ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮೋದಿ ಉಡುಗೊರೆ​; 1 ಕೋಟಿವರೆಗಿನ ಸಾಲದ ಬಡ್ಡಿಗೆ ಶೇ. 2ರಷ್ಟು ರಿಯಾಯಿತಿ

Sushma Chakre | news18
Updated:November 2, 2018, 7:08 PM IST
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮೋದಿ ಉಡುಗೊರೆ​; 1 ಕೋಟಿವರೆಗಿನ ಸಾಲದ ಬಡ್ಡಿಗೆ ಶೇ. 2ರಷ್ಟು ರಿಯಾಯಿತಿ
ಪ್ರಧಾನಿ ಮೋದಿ ಅವರ ಭಾಷಣದ ಚಿತ್ರ
  • News18
  • Last Updated: November 2, 2018, 7:08 PM IST
  • Share this:
ನ್ಯೂಸ್​18 ಕನ್ನಡ

ನವದೆಹಲಿ (ನ. 2): ದೀಪಾವಳಿ ಹಬ್ಬಕ್ಕೆ ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ (ಎಂಎಸ್​ಎಂಇ) ಪ್ರಧಾನಿ ನರೇಂದ್ರ ಮೋದಿ ಸಿಹಿ ಸುದ್ದಿ ನೀಡಿದ್ದಾರೆ.

1 ಕೋಟಿವರೆಗಿನ ಸಾಲ ಪಡೆಯುವ ಎಂಎಸ್​ಎಂಇ ಉದ್ಯಮಿಗಳಿಗೆ ಬಡ್ಡಿಯ ಮೇಲೆ ಶೇ. 2ರಷ್ಟು ರಿಯಾಯಿತಿ ಘೋಷಿಸುವ ಮೂಲಕ ಕೇಂದ್ರ ಸರ್ಕಾರ ದೀಪಾವಳಿಗೆ ಉಡುಗೊರೆ ನೀಡಿದೆ. ಇಂದು ಎಂಎಸ್​ಎಂಇ ಸಪೋರ್ಟ್​ ಪ್ರೋಗ್ರಾಂ ಉದ್ಘಾಟನೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸರ್ಕಾರ 12 ಯೋಜನೆಗಳನ್ನು ರೂಪಿಸಿದೆ. ಜಿಎಸ್​ಟಿ ನೋಂದಾಯಿತ ಎಂಎಸ್​ಎಂಇ ಉದ್ಯಮಗಳ ಮೇಲೆ ತೆಗೆಯುವ 1 ಕೋಟಿವರೆಗಿನ ಸಾಲದ ಮೇಲಿನ ಬಡ್ಡಿಗೆ ಶೇ. 2ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಈ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ದೀಪಾವಳಿ ಉಡುಗೊರೆ ನೀಡುತ್ತಿರುವುದಾಗಿ ಮೋದಿ ಹೇಳಿಕೊಂಡಿದ್ದು, ಇದರಿಂದ ಈ ವಲಯದಲ್ಲಿ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:  ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿ ನಂಬರ್​ ಒನ್​; ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ 
First published: November 2, 2018, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading