Loan Moratorium: ಸಾಲಗಳ ಬಡ್ಡಿ ಮನ್ನಾ ವಿಚಾರ: ಸುಪ್ರೀಂ ವಿಚಾರಣೆ ನ. 18ಕ್ಕೆ ಮುಂದೂಡಿಕೆ

ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಗೈರಾಗಿರುವ ಹಿನ್ನೆಲೆಯಲ್ಲಿ ಮೊರಾಟೊರಿಯಮ್ ಅವಧಿಯ ಸಾಲಗಳ ಬಡ್ಡಿ ಮನ್ನಾ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ನ್ಯಾಯಪೀಠ ನ. 18ಕ್ಕೆ ಮುಂದೂಡಿದೆ.

ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ

 • News18
 • Last Updated :
 • Share this:
  ನವದೆಹಲಿ(ನ. 05): ಆರ್​ಬಿಐ ಘೋಷಿಸಿದ ಆರು ತಿಂಗಳ ಲೋನ್ ಮೊರಾಟೋರಿಯಮ್ ಅವಧಿಯಲ್ಲಿನ ಸಾಲಗಳ ಸಂಪೂರ್ಣ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ಇವತ್ತೂ ಸಾಧ್ಯವಾಗಲಿಲ್ಲ. ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಬರದೇ ಹೋದ ಕಾರಣಕ್ಕೆ ವಿಚಾರಣೆಯನ್ನು ನ್ಯಾ| ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂ ನ್ಯಾಯಪೀಠ ನ. 18ಕ್ಕೆ ಮುಂದೂಡಿಕೆ ಮಾಡಿದೆ.

  ಮಾರ್ಚ್ ಒಂದರಿಂದ ಆಗಸ್ಟ್ 31ರವರೆಗಿನ ಅವಧಿಯನ್ನು ಮೊರಾಟೋರಿಯಮ್ ಪೀರಿಯಡ್ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಕೆಲ ನಿರ್ದಿಷ್ಟ ಸಾಲಗಳಿಗೆ ಕಂತು ಕಟ್ಟುವುದರಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಆಗಸ್ಟ್ ತಿಂಗಳ ನಂತರ ಬ್ಯಾಂಕುಗಳು ಆ ಆರು ತಿಂಗಳ ಅವಧಿಯಲ್ಲಿನ ಸಾಲಗಳ ಮೇಲೆ ಬಡ್ಡಿ ಹಾಗೂ ಚಕ್ರಬಡ್ಡಿ ಹಾಕಿ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ಇದನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ.

  ಇದನ್ನೂ ಓದಿ: Gold Rate Today: ದೀಪಾವಳಿಗೂ ಮೊದಲು ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ; ಇಲ್ಲಿದೆ ಇಂದಿನ ದರ

  ಸುಪ್ರೀಂ ಸೂಚನೆಯಂತೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಿದೆ. ಈ ಮೊತ್ತವನ್ನು ತಾನೇ ಭರಿಸಿ ಬ್ಯಾಂಕುಗಳಿಗೆ ನೀಡುವುದಾಗಿ ತಿಳಿಸಿದೆ. ಈ ಹಣವನ್ನು ಸಾಲಗಾರರಿಗೆ ವಾಪಸ್ ನೀಡಲು ನ. 5, ಅಂದರೆ ಇವತ್ತೇ ಕೊನೆಯ ದಿನವಾಗಿದೆ. ಚಕ್ರಬಡ್ಡಿ ಮನ್ನಾ ಮಾಡುವ ನಿರ್ಧಾರವನ್ನು ಸುಪ್ರೀಮ್ ಕೋರ್ಟ್ ಕೂಡ ಸ್ವಾಗತಿಸಿದೆ. ಆದರೆ, ಮೊರಾಟೋರಿಯಮ್ ಅವಧಿಯಲ್ಲಿ ಚಕ್ರಬಡ್ಡಿ ಅಷ್ಟೇ ಅಲ್ಲ, ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕೆಂದು ಮನವಿ ಮಾಡಿ ಅರ್ಜಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿವೆ.

  ಆದರೆ, ಕೋವಿಡ್ ಸಂಕಷ್ಟದಲ್ಲಿ ಬ್ಯಾಂಕುಗಳೂ ಇದ್ದು, ಚಕ್ರಬಡ್ಡಿ ಮನ್ನಾ ಮಾಡುವುದೇ ಈಗ ದೊಡ್ಡ ಹೊರೆಯ ಕ್ರಮವಾಗಿದೆ. ಇದಕ್ಕಿಂತ ಇನ್ನೂ ಹೆಚ್ಚು ಕ್ರಮ ಕೈಗೊಂಡರೆ ಈಗಿನ ಆರ್ಥಿಕ ದುಸ್ಥಿತಿಯಲ್ಲಿ ದುಸ್ಸಾಹಸವೇ ಆಗುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದ.

  ಇದನ್ನೂ ಓದಿ: H1N2: ಕೆನಡಾದಲ್ಲಿ ಮೊದಲ ಹೆಚ್​1ಎನ್​2 ಸೋಂಕು ಪತ್ತೆ; ಅಪರೂಪದ ಈ ಹಂದಿಜ್ವರದ ಬಗ್ಗೆ ಇಲ್ಲಿದೆ ಮಾಹಿತಿ

  ಈ ಸಂಬಂಧ ವಿಚಾರಣೆ ನ. 3ಕ್ಕೆ ನಿಗದಿಯಾಗಿತ್ತು. ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಅನುಪಸ್ಥಿತಿ ಇದ್ದರಿಂದ ನ. 5ಕ್ಕೆ, ಅಂದರೆ ಇವತ್ತು ವಿಚಾರಣೆ ಮುಂದೂಡಲಾಗಿತ್ತು. ಈಗ ಅದೇ ಕಾರಣಕ್ಕೆ ನ. 18ಕ್ಕೆ ಮತ್ತೆ ಮುಂದೂಡಲಾಗಿದೆ.
  Published by:Vijayasarthy SN
  First published: