ಜಯ್ಪುರ(ಜ.10): ಭಾರತೀಯ ಜನತಾ ಪಕ್ಷದ (BJP) ಸಂಸದ ಮಹಂತ್ ಬಾಲಕನಾಥ್ ಯೋಗಿ ರಾಜಸ್ಥಾನದ ಅಲ್ವಾರ್ನಲ್ಲಿ ಡಿಎಸ್ಪಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾನುವಾರ 4 ಕಾರ್ಮಿಕರನ್ನು ಬಂಧಿಸಿದ್ದಕ್ಕಾಗಿ ಬೆಹ್ರೋರ್ ಡಿಎಸ್ಪಿ ವಿರುದ್ಧ ಬಾಲಕನಾಥ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಡಿಎಸ್ಪಿ ಆನಂದ್ ರಾವ್ ಅವರನ್ನು ಸಮವಸ್ತ್ರದಲ್ಲಿರುವ ಗೂಂಡಾ ಎಂದೂ ಕರೆದರು. ಇಷ್ಟಕ್ಕೇ ಸುಮ್ಮನಾಗದ ಬಿಜೆಪಿ ಸಂಸದ ಬಾಲಕನಾಥ್ (Mahant Balaknath) ‘ನನ್ನ ಹೆಸರು ನೆನಪಿರಲಿ. ಇದು ಕೇವಲ 8 ತಿಂಗಳ ಸರ್ಕಾರ, ನಂತರ ಬಿಜೆಪಿ ಬರಲಿದೆ. ನಾನು ನಿನ್ನನ್ನು ಇಲ್ಲಿಂದ ಹೋಗಲು ಸಹ ಬಿಡುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ.
ಡಿಎಸ್ಪಿಗೆ ಬೆದರಿಕೆ ಹಾಕಿದ ಸಂಸದ ಮಹಂತ್ ಬಾಲಕನಾಥ್ ಯೋಗಿ, 'ನನ್ನ ಹೆಸರನ್ನು ನೆನಪಿಡಿ. ನಾನು ನಿಮ್ಮ ಮೂರು ಜನರನ್ನು ಎಂದಿಗೂ ಮರೆಯುವುದಿಲ್ಲ. ಒಬ್ಬರು ಇಲ್ಲಿಂದ ಶಾಸಕರು, ಮತ್ತೊಬ್ಬರು ಹಳೆಯ ಎಸ್ಎಚ್ಒ ಮತ್ತು ಇಂದು ನೀವು ನನ್ನ ಪಟ್ಟಿಯಲ್ಲಿ ಮೊದಲಿಗರು. ಪೊಲೀಸ್ ಸಮವಸ್ತ್ರದಲ್ಲಿರುವ ದೊಡ್ಡ ಗೂಂಡಾ ನೀನು. ನಿಮ್ಮ ಮಕ್ಕಳು ಕೂಡಾ ನೀವು ನನ್ನ ತಂದೆ ಯಾಕಾಗಿದ್ದೀರಿ ಎಂದು ಕೊರಗುತ್ತಾರೆ ಎಂಬ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: IPL Retention: ಲಕ್ನೋ-ರಾಜಸ್ಥಾನ್ ಟೀಮ್ನಿಂದ ಕನ್ನಡಿಗರು ಔಟ್, ಇಲ್ಲಿದೆ ತಂಡಗಳ ಸಂಪೂರ್ಣ ಪಟ್ಟಿ
ಏನು ವಿಷಯ?
ಪೊಲೀಸರ ಪ್ರಕಾರ, ಜನವರಿ 16 ರಂದು ಇತಿಹಾಸ ಶೀಟರ್ ವಿಕ್ರಮ್ ಗುರ್ಜರ್ ಅಲಿಯಾಸ್ ಲಾಡೆನ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಪೊಲೀಸರು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಬೆಹರೋಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಗುಂಡಿನ ದಾಳಿಯಿಂದ ಲಾಡೆನ್ ಬದುಕುಳಿದರು, ಆದರೆ ಚಿಕಿತ್ಸೆಗಾಗಿ ಅಲ್ಲಿಗೆ ಬಂದ ಇಮಾರ್ತಿ ದೇವಿ ಮತ್ತು ಭೂತೇರಿ ದೇವಿ ಅವರ ಕಾಲಿಗೆ ಗುಂಡು ಹಾರಿಸಲಾಯಿತು.
क्या वाक़ई #behror में सब कुछ ठीक नहीं है ? सांसद @MahantBalaknath का ग़ुस्सा तो यही बता रहा है ! सुनिए जरा किसे सांसद वर्दी वाला गुंडा बता रहे है ? @8PMnoCM @RajPoliceHelp pic.twitter.com/AcwRvJeFbj
— Laxman Raghav (@kunwarraghav) January 8, 2023
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಬೆಳಿಗ್ಗೆ 8 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತ ವಕೀಲ ರಾಜಾರಾಮ್ ಯಾದವ್, ಬಿಜೆಪಿ ಕಾರ್ಯಕರ್ತ ವಕೀಲ ಹಿತೇಂದ್ರ ಯಾದವ್, ನೂತನ್ ಸೈನಿ ಮತ್ತು ನಿಶಾಂತ್ ಯಾದವ್ ಅವರನ್ನು ಕಸ್ಟಡಿಗೆ ತೆಗೆದುಕೊಂಡರು. ಜನವರಿ 6 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಇತಿಹಾಸ ಶೀಟರ್ ವಿಕ್ರಮ್ ಗುರ್ಜರ್ ಅಲಿಯಾಸ್ ಲಾಡೆನ್ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಗೂ ಅವರ ಸಂಬಂಧವಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Shraddha Murder Case: ಶ್ರದ್ಧಾ ಕೊಲೆ ಕೇಸ್ ಏನೂ ಹೊಸದಲ್ಲ! ರಾಜಸ್ಥಾನ ಸಿಎಂ ಬೇಜವಾಬ್ದಾರಿ ಹೇಳಿಕೆ
ಗುರಿಯಾಗಿಸಿದ ಕಾಂಗ್ರೆಸ್
ಮಹಂತ್ ಬಾಲಕನಾಥ್ ಅವರ ಈ ವಿಡಿಯೋ ವೈರಲ್ ಆಗುವುದರೊಂದಿಗೆ ರಾಜಕೀಯವಾಗಿಯೂ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ನಾಯಕರು ಸಂಸದರನ್ನು ಟಾರ್ಗೆಟ್ ಮಾಡಿದ್ದಾರೆ. ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ಈ ರೀತಿ ವರ್ತಿಸಬಾರದು ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸ್ವರ್ಣಿಂ ಚತುರ್ವೇದಿ ಹೇಳುತ್ತಾರೆ. ಅವರ ನಡವಳಿಕೆಯನ್ನು ಸಾರ್ವಜನಿಕರು ಅನುಸರಿಸುತ್ತಾರೆ. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರನ್ನು ಈ ರೀತಿ ನಡೆಸಿಕೊಳ್ಳಬಾರದು. ವಿಷಯ ತಿಳಿಯುತ್ತಿದ್ದಂತೆ ಭಿವಾಡಿ ಎಸ್ಪಿ ಶಾಂತನುಕುಮಾರ್ ಸಿಂಗ್ ಸ್ಥಳಕ್ಕೆ ಆಗಮಿಸಿ ಸಂಸದರು ಹಾಗೂ ಇತರ ಮುಖಂಡರ ಜತೆ ಮಾತನಾಡಿ ಸಮಾಧಾನಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ