ಪ್ರೀತಿಗೆ ಒಪ್ಪದ ಹುಡುಗಿ; ಪೇಸ್​ಬುಕ್​ ಲೈವ್​ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಪ್ರೇಮಿ

ಈ ಇಬ್ಬರು ಪ್ರೇಮಿಗಳು ಹಲವು ವಿಷಯಗಳಿಗಾಗಿ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಗುರುವಾರ ನಡೆದ ಜಗಳದಲ್ಲಿ, ಹುಡುಗಿಯು ಕೋಪದಲ್ಲಿ ಆತನಿಗೆ ಸಾಯುವಂತೆ ಹೇಳಿದ್ದಳು, ನಂತರ ಆತನು ಸಿಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ತನ್ನ ಗೆಳತಿಯಿಂದ ಪ್ರೀತಿಯನ್ನು ತಿರಸ್ಕರಿಸಲ್ಪಟ್ಟ 27 ವರ್ಷದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಲ್ಲಿ ವ್ಯಕ್ತಿಯೋರ್ವ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮತ್ತು ಆತನ  ಆತ್ಮಹತ್ಯೆಯ ಅಂತಿಮ ಕ್ಷಣಗಳನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ್ದಾನೆ ಎನ್ನುವ ಭಯಾನಕ ವಿಷಯವನ್ನು ಪೊಲೀಸರು ಶನಿವಾರ ತಿಳಿಸಿದ್ದಾರೆ. 

  ಕಲ್ಯಾಣ್ (ಪಶ್ಚಿಮ) ನಿವಾಸಿಯಾದ ಅಂಕುಶ್ ಪವಾರ್, ತಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯ ಬಳಿ ಹೋಗಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾನೆ. ಈ ವೇಳೆ ಆತನ  ಗೆಳತಿ ಅವರನ್ನು ಮದುವೆಯಾಗಲು ನಿರಾಕರಿಸಿದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಫೇಸ್‌ಬುಕ್‌ನಲ್ಲಿ ತನ್ನ ಆತ್ಮಹತ್ಯೆಯನ್ನು ಲೈವ್ ಸ್ಟ್ರೀಮ್ ಮಾಡಿದ ಈ ವ್ಯಕ್ತಿಯು, ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ, ತಾನು ಮೂರು ವರ್ಷಗಳಿಂದ ಈ ಹುಡುಗಿಯನ್ನು ಅತ್ಯಂತ ಗಾಡವಾಗಿ ಪ್ರೀತಿಸುತ್ತಿದ್ದು, ಅವಳ ಜೊತೆ ಉತ್ತಮ  ಸಂಬಂಧ ಹೊಂದಿದ್ದೆ ಮತ್ತು ನಾನು ಮಾಡಿದ ಉಳಿತಾಯದ ಹಣವನ್ನು ಸಹ ನೀಡಿದ್ದೇನೆ ಎಂದು ಪೇಸ್​ಬುಕ್​ ಲೈವ್​ ವೇಳೆ ಹೇಳಿದ್ದಾನೆ.

  ಇದನ್ನೂ ಓದಿ: ಎಲ್ಲೆಲ್ಲೂ ದೀದಿ: ಕೇರಳದಲ್ಲಿ ಕಾಣಿಸಿಕೊಂಡ ಕಾಲ್ ದೀದಿ ಸೇವ್ ಇಂಡಿಯಾ, ದೆಹಲಿ ಚಲೋ ಬೃಹತ್​ ಬ್ಯಾನರ್​!!

  ಈ ಇಬ್ಬರು ಪ್ರೇಮಿಗಳು ಹಲವು ವಿಷಯಗಳಿಗಾಗಿ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಗುರುವಾರ ನಡೆದ ಜಗಳದಲ್ಲಿ, ಹುಡುಗಿಯು ಕೋಪದಲ್ಲಿ ಆತನಿಗೆ ಸಾಯುವಂತೆ ಹೇಳಿದ್ದಳು, ನಂತರ ಆತನು ಸಿಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ವೇಳೆತಿಳಿಸಿದ್ದಾರೆ. ಮಹಾರಾಷ್ಟ್ರ ಅಪರಾಧ ವಿಭಾಗದ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಈ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

  ಈ ಸುದ್ದಿ ತುಣುಕು ನಿಮ್ಮನ್ನು ಪ್ರಚೋದಿಸಬಹುದು. ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಸಹಾಯದ ಅಗತ್ಯವಿದ್ದರೆ, ಈ ಯಾವುದೇ ಸಹಾಯವಾಣಿಗೆ ಕರೆ ಮಾಡಿ: ಆಸರೆ (ಮುಂಬೈ) 022-27546669, ಸ್ನೇಹ (ಚೆನ್ನೈ) 044-24640050, ಸುಮೈತ್ರಿ (ದೆಹಲಿ) 011-23389090, ಕ್ರೂಜ್​ (ಗೋವಾ) 0832- 2252525, ಜೀವನ್ (ಜೇಮ್​ಶೆಡ್​ಪುರ ) 065-76453841, ಪ್ರತೀಕ್ಷಾ (ಕೊಚ್ಚಿ) 048-42448830, ಮೈತ್ರಿ (ಕೊಚ್ಚಿ) 0484-2540530, ರೋಶ್ನಿ (ಹೈದರಾಬಾದ್) 040-66202000, ಲೈಫ್‌ಲೈನ್ 033-64643267 (ಕೋಲ್ಕತಾ) , ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ: ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ, ಕರ್ನಾಟಕ ಆರೋಗ್ಯ ಸಹಾಯವಾಣಿ: 104

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: