• Home
  • »
  • News
  • »
  • national-international
  • »
  • Parliament: ಪಾರ್ಲಿಮೆಂಟ್​ನಲ್ಲಿ ಈ ಕೆಲವು ಪದಗಳನ್ನು ಬಳಸುವಂತಿಲ್ಲ! ಲಿಸ್ಟ್ ಉದ್ದ ಇದೆ

Parliament: ಪಾರ್ಲಿಮೆಂಟ್​ನಲ್ಲಿ ಈ ಕೆಲವು ಪದಗಳನ್ನು ಬಳಸುವಂತಿಲ್ಲ! ಲಿಸ್ಟ್ ಉದ್ದ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾರ್ಲಿಮೆಂಟ್​ನಲ್ಲಿ ಕೆಲವೊಮ್ಮೆ ಸಂಸದರು ಬೇಕಾಬಿಟ್ಟಿಯಾಗಿ ಜಗಳವಾಡುವುದನ್ನು ಕಾಣಬಹುದು. ಸ್ಥಳೀಯ ಪದಗಳನ್ನು ಬಳಸಿ ಬೈಯುವುದೂ ಇದೆ. ಈಗ ಕೆಲವೊಂದು ಪದಗಳನ್ನು ಪಾರ್ಲಿಮೆಂಟ್​ನಲ್ಲಿ ಬಳಸಬಾರದು ಎಂದು ಲಿಸ್ಟ್ ಹೊರಡಿಸಲಾಗಿದೆ. ಅಂದ ಹಾಗೆ ಲಿಸ್ಟ್ ಸ್ವಲ್ಪ ಉದ್ದಾನೇ ಇದೆ.

  • Share this:

ಪಾರ್ಲಿಮೆಂಟ್​ಗೆ (Parliament) ಅದರದ್ದೇ ಆದ ಗೌರವವಿದೆ. ಹಾಗಾಗಿ ಬೇಕಾಬಿಟ್ಟಿಯಾಗಿ ಪಾರ್ಲಿಮೆಂಟ್​ನಲ್ಲಿ ಮಾತನಾಡುವಂತಿಲ್ಲ. ಹೀಗಿದ್ದರೂ ಬಹಳಷ್ಟು ಸಲ ಸಂಸದರು (Member of Parliament) ಕೆಲವು ಆಕ್ಷೇಪಾರ್ಹ ಪದಗಳನ್ನು ಪಾರ್ಲಿಮೆಂಟ್​ನಲ್ಲಿ ಬಳಸುವುದನ್ನು ಕಾಣಬಹುದು. ಹಲವು ಸಲ ಸಂಸದರ ವಿಡಿಯೋ ಕ್ಲಿಪ್​ಗಳು, ಸಂಭಾಷಣೆಯ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗುತ್ತವೆ. ಸಂಸದರು ಪರಸ್ಪರ ವಾಗ್ದಾಳಿ, ಟೀಕೆ ಅಥವಾ ಇನ್ಯಾವುದೋ ವಿಚಾರವನ್ನು ಚರ್ಚಿಸುವಾಗ ಕೆಲವು ಆಕ್ಷೇಪಾರ್ಹ ಅಥವಾ ಬಳಸಬಾರದಾದ ಪದಗಳನ್ನು ಬಳಸುತ್ತಾರೆ. ಸಂಸದರ ಬಾಯಲ್ಲಿ ಇಂಥಹ ಪದಗಳು ಕೇಳಿ ಬಂದಾಗ ಈ ಕ್ಲಿಪ್​ಗಳು ಟ್ರೋಲ್ (Troll) ಆಗುತ್ತವೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಟ್ರೋಲಿಗರು ಬಳಸಿಕೊಂಡು, ಎಡಿಟ್ ಮಾಡಿಕೊಂಡು ಸಿಕ್ಕಾಪಟ್ಟೆ ವೈರಲ್ ಮಾಡುತ್ತಾರೆ.


ಈಗ ಸಂಸದರು ಸ್ವಲ್ಪ ತಮ್ಮ ಪದ ಬಳಕೆಯ ಮೇಲೆ ಸ್ವಲ್ಪ ನಿಗಾ ಇಡಬೇಕಾದ ಅನಿವಾರ್ಯತೆ ಇದೆ. ಪಾರ್ಲಿಮೆಂಟ್​ನಲ್ಲಿ ಬಳಸಬರಾದಾದ ಪದಗಳನ್ನು ಲಿಸ್ಟ್ ಮಾಡಲಾಗಿದ್ದು ಈ ಲಿಸ್ಟ್ ಬಿಡುಗಡೆಯಾಗಿದೆ. ಜುಮ್ಲಾದೇವಿ, ಬಾಲ್ ಬುಡ್ಡಿ, ಕೊರೋನಾ ಸ್ಪ್ರೆಡರ್, ಸ್ನೂಪ್ ಗೇಟ್ ಸೇರಿದಂತೆ ಬಹಳಷ್ಟು ಪದಗಳನ್ನು ಅಸಂಸದೀಯ ಪದಗಳು ಎನ್ನುವ ಲಿಸ್ಟ್​ಗೆ ಸೇರಿಸಲಾಗಿದೆ.


ಅಸಂಸದೀಯ ಪದಗಳಿಗೆ ಕತ್ತರಿ


ಈ ಪದಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ "ಅಸಂಸದೀಯ" ಎಂದು ಪರಿಗಣಿಸಲ್ಪಡುವ ಪದಗಳ ಲಿಸ್ಟ್ ಸೇರಿದೆ. ಲೋಕಸಭೆಯ ಕಾರ್ಯದರ್ಶಿಯ ಹೊಸ ಕಿರುಪುಸ್ತಕದಲ್ಲಿ ಬಿಡುಗಡೆ ಮಾಡಲಾದ ಪಟ್ಟಿಯ ಪ್ರಕಾರ ಇವೆಲ್ಲವೂ ಬಳಸಬಾರದ ಪದಗಳಾಗಿವೆ.


ಮಾನ್ಸೂನ್ ಅಧಿವೇಶನಕ್ಕೆ ಮುನ್ನ ಬರುವ ಪುಸ್ತಕ


ಅಸಂಸದೀಯ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಪಟ್ಟಿ ಮಾಡುವ ಕಿರುಪುಸ್ತಕವು ಜುಲೈ 18 ರಿಂದ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಬರುತ್ತದೆ. ಈ ಸಮಯದಲ್ಲಿ 'ಅರಾಜಕತಾವಾದಿ', 'ಶಕುನಿ', 'ಸರ್ವಾಧಿಕಾರಿ', 'ತಾನಶಾ', 'ತಾನಶಾಹಿ', 'ಜೈಚಂದ್', ' ವಿನಾಶ್ ಪುರುಷ', 'ಖಾಲಿಸ್ತಾನಿ' ಮತ್ತು 'ಖೂನ್ ಸೆ ಖೇತಿ' ಎನ್ನುವ ಪದಗಳನ್ನು ಚರ್ಚೆಯ ಸಮಯದಲ್ಲಿ ಅಥವಾ ಉಭಯ ಸದನಗಳಲ್ಲಿ ಸಹ ಬಳಸಬಾರದು.


ಪದಗಳ ದೊಡ್ಡ ಲಿಸ್ಟ್ ಇದೆ


ಲೋಕಸಭೆಯ ಸೆಕ್ರೆಟರಿಯೇಟ್ ಬುಕ್‌ಲೆಟ್ ಪ್ರಕಾರ, 'ದೋಹ್ರಾ ಚರಿತ್ರ', 'ನಿಕಮ್ಮ', 'ನೌತಂಕಿ', 'ಧಿಂಡೋರಾ ಪೀಟ್ನಾ' ಮತ್ತು 'ಬೆಹ್ರಿ ಸರ್ಕಾರ್' ಕೂಡ ಅಸಂಸದೀಯ ಅಭಿವ್ಯಕ್ತಿಗಳು ಎಂದು ಪಟ್ಟಿಮಾಡಲಾದ ಪದಗಳಲ್ಲಿ ಸೇರಿವೆ.


ಕೆಲವು ಪದಗಳು ಮತ್ತು ಅಭಿವ್ಯಕ್ತಿಗಳು ದೇಶದ ವಿವಿಧ ಶಾಸಕಾಂಗ ಸಂಸ್ಥೆಗಳಲ್ಲಿ ಮತ್ತು ಕಾಮನ್‌ವೆಲ್ತ್ ಸಂಸತ್ತುಗಳಲ್ಲಿ ಅಧ್ಯಕ್ಷರು ಕಾಲಕಾಲಕ್ಕೆ ಅಸಂಸದೀಯವೆಂದು ಘೋಷಿಸುತ್ತಾರೆ. ಭವಿಷ್ಯದಲ್ಲಿ ಸಿದ್ಧ ಉಲ್ಲೇಖಕ್ಕಾಗಿ ಲೋಕಸಭೆಯ ಸೆಕ್ರೆಟರಿಯೇಟ್‌ನಿಂದ ಇದನ್ನು ದಾಖಲಿಸಿ ಇಡಲಾಗುತ್ತದೆ.


ಇದನ್ನೂ ಓದಿ: Ice Cream: ಚೀನಾದ ಈ ಐಸ್​ಕ್ರೀಂಗೆ 800 ರೂ, ಬೆಂಕಿ ತಾಗಿಸಿದರೂ ಕರಗಲ್ಲ!


ಅಸಂಸದೀಯ ಪದಗಳ ಪಟ್ಟಿಗೆ ತಿರುಗೇಟು ನೀಡಿದ ಟಿಎಂಸಿಯ ಫೈರ್‌ಬ್ರಾಂಡ್ ಸಂಸದೆ ಮಹುವಾ ಮೊಯಿತ್ರಾ, ಲೋಕಸಭೆ ಮತ್ತು ರಾಜ್ಯಸಭೆಯ ಅಸಂಸದೀಯ ಪದಗಳ ಹೊಸ ಪಟ್ಟಿಯಲ್ಲಿ ಸಂಘಿ ಒಳಗೊಂಡಿಲ್ಲ ಎಂದು ಹೇಳಿದರು. ಸರ್ಕಾರವು ಮೂಲಭೂತವಾಗಿ ವಿರೋಧ ಪಕ್ಷಗಳು ಬಳಸುವ ಎಲ್ಲಾ ಪದಗಳನ್ನು ತೆಗೆದು ಹಾಕಿವೆ ಎಂದು ಆರೋಪಿಸಿದ್ದಾರೆ.ಸಂಕಲನವು 2021 ರಲ್ಲಿ ಭಾರತದಲ್ಲಿ ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಅಸಂಸದೀಯವೆಂದು ಘೋಷಿಸಲಾದ ಪದಗಳು ಮತ್ತು ಅಭಿವ್ಯಕ್ತಿಗಳ ಉಲ್ಲೇಖಗಳನ್ನು ಒಳಗೊಂಡಿದೆ.


ಇಂಗ್ಲಿಷ್ ಪದಗಳನ್ನು ಅಸಂಸದೀಯ ಪದಗಳ ಲಿಸ್ಟ್ ನಲ್ಲಿ ಇಂಗ್ಲಿಷ್ ಪದಗಳು:


ಅಸಂಸದೀಯ ಎಂದು ಪಟ್ಟಿ ಮಾಡಲಾದ ಇಂಗ್ಲಿಷ್ ಪದಗಳಲ್ಲಿ 'ರಕ್ತಪಾತ', 'ರಕ್ತಸಿಕ್ತ', 'ಬಿಟ್ರೆಡ್', 'ಶೇಮ್ಡ್', 'ಅಬ್ಯುಸ್ಡ್', 'ಚೀಟೆಡ್, 'ಚಮ್ಚಾ', 'ಚಮಚಗಿರಿ', 'ಚೇಲಾಸ್', 'ಬಾಲ್ಡಿಶ್ನೆಸ್', 'ಭ್ರಷ್ಟ' 'ಹೇಡಿ', 'ಅಪರಾಧ' ಮತ್ತು 'ಮೊಸಳೆ ಕಣ್ಣೀರು' ಹೀಗಿರುವ ಪದಗಳಿವೆ.


‘ಅವಮಾನ’, ‘ಕತ್ತೆ’, ‘ನಾಟಕ’, ‘ಕಣ್ಣು ತೊಳೆಯುವುದು’, ‘ಮಿಠಿ’, ‘ಗೂಂಡಾಗಿರಿ’, ‘ಬೂಟಾಟಿಕೆ’, ‘ಅಸಮರ್ಥ’, ‘ತಪ್ಪುದಾರಿ’, ‘ಸುಳ್ಳು’ ಮತ್ತು ‘ಅಸತ್ಯ’ ಮುಂತಾದ ಪದಗಳನ್ನು  ನಿಷೇಧಿಸಲಾಗುವುದು.


ಅಸಂಸದೀಯ ಹಿಂದಿ ಪದಗಳು


ಅಸಂಸದೀಯ ಎಂದು ಪಟ್ಟಿ ಮಾಡಲಾದ ಹಿಂದಿ ಪದಗಳು 'ಅರಾಜಕತಾವಾದಿ', 'ಗದ್ದರ್', 'ಗಿರ್ಗಿಟ್', 'ಗೂಂಡಾಗಳು', 'ಘಡಿಯಲಿ ಅನ್ಸು', 'ಅಪ್ಮಾನ್', 'ಅಸತ್ಯ', 'ಅಹಂಕಾರ', 'ಭ್ರಷ್ಟ', 'ಕಾಲಾ ದಿನ', 'ಕಲಾ ಬಜಾರಿ' ಮತ್ತು 'ಖರೀದ್ ಫರೋಖ್ತ್' ಸೇರಿದೆ.

Published by:Divya D
First published: