jihad) ಬೆನ್ನಲೆ ಇದೀಗ ಮಥುರಾ ನಗರದಲ್ಲಿ ಎಕಾನಾಮಿಕ್ ಅಥವಾ ಆರ್ಥಿಕ ಜಿಹಾದ್ (Economic Jihad) ಹೆಸರು ಕೇಳಿ ಬಂದಿದೆ. ವ್ಯಾಪಾರದ ಉದ್ದೇಶಕ್ಕಾಗಿ ಮುಸ್ಲಿಂ ವ್ಯಕ್ತಿಗಳು ತಮ್ಮ ಅಂಗಡಿಗಳಿಗೆ ಹಿಂದೂ ಹೆಸರಿಟ್ಟು ಲಾಭಾಗಳಿಸುತ್ತಿದ್ದಾರೆ. ಇದು ಆರ್ಥಿಕ ಜಿಹಾದಿ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೋಸೆ ಅಂಗಡಿ ನಡೆಸುತ್ತಿದ್ದ ಇಲ್ಲಿನ ಸ್ಥಳೀಯ ವ್ಯಕ್ತಿಯ ಅಂಗಡಿಯನ್ನು ಧ್ವಂಸ ಮಾಡಲಾಗಿದೆ. ಮಥುರಾದ ಕೊತ್ವಾಲಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಶ್ರೀನಾಥ್ ಎಂಬ ಹೆಸರಿನಲ್ಲಿ ದೋಸೆ ಹೋಟೇಲ್ ನಡೆಸುತ್ತಿದ್ದರು. ಇದನ್ನು ವಿರೋಧಿಸಿದ ಕೆಲವು ಜನರ ಗುಂಪು ಹೊಟೇಲ್ಗೆ ಕಟ್ಟಿದ್ದ ಬ್ಯಾನರ್ ಹರಿದು ಹಾಕಿ ಎಚ್ಚರಿಕೆ ನೀಡಿದ್ದಾರೆ.
ಏನಿದು ಘಟನೆ ?
ಕೊತ್ವಾಲಿನಲ್ಲಿ ವಿಕಾಸ್ ಮಾರುಕಟ್ಟೆಯಲ್ಲಿ ಇರ್ಫಾನ್ ಎಂಬುವವರು ದೋಸೆ ಹೊಟೇಲ್ (Dosa Stall) ನಡೆಸುತ್ತಿದ್ದರು. ಇದಕ್ಕೆ ಶ್ರೀನಾಥ್ ಎಂದು ಹೆಸರಿಟ್ಟಿದ್ದರು. ಇದನ್ನು ಪ್ರಶ್ನಿಸಿದ ಕೆಲವರು ಆಗಸ್ಟ್ 18ರಂದು ಅವರ ಅಂಗಡಿಗೆ ನುಗ್ಗಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಬ್ಯಾನರ್ ಹರಿದು ಹಾಕಿದ ವ್ಯಕ್ತಿಗಳು ಈ ಹೆಸರನ್ನು ತೆಗೆದುಹಾಕುವಂತೆ ಎಚ್ಚರಿಸಿದ್ದರು.
ಆದರೆ, ಈ ಹೊಟೇಲ್ ಅನ್ನು ಸ್ಥಳೀಯ ನಿವಾಸಿ ರಾಹುಲ್ ಎಂಬುವವರು ನಡೆಸುತ್ತಿದ್ದು, ಇದರ ನಿರ್ವಹಣೆಗಾಗಿ ಇರ್ಫಾನ್ ನೇಮಕ ಮಾಡಿದ್ದಾರೆ. ದಿನಕ್ಕೆ ಆತನಿಗೆ 400 ರೂ ನೀಡುತ್ತಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಸಂಬಂಧ ಮಾತನಾಡಿರುವ ಇರ್ಫಾನ್ ಕಳೆದ ಐದು ವರ್ಷಗಳಿಂದ ನಾವು ಈ ಅಂಗಡಿ ನಡೆಸುತ್ತಿದ್ದೇವೆ. ಈ ರೀತಿ ಹೆಸರಿನಿಂದ ಸಮಸ್ಯೆ ಆಗಬಹುದು ಎಂದು ಊಹಿಸಿರಲಿಲ್ಲ. ಅಂದು ಕೆಲವರು ಬಂದು ಬ್ಯಾನರ್ ಹರಿದು ಹಾಕಿ ಮುಸ್ಲಿಂ ವ್ಯಕ್ತಿಗಳು ಹಿಂದೂ ಹೆಸರಲ್ಲಿ ಹೊಟೇಲ್ ನಡೆಸಲು ಸಾಧ್ಯವಿಲ್ಲ ಎಂದರು. ಅವರಿಗೆ ಹೆಸರಿನಲ್ಲಿ ಸಮಸ್ಯೆ ಹುಡುಕಿದ್ದಾರೆ ಎಂದರು.
ಇದನ್ನು ಓದಿ: ಪೊಲೀಸ್ ಸಿಬ್ಬಂದಿಗೆ ತರಾಟೆ: ಪರಿಸ್ಥಿತಿ ಅರ್ಥ ಮಾಡಿಸಿದೆ, ಇದನ್ನು ಹೆಚ್ಚು ಬೆಳೆಸುವುದು ಬೇಡ ಎಂದ ಮಾಜಿ ಸ್ಪೀಕರ್
ಆರ್ಥಿಕ ಜಿಹಾದಿ ಇದು
ಈ ಹೊಟೇಲ್ ಮೇಲೆ ಕೆಲವರು ದಾಳಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಇರ್ಫಾನ್ ಮೇಲೆ ದಾಳಿ ಮಾಡಿರುವ ದೃಶ್ಯ ಕಂಡು ಬಂದಿದೆ. ಈ ವೇಳೆ ಇರ್ಫಾನ್ ಹೊಟೇಲ್ಗೆ ಹಿಂದೂಗಳು ತಿನ್ನಲು ಬರುತ್ತಾರೆ. ಈ ಹಿನ್ನಲೆ ಹೊಟೇಲ್ಗೆ ಶ್ರೀನಾಥ್ ಹೆಸರು ಇಟ್ಟಿರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.
ದೇವರಾಜ್ ಪಂಡಿತ್ ಎಂಬ ವ್ಯಕ್ತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಆರ್ಥಿಕ ಜಿಹಾದ್ ಎಂದು ಕರೆದಿದ್ದಾರೆ. ಇಂತಹವರಿಂದಾಗಿ ಹಿಂದೂಗಳಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಸನಾತನ ಧರ್ಮದ ನೆರವು ಪಡೆಯುವ ಇಂತಹ ಮಾರಾಟಗಾರರ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದಾನೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ