HOME » NEWS » National-international » LJP WAS OFFERED REASONABLE NUMBER OF SEATS SAYS AMIT SHAH SNVS

ಎಲ್​​ಜೆಪಿಗೆ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡಿದ್ದೆವು: ಅಮಿತ್ ಶಾ

“ಮೈತ್ರಿಕೂಟ ಯಾಕೆ ಮುರಿದುಬಿತ್ತು ಎಂಬುದನ್ನು ಬಿಹಾರದ ಜನರು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯ ನಂತರ ಎಲ್ಜೆಪಿ ಮತ್ತೆ ಒಂದುಗೂಡುತ್ತಾ ಗೊತ್ತಿಲ್ಲ. ಆದರೆ, ಈಗ ನಾವು ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆ” ಎಂದು ಅಮಿತ್ ಶಾ ತಿಳಿಸಿದ್ದಾರೆ.

news18
Updated:October 17, 2020, 9:06 PM IST
ಎಲ್​​ಜೆಪಿಗೆ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡಿದ್ದೆವು: ಅಮಿತ್ ಶಾ
ಅಮಿತ್ ಶಾ
  • News18
  • Last Updated: October 17, 2020, 9:06 PM IST
  • Share this:
ನವದೆಹಲಿ: ಕೇಂದ್ರದ ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಎಲ್​ಜೆಪಿ ಪಕ್ಷ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಈ ಬಗ್ಗೆ ನ್ಯೂಸ್18 ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಮಿತ್ ಶಾ, ತಾನು ಎಲ್​ಜೆಪಿ ಜೊತೆ ಹಲವು ಬಾರಿ ಮಾತುಕತೆ ನಡೆಸಿ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡುವ ಭರವಸೆ ನೀಡಿದ್ದೆವು. ಆದರೂ ಎಲ್​ಜೆಪಿ ಸಹಮತಕ್ಕೆ ಬರದೆ ಏಕಾಂಗಿ ಹೋರಾಟದ ನಿರ್ಧಾರ ಮಾಡಿತು ಎಂದು ತಿಳಿಸಿದ್ದಾರೆ. ಜೆಡಿಯು ಕೂಡ ಎಲ್​ಜೆಪಿಗೆ ಒಳ್ಳೆಯ ಸಂಖ್ಯೆಯ ಸೀಟು ಬಿಟ್ಟುಕೊಡಲು ತಯಾರಿತ್ತು. ತಾನೂ ಕೂಡ ಚಿರಾಗ್ ಪಾಸ್ವಾನ್ ಜೊತೆ ವೈಯಕ್ತಿಕವಾಗಿಯೂ ಮಾತನಾಡಿದ್ದೆ ಎಂದು ಶಾ ಹೇಳಿದ್ದಾರೆ.

ನ್ಯೂಸ್18 ಪ್ರಧಾನ ಸಂಪಾದಕ ರಾಹುಲ್ ಜೋಷಿ ನಡೆಸಿದ ಸಂದರ್ಶನದ ವೇಳೆ ಮಾತನಾಡಿದ ಅಮಿತ್ ಶಾ ಎಲ್​ಜೆಪಿ ಜೊತೆಗಿನ ಸಂಧಾನ ಮುರಿದುಬೀಳಲು ಏನು ಕಾರಣ ಎಂಬುದನ್ನು ವಿವರಿಸಿದ್ದಾರೆ. “ಈ ಬಾರಿ ನಮ್ಮ ಮೈತ್ರಿಕೂಟಕ್ಕೆ ಹೊಸ ಸೇರ್ಪಡೆಯಾಗಿತ್ತು. ಇದರಿಂದಾಗಿ ಪ್ರತಿಯೊಂದು ಪಕ್ಷಕ್ಕೂ ಸೀಟುಗಳ ಸಂಖ್ಯೆ ಕಡಿಮೆ ಆಯಿತು. ಜೆಡಿಯು ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಪಾಲಿನ ಕೆಲ ಸೀಟುಗಳನ್ನ ಬಿಟ್ಟುಕೊಟ್ಟವು. ಆದರೆ, ಎಲ್​ಜೆಪಿಗೆ ಇದು ಸಮಾಧಾನ ತರಲಿಲ್ಲ. ಏಕಪಕ್ಷೀಯವಾಗಿ ಹೇಳಿಕೆಗಳು ಬರತೊಡಗಿದವು. ಇದು ಪಕ್ಷದ ಕಾರ್ಯಕರ್ತರ ಮೇಲೆ ಪರಿಣಾಮ ಬೀರತೊಡಗಿದವು. ಹೀಗಾಗಿ, ಒಂದು ಪಕ್ಷದ ಪರವಾಗಿ ನಿಲ್ಲಲು ಕಷ್ಟವಾಯಿತು. ಆದಾಗ್ಯೂ ನಾವು ಮೈತ್ರಿಕೂಟವನ್ನು ಒಡೆಯುವ ಕೆಲಸ ಮಾಡಲಿಲ್ಲ. ಅವರೇ ಅಧಿಕೃತವಾಗಿ ಮೈತ್ರಿ ಮುರಿದುಕೊಂಡರು” ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ತಾನಿಷ್ಕ್​ನಿಂದ ಬಾಲಿವುಡ್​ವರೆಗೆ ಬಿಸಿಬಿಸಿ ವಿಚಾರಗಳ ಬಗ್ಗೆ ಅಮಿತ್ ಶಾ ಮಾತು: ರಾತ್ರಿ 9ಕ್ಕೆ ಸಂದರ್ಶನ ವೀಕ್ಷಿಸಿ

ಚುನಾವಣೆಯ ಬಳಿಕ ಬಿಹಾರದಲ್ಲಿ ಎನ್​ಡಿಎಗೆ ಎಲ್​ಜೆಪಿ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವರು, “ಮೈತ್ರಿಕೂಟ ಯಾಕೆ ಮುರಿದುಬಿತ್ತು ಎಂಬುದನ್ನು ಬಿಹಾರದ ಜನರು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯ ನಂತರ ಎಲ್​ಜೆಪಿ ಮತ್ತೆ ಒಂದುಗೂಡುತ್ತಾ ಎಂಬುದನ್ನು ಕಾದುನೋಡಬೇಕು. ಆದರೆ, ಈಗ ನಾವು ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧದ ಮುನಿಸಿನಿಂದಲೇ ಎಲ್​ಜೆಪಿ ಎನ್​ಡಿಎ ಮೈತ್ರಿಕೂಟದಿಂದ ದೂರವಾಗಿದೆ. ಬಿಜೆಪಿ ಜೊತೆ ತನ್ನ ಸ್ನೇಹ ಮುಂದುವರಿಯುವುದಾಗಿ ಹೇಳಿರುವ ಎಲ್​ಜೆಪಿ, ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗಳ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದೆ. ಅದರಂತೆ ಬಿಹಾರದ 143 ಕ್ಷೇತ್ರಗಳಲ್ಲಿ ಎಲ್​ಜೆಪಿ ಅಭ್ಯರ್ಥಿಗಳನ್ನ ಹಾಕಿ ಏಕಾಂಗಿಯಾಗಿ ಹೋರಾಡುತ್ತಿದೆ.

“ಪ್ರಧಾನಿ ನರೇಂದ್ರ ಮೋದಿ ನನ್ನ ಹೃದಯದಲ್ಲಿದ್ದಾರೆ. ಅವರ ತತ್ವ ಮತ್ತು ಅಭಿವೃದ್ಧಿ ಮಾದರಿ ಬಗ್ಗೆ ನನಗೆ ನಂಬಿಕೆ ಇದೆ. ಆದರೆ ಮೋದಿ ಅವರ ಫೋಟೋಗಳನ್ನ ಚುನಾವಣಾ ಪ್ರಚಾರದಲ್ಲ ಎಲ್​ಜೆಪಿ ಬಳಸಿಕೊಳ್ಳುವುದಿಲ್ಲ. ಮೋದಿ ಅವರ ಫೋಟೋಗಳನ್ನ ತಮ್ಮ ಪೋಸ್ಟರ್​ಗಳಲ್ಲಿ ಬಳಸಿಕೊಳ್ಳುವ ಆತುರತೆ ನಿತೀಶ್ ಕುಮಾರ್ ಅವರಿಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿರುವುದರಿಂದ ಪ್ರಧಾನಿ ಮೋದಿ ಅವರ ವರ್ಚಸ್ಸು ತನ್ನನ್ನ ಉಳಿಸಬಹುದೆಂಬ ಆಲೋಚನೆ ಅವರಲ್ಲಿರಬಹುದು” ಎಂದು ಚಿರಾಗ್ ಪಾಸ್ವಾನ್ ಕುಟುಕಿದ್ದಾರೆ.
Published by: Vijayasarthy SN
First published: October 17, 2020, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories