• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Kerala: ವಲಸೆ ಕಾರ್ಮಿಕನನ್ನು ಕಳ್ಳನೆಂದು ಭಾವಿಸಿ 2 ಗಂಟೆ ಥಳಿತ, ಪಾಪಿಗಳ ಏಟಿಗೆ ಪ್ರಾಣಬಿಟ್ಟ ಬಡಪಾಯಿ!

Kerala: ವಲಸೆ ಕಾರ್ಮಿಕನನ್ನು ಕಳ್ಳನೆಂದು ಭಾವಿಸಿ 2 ಗಂಟೆ ಥಳಿತ, ಪಾಪಿಗಳ ಏಟಿಗೆ ಪ್ರಾಣಬಿಟ್ಟ ಬಡಪಾಯಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳ್ಳತನದ ಶಂಕೆಯ ಮೇಲೆ ರಾಜೇಶ್​ ಎಂಬ ವಲಸೆ ಕಾರ್ಮಿಕನನ್ನು ಸ್ಥಳೀಯರು ಹಿಡಿದು ಮೆನಯೊಂದರಲ್ಲಿ ಕಟ್ಟಿ ಹಾಕಿ ಸುಮಾರು ಎರಡು ಗಂಟೆಗಳ ಕಾಲ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

 • Share this:

ಮಲ್ಲಪುರಂ: ಕಳ್ಳತನದ (Theft) ಶಂಕೆಯ ಮೇಲೆ ಬಿಹಾರ (Bihar) ಮೂಲದ 36 ವರ್ಷದ ವಲಸೆ ಕಾರ್ಮಿಕನನ್ನು ಹತ್ಯೆ ಮಾಡಿರುವ ದಾರುಣ ಘಟನೆ ಕೇರಳದ (Kerala) ಮಲ್ಲಪುರಂನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು (Kerala Police) ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜೇಶ್ ಮಾಂಝಿ (Rajesh Manji) ಎಂಬಾತನೇ ಹತ್ಯೆಯಾದ ವ್ಯಕ್ತಿಯಾಗಿದ್ದು, ಈತನನ್ನು ಕೊಂಡೊಟ್ಟಿ ಸಮೀಪದ ಮನೆಯೊಂದರಲ್ಲಿ ಕಟ್ಟಿ ಹಾಕಿ ಥಳಿಸಿ ಕೊಂದಿದ್ದಾರೆ. ಆದರೆ ಆರೋಪಿಗಳು ಪೊಲೀಸರಿಗೆ ಕಳ್ಳತನಕ್ಕೆ ಬಂದಿದ್ದಾಗ ಮನೆಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ.


ಎರಡು ಗಂಟೆ ಥಳಿತ


ಕಳ್ಳತನದ ಶಂಕೆಯ ಮೇಲೆ ರಾಜೇಶ್​ನನ್ನು ಸ್ಥಳೀಯರು ಹಿಡಿದು ಮೆನಯೊಂದರಲ್ಲಿ ಕಟ್ಟಿ ಹಾಕಿದ್ದ ಸುಮಾರು ಎರಡು ಗಂಟೆಗಳ ಕಾಲ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕನಿಗೆ ಥಳಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಆಸ್ಪತ್ರೆಗೆ ಸಾಗಿಸಿದರಾದರೂ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ ಸಾವನ್ನಪ್ಪಿದ್ದಾನೆ.


ಇದನ್ನೂ ಓದಿ: Temple: ಈ ದೇವಾಲಯದಲ್ಲಿ ಕಳ್ಳತನಕ್ಕೆ ಹೋದವರೆಲ್ಲಾ ಮೂರ್ಛೆ ಬೀಳ್ತಾರಂತೆ! ಏನಿದರ ಮಹಿಮೆ?


ವೈದ್ಯಕೀಯ ವರದಿಯಲ್ಲಿ ಹಲ್ಲೆ ಬಹಿರಂಗ


ರಾಜೇಶ್​ ಮಾಂಝಿಯನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಗುಂಪಾಗಿ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ಸಂತ್ರಸ್ತ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಸಾಕ್ಷ್ಯ ನಾಶಕ್ಕೆ ಯತ್ನ


ರಾಜೇಶ್ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪುರಾವೆಗಳಿವೆ. ಆರೋಪಿಗಳು ಪ್ಲಾಸ್ಟಿಕ್ ಪೈಪ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ಅಲ್ಲದೆ ಅವರು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ. ನಾವು ಎಲ್ಲವನ್ನೂ ಸಂಗ್ರಹಿಸಿದ್ದೇವೆ. ಸದ್ಯ ಎಂಟು ಮಂದಿ ಆರೋಪಿಗಳ ಜೊತೆಗೆ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಓರ್ವನನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ರಾಜೇಶ್ ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದ ಎಂದು ಆರೋಪಿಗಳು ತಿಳಿಸಿದ್ದಾರೆ.

top videos


  ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಅದರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  First published: