liveLIVE NOW

LIVE Union Budget 2022: ಬಜೆಟ್ ಮಂಡನೆ ಮುಕ್ತಾಯ, ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು  ಪೇಪರ್ ಲೆಸ್ ಬಜೆಟ್ (Paperless Budget) ಮಂಡಿಸಿದರು. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ.

  • News18 Kannada
  • | February 01, 2022, 13:17 IST
    facebookTwitterLinkedin
    LAST UPDATED 8 MONTHS AGO

    AUTO-REFRESH

    12:36 (IST)

    ಕೇಂದ್ರ ಬಜೆಟ್​ ಮಂಡನೆ ಮುಕ್ತಾಯ

    ಬಜೆಟ್ ಭಾಷಣ ಮುಗಿಸಿದ ಕೇಂದ್ರ ವಿತ್ತ ಸಚಿವೆ

    ಸುಮಾರು 1 ಗಂಟೆ 33 ನಿಮಿಷಗಳ ಕಾಲ ಬಜೆಟ್ ಮಂಡನೆ

    12:32 (IST)

    ಚಿನ್ನ, ವಜ್ರಾಭರಣಗಳು ಅಗ್ಗ

    ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ

    ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ

    ಮೊಬೈಲ್​, ಮೊಬೈಲ್​ ಚಾರ್ಜರ್​ಗಳ ಬೆಲೆ ಇಳಿಕೆ

    ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ

    12:29 (IST)

    ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

    12:28 (IST)

    ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ

    12:24 (IST)

    ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಜಾರಿ

    ಕೊರೋನಾ ನಡುವೆಯೂ GST ಆದಾಯ ಉತ್ತಮ

    ಜನವರಿ 2022ರಲ್ಲಿ ಅತೀ ಹೆಚ್ಚು ಜಿಎಸ್​​ಟಿ ಸಂಗ್ರಹ

    1 ಲಕ್ಷ 40 ಸಾವಿರ ಕೋಟಿ ಜಿಎಸ್​ಟಿ ಸಂಗ್ರಹ

    12:23 (IST)

    ಕೇಂದ್ರ ಮತ್ತು ರಾಜ್ಯ ನೌಕರರಿಗೆ TDS 10ರಿಂದ 14ಕ್ಕೆ ಏರಿಕೆ

    12:21 (IST)

    ಸ್ಟಾರ್ಟ್​​ಅಪ್​ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ

    12:17 (IST)

    ಡಿಜಿಟಲ್​ ಆಸ್ತಿ ಮೇಲೆ ಶೇ.30 ರಷ್ಟು ತೆರಿಗೆ

    ಡಿಜಿಟಲ್ ಆಸ್ತಿ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ

    ವರ್ಚ್ಯುಯಲ್ ಅಸೆಟ್​ ಮೇಲೆ ಶೇ.1ರಷ್ಟು TDS

    12:14 (IST)

    ಸಹಕಾರಿ ಸಂಘಗಳಿಗೆ ಗುಡ್​ನ್ಯೂಸ್

    ಸಹಕಾರಿ ಸಂಘಗಳ ಮೇಲಿನ ಸರ್​​ಚಾರ್ಜ್​ ಇಳಿಕೆ

    ಶೇ.12ರಿಂದ 7ಕ್ಕೆ ಇಳಿಕೆ ಮಾಡಿದ ಕೇಂದ್ರ ಸರ್ಕಾರ

    10 ಕೋಟಿ ಒಳಗಿನ ಆದಾಯದ ಸಹಕಾರಿ ಸಂಘಗಳು

    12:12 (IST)

    ತೆರಿಗೆ ರಿಟರ್ನ್ಸ್​​ಗೆ ಹೊಸ ನೀತಿ 

    ತೆರೆಗೆ ಪಾವತಿಯಲ್ಲಾದ ತಪ್ಪುಗಳನ್ನು ಸರಿಪಡಿಸಲು 2 ವರ್ಷ ಅವಕಾಶ ನೀಡಿದ ಕೇಂದ್ರ

    ಐಟಿ ರಿಟರ್ನ್ಸ್​ ವೇಳೆ ಆಗಿದ್ದ ತಪ್ಪುಗಳನ್ನು ಸರಿಪಡಿಸಲು ಅವಕಾಶ

    ನವದೆಹಲಿ(ಫೆ.01): ಇಂದು ಬಹುನಿರೀಕ್ಷಿತ ಕೇಂದ್ರದ ಬಜೆಟ್ (Union Budget 2022) ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಈ ಬಜೆಟ್ ಮಂಡಿಸಿದ್ದಾರೆ. ಕೊರೋನಾ ನಂತರ ಮಂಡನೆಯಾದ 2ನೇ ಬಜೆಟ್ ಇದಾಗಿದೆ. ಬೆಳಗ್ಗೆ 11 ಗಂಟೆಗೆ ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆ ಶುರುವಾಗಿ 12.33ಕ್ಕೆ ಮುಕ್ತಾಯಗೊಂಡಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು  ಪೇಪರ್ ಲೆಸ್ ಬಜೆಟ್ (Paperless Budget) ಮಂಡಿಸಿದರು. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು.  ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.