• Home
  • »
  • News
  • »
  • national-international
  • »
  • British Prime Minister: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ! ರಿಷಿ ಸುನಕ್‌ಗೆ ಇದ್ಯಾ ಈ ಬಾರಿ ಅವಕಾಶ?

British Prime Minister: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ! ರಿಷಿ ಸುನಕ್‌ಗೆ ಇದ್ಯಾ ಈ ಬಾರಿ ಅವಕಾಶ?

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ

ಬ್ರಿಟನ್ ಪ್ರಧಾನಿ (British Prime Minister) ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ (Liz Truss resign) ನೀಡಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದಾರೆ. ಲಿಜ್ ಟ್ರುಸ್ ರಾಜೀನಾಮೆಯೊಂದಿಗೆ ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗುತ್ತಾರಾ ಎಂಬ ಕುತೂಹಲ ಮತ್ತೆ ಮೂಡಿದೆ.

ಮುಂದೆ ಓದಿ ...
  • Share this:

ಬ್ರಿಟನ್: ದೇಶದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಯಾರೂ ಊಹಿಸದ ರೀತಿಯಲ್ಲಿ ಬ್ರಿಟನ್ ಪ್ರಧಾನಿ (British Prime Minister) ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ (Liz Truss resign) ನೀಡಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು (economic crisis) ಸೃಷ್ಟಿಯಾಗಿದ್ದು, ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರದೇ, ಹಲವು ಸವಾಲುಗಳಿಂದ ಕೂಡಿತ್ತು. ಇಂಧನ ದರಗಳ ನಿಯಂತ್ರಣ ಮತ್ತು ಆರ್ಥಿಕ ಸ್ಥಿರತೆಗೆ ಸುಧಾರಣೆಗಳನ್ನು ತಕ್ಷಣವೇ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದ ಲಿಜ್ ಟ್ರಸ್ ಅವರು ತಮ್ಮ ಪಕ್ಷದ ಸಂಸದರಲ್ಲಿ ಭರವಸೆ ಮೂಡಿಸಿದ್ದರು. ಆದರೆ ಇದೀಗ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಲಿಜ್ ಟ್ರಸ್ ಪ್ರಕಟಿಸಿದ್ದಾರೆ. ಲಿಜ್ ಟ್ರುಸ್ ರಾಜೀನಾಮೆಯೊಂದಿಗೆ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಬ್ರಿಟನ್ ಪ್ರಧಾನಿ ಆಗುತ್ತಾರಾ ಎಂಬ ಕುತೂಹಲ ಮತ್ತೆ ಮೂಡಿದೆ.


 45 ದಿನಗಳಲ್ಲಿ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ


ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ಅವರು ತಾವು ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಬ್ರಿಟನ್ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದಂತಾಗಿದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಕ್ಕೆ ಲಿಸ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಯುಕೆ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯ ಪ್ರಧಾನಿ ಇವರೇ ಆಗಿದ್ದಾರೆ.


ಲಿಜ್ಟ್ರಸ್ಗೆ ದೊಡ್ಡ ಪೆಟ್ಟು ನೀಡಿದಮಿನಿ ಬಜೆಟ್‌ʼ


ಅಧಿಕಾರವಹಿಸಿಕೊಂಡ ನಂತರ ಲಿಜ್‌ ಟ್ರಸ್‌ ಮೊದಲ ಹಂತದಲ್ಲೇ ಮುಗ್ಗರಿಸಿದರು. ಹೌದು ಇವರ ಹೊರಡಿಸಿದ ತೆರಿಗೆ ಕಡಿತ ನೀತಿ ದೇಶದಲ್ಲಿ ಆರ್ಥಿಕ ಕೋಲಾಹಲವನ್ನೇ ಸೃಷ್ಟಿಸಿತು. ತೆರಿಗೆ ಮತ್ತು ಇಂಧನ ಬಿಲ್‌ಗಳಲ್ಲಿ ಕಡಿತ ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ ಇದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದವು. ಭಾರೀ ಒತ್ತಡದ ನಂತರ ಆ ನೀತಿಯನ್ನೇ ಟೋರಿ ಪಕ್ಷ ಆದೇಶ ಹೊರಡಿಸಿದ ಹತ್ತೇ ದಿನದಲ್ಲಿ ವಾಪಸ್‌ ಪಡೆದುಕೊಂಡಿತು. ಇದು ಲಿಜ್‌ ಟ್ರಸ್‌ಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಇದೇ ಕಾರಣದಿಂದ ಲಿಜ್ ಟ್ರಸ್ ರಾಜೀನಾಮೆ ನೀಡುವ ಪ್ರಸಂಗ ಬಂದಿತ್ತು.


ಇದನ್ನೂ ಓದಿ: Padma Bhushan to Satya Nadella: ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರದಾನ, ಭಾರತೀಯರಿಗೆ ಮೈಕ್ರೋಸಾಫ್ಟ್ ಸಿಇಒ ಧನ್ಯವಾದ


ರಿಷಿ ಸುನಕ್ ಹಿಂದಿಕ್ಕಿ ಪ್ರಧಾನಿ ಪಟ್ಟಕ್ಕೇರಿದ್ದ ಟ್ರಸ್


ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಡಿಯಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಭಾರತೀಯ ಮೂಲದ ರಿಷಿ ಸುನಕ್ ಅವರ ವಿರುದ್ಧ 60,399 ರ ವಿರುದ್ಧ ಕನ್ಸರ್ವೇಟಿವ್ ಪಕ್ಷದ ಸದಸ್ಯರು 81,326 ಮತಗಳಿಂದ ಲಿಜ್ ಟ್ರಸ್ ಗೆದ್ದಿದ್ದರು.


ಮಾರ್ಗರೇಟ್‌ ಥ್ಯಾಚರ್‌ಗೆ ಹೋಲಿಸಿದ್ದ ಮಾಧ್ಯಮಗಳು


ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ವಾಪಸಾತಿಯನ್ನು ಟ್ರಸ್ ಆರಂಭದಲ್ಲಿ ವಿರೋಧಿಸಿತು. ಆದಾಗ್ಯೂ, ಇದು ನಂತರ ಬ್ರೆಕ್ಸಿಟ್ ಹೀರೋ ಆಗಿ ಹೊರಹೊಮ್ಮಿದ ಬೋರಿಸ್ ಜಾನ್ಸನ್ ಅವರನ್ನು ಬೆಂಬಲಿಸಿತು. ಬ್ರಿಟಿಷ್ ಮಾಧ್ಯಮಗಳು ಆಕೆಯನ್ನು ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಗೆ ಹೋಲಿಸಿದ್ದವು.


ಇದನ್ನೂ ಓದಿ: Elnaz Rekabi: ಹಿಜಾಬ್ ಧರಿಸದೆ ಈವೆಂಟ್‌ಗೆ ಪ್ರವೇಶಿಸಿದ ಇರಾನ್‌ನ ಮಹಿಳಾ ಅಥ್ಲೀಟ್‌, ಸಿಕ್ತು ಭರ್ಜರಿ ಸ್ವಾಗತ!


ಪ್ರಧಾನಿ ಪಟ್ಟಕ್ಕೆ ರಿಷಿ ಸುನಕ್ ತರಲು ಪ್ರಯತ್ನ


ಈ ಎಲ್ಲಾ ಘಟನೆ ಬಳಿಕ ರಿಷಿ ಸುನಕ್ ಲಿಜ್ ಟ್ರಸ್‌ಗೆ ಉತ್ತಮ ಪರ್ಯಾಯ ಎಂದು ಪಕ್ಷದ ಸದಸ್ಯರಿಗೆ ಮನವರಿಕೆ ಮಾಡುವ ಯತ್ನ ನಡೆಯುತ್ತಿದೆ. ಹೀಗಾಗಿ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿಯಾಗ್ತಾರಾ ಎಂಬ ಆಸೆ ಮತ್ತೆ ಚಿಗುರಿದೆ. ಇನ್ನು ಲಿಜ್ ಟ್ರಸ್ ರಾಜೀನಾಮೆಯಿಂದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಈ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಪ್ರಧಾನಿ ಹುದ್ದೆಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Published by:Annappa Achari
First published: