ನೀವು ಯಾವುದೇ ದೇಶಕ್ಕೆ ಭೇಟಿಕೊಟ್ಟಾಗ ಮೊದಲು ನಿಮ್ಮನ್ನು ಆಕರ್ಷಿಸುವುದು ಅಲ್ಲಿನ ಏರ್ಪೋರ್ಟ್ (Airport), ಬಸ್ಸ್ಟ್ಯಾಂಡ್ (Bus Stand), ರೈಲ್ವೇ ಸ್ಟೇಷನ್ (Railway Station). ಕೈಗೆಟುಕುವ ಸಾರಿಗೆ ವ್ಯವಸ್ಥೆ, ದುಬಾರಿಯಲ್ಲದ ಟಿಕೆಟ್ಸ್, ಪಾದಚಾರಿಗಳಿಗೆ ಸೂಕ್ತ ರಸ್ತೆ, ವಿಶೇಷ ಚೇತನಗೆ ಸರಿಯಾದ ಮಾರ್ಗ, ಸಬ್ವೇ, ಟ್ರಾಫಿಕ್ ಇದೆಲ್ಲವೂ ಆ ದೇಶವನ್ನು ಒಮ್ಮೆ ಭೇಷ್ ಎನ್ನುವಂತೆ ಮಾಡುತ್ತದೆ. ಹೀಗೆ ಇಂತಹ ಸುಸಜ್ಜಿತ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ 19 ದೇಶಗಳ ಪಟ್ಟಿಯನ್ನು ಲಂಡನ್ ಮೂಲದ ಮಾಧ್ಯಮ ಸಂಸ್ಥೆ ಟೈಂ ಔಟ್ ಬಿಡುಗಡೆ ಮಾಡಿದೆ. ಜರ್ಮನಿಯ ಬರ್ಲಿನ್ ವಿಶ್ವದಲ್ಲೇ ಅಗ್ರಸ್ಥಾನ ಹೊಂದಿದೆ. ಖುಷಿ ವಿಷಯ ಏನಂದ್ರೆ ನಮ್ಮ ಭಾರತ 19 ನೇ ಸ್ಥಾನದಲ್ಲಿದೆ.
ಲಂಡನ್ನ ಟೈಂ ಔಟ್ ಸರ್ವೆ
ಲಂಡನ್ನ ಮಾಧ್ಯಮ ಸಂಸ್ಥೆ ಟೈಂ ಔಟ್ 50 ದೇಶಗಳಲ್ಲಿ 20,000 ಜನರನ್ನು ಸಮೀಕ್ಷೆ ಒಳಪಡಿಸಿತ್ತು. ತಮ್ಮ ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತೃಪ್ತಿದಾಯಕವಾಗಿಯೇ? ಎಲ್ಲಾ ಸೌಲಭ್ಯಗಳನ್ನು ಹೊಂದಿದೆಯೇ? ಬಳಕೆದಾರ ಸ್ನೇಹಿಯೇ? ಎನ್ನುವ ಅಂಶಗಳನ್ನು ಕೇಳಲಾಗಿದೆ. ಈ ನಿಟ್ಟಿನಲ್ಲಿ ಬರ್ಲಿನ್ ಕೈಗೆಟುಕುವ ಸಾರಿಗೆ ವ್ಯವಸ್ಥೆಯಾಗಿದ್ದು, ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ ಎಂದು ಅಲ್ಲಿನ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬರ್ಲಿನ್ ಮೆಟ್ರೊ ವ್ಯವಸ್ಥೆಗೆ ಶ್ಲಾಘನೆ
ವಿಶ್ವದ ಉತ್ತಮ ಸಾರಿಗೆ ವ್ಯವಸ್ಥೆಯ ಪಟ್ಟಿಯಲ್ಲಿ ಬರ್ಲಿನ್‌ಗೆ ಮೊದಲ ಸ್ಥಾನ ಲಭಿಸಿದೆ. ಅದರಲ್ಲೂ ಬರ್ಲಿನ್ನ ಮೆಟ್ರೋದಲ್ಲಿರುವ ಯು-ಬಾನ್ 175 ಸ್ಟೇಷನ್ಗಳ ಕನೆಕ್ಟಿವಿಗೆ 9 ಲೈನ್ಗಳ ವ್ಯವಸ್ಥೆ ಹೊಂದಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಬರ್ಲಿನ್ನ್ ಶೇಕಡಾ 97 ರಷ್ಟು ಜನರು ಅಲ್ಲಿನ ಸಾರಿಗೆ ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ. ಇನ್ನು ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರನ್ನು ಖುಲಾಸೆಗೊಳಿಸಿದ ಕೋರ್ಟ್!
ಟ್ರೈನ್ಗಳಲ್ಲಿ ಜನರಿಂದ ತುಂಬಿ ತುಳುಕುವ ಮುಂಬೈಗೆ 19 ನೇ ಸ್ಥಾನ
ವಾಣಿಜ್ಯನಗರಿ ಮುಂಬೈ ವಿಶ್ವದ ಸಾರ್ವಜನಿಕ ಸಾರಿಗೆಯಲ್ಲಿ ಅತ್ಯುತ್ತಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವಾಣಿಜ್ಯ ನಗರಿಗೆ 19 ನೇ ಸ್ಥಾನ ದೊರೆಯುವ ಮೂಲಕ ಹರ್ಷ ತಂದಿದೆ. ಮುಂಬೈನ ಸಬ್ ಅರ್ಬನ್ ರೈಲ್ವೆ ಜಾಲವು ಮುಂಬೈ ನಗರದ 12.5 ಮಿಲಿಯನ್ ಜನರಿಗೆ ಭರವಸೆಯ ಬೆಳಕಾಗಿದೆ. ಸಾಮಾನ್ಯವಾಗಿ ಮುಂಬೈಗೆ ಹೋದವರಿಗೆ ಅಲ್ಲಿನ ರೈಲ್ವೇ ನಿಲ್ದಾಣಗಳು ಸದಾ ಕಿಕ್ಕಿರಿದು ತುಂಬಿರುವ ದೃಶ್ಯ ಕಾಣ ಸಿಗುತ್ತದೆ. ಇದು ಅಲ್ಲಿನ ರೈಲ್ವೆ ವ್ಯವಸ್ಥೆಯ ಬಗ್ಗೆ ಜನರಿಗಿರುವ ನಂಬಿಕೆಯನ್ನು ತೋರುತ್ತದೆ.
ಇದನ್ನೂ ಓದಿ: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ
ಈ ರೈಲ್ವೇ ವ್ಯವಸ್ಥೆಯ ಕಾರಣದಿಂದ ಪ್ರತಿನಿತ್ಯ ಲಕ್ಷಾಂತರ ಜನರು ಸುಲಭದಲ್ಲಿ ಕ ಸಾರ್ವಜನಿಕ ಸೇವೆಯ ಫಲಾನುಭವಿಗಳಾಗಿದ್ದಾರೆ.
ವಿಶ್ವದ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಹೊಂದಿರುವ 10 ಸಿಟಿಗಳು ಇಲ್ಲಿದೆ.
ಬರ್ಲಿನ್ |
ಪ್ರೆಗು |
ಟೋಕಿಯೋ |
ಕೋಪನ್ ಹ್ಯಾಗನ್ |
ಸ್ಟಾಕ್ಹೋಮ್ |
ಸಿಂಗಾಪುರ |
ಹಾಂಗ್ಕಾಂಗ್ |
ತೈಪೆ |
ಶಾಂಘೈ |
ಆಮ್ಸ್ಟರ್ಡಾಮ್ |
ಇನ್ನೂ ಮುಂಬೈ ವಾಯು ಮಾಲಿನ್ಯ ನಿಯಂತ್ರಣಕ್ಕೂ ಸಾಕಷ್ಟು ಕ್ರಮ ಗೊಂಡಿದೆ. ಮೆಟ್ರೊ, ಎಲೆಕ್ಟ್ರಿಕಲ್ ವಾಹನಗಳನ್ನು ಆರಂಭಿಸುವ ಮೂಲಕ ಮಾಲಿನ್ಯ ನಿಯಂತ್ರನವನ್ನೂ ಕೈಗೊಂಡಿದೆ.
3 ನೇ ಸ್ಥಾನದಲ್ಲಿ ಟೋಕಿಯೋ
ಟೋಕಿಯೋ ತನ್ನ ನಿವಾಸಿಗಳಿಗೆ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒದಗಿಸಿಕೊಟ್ಟಿದೆ. ಜೊತೆಗೆ ಬೇರೆ ದೇಶದ ಪ್ರಜೆಗಳಿಗೂ, ಅನ್ಯಭಾಷಿಕರು ಸುಲಭ ಸಾರಿಗೆ ವ್ಯವಸ್ಥೆಯನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಉದಾ: ಅನೇಕ ಬಸ್ ಮತ್ತು ರೈಲ್ವೆ ನಿಲ್ದಾಣಗಳ್ಲಿ ಬಹುಭಾಷಾ ಚಿಹ್ನೆಗಳು ಮತ್ತು ಪ್ರಕಟಣೆಗಳನ್ನು ಹೊಂದಿದೆ. ಕೆಲವು ರೈಲುಗಳು ಬಹುಭಾಷೆಯ ಪ್ರದರ್ಶನದ ಮೂಲಕ ಸಾರಿಗೆಯನ್ನು ಅನ್ಯಭಾಷಿಕರಿಗೆ ಸುಗಮಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ