• Home
 • »
 • News
 • »
 • national-international
 • »
 • Cancer: ಕ್ಯಾನ್ಸರ್‌ ಮಣಿಸಿದ ಗಟ್ಟಿಗಿತ್ತಿ; ಕೀಮೋಗೆ ಉದುರಿದ ಕೂದಲು, ಉದ್ಯೋಗದಿಂದಲೇ ವಜಾ ಮಾಡಿದ ಕಂಪನಿ!

Cancer: ಕ್ಯಾನ್ಸರ್‌ ಮಣಿಸಿದ ಗಟ್ಟಿಗಿತ್ತಿ; ಕೀಮೋಗೆ ಉದುರಿದ ಕೂದಲು, ಉದ್ಯೋಗದಿಂದಲೇ ವಜಾ ಮಾಡಿದ ಕಂಪನಿ!

ಕ್ಯಾನ್ಸರ್ ಗೆದ್ದ ಲಿಸಾ

ಕ್ಯಾನ್ಸರ್ ಗೆದ್ದ ಲಿಸಾ

ಮೂಳೆ ಮಜ್ಜೆಯ ಪ್ಲಾಸ್ಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಲೀಸಾ ರೇ, ತಾವು ಅನುಭವಿಸಿದ ಯಾತನೆ ಹಾಗೂ ಹೋರಾಟದ ಕಥಾನಕವನ್ನು ಬರವಣಿಗೆಯ ಮೂಲಕ ವರ್ಣಿಸಿದ್ದಾರೆ.

 • Share this:

  ಕ್ಯಾನ್ಸರ್‌ನಂತಹ (Cancer) ಮಾರಕ ರೋಗದಿಂದ ಬದುಕುಳಿದಿರುವ ಲೀಸಾ ರೇ, ಹ್ಯೂಮನ್ಸ್ ಆಫ್ ಬಾಂಬೆ ಬ್ಲಾಗ್‌ನೊಂದಿಗೆ ರೋಗದೊಂದಿಗೆ ಹೋರಾಡಿದ ತನ್ನ ಕಥಾನಕವನ್ನು ಬಣ್ಣಿಸಿದ್ದಾರೆ, ಮಾರಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದು ಹೇಗೆ ಮತ್ತು ಕ್ಯಾನ್ಸರ್ ಆಕೆಯ ಜೀವನವನ್ನು ಹೇಗೆ ಬದಲಾಯಿಸಿತು ಎಂಬ ವಿವರವನ್ನು ಹಂಚಿಕೊಂಡಿದ್ದಾರೆ. ಲೀಸಾ ಅವರ ಪೋಸ್ಟ್ ಸದ್ಯ ಭಾರೀ ವೈರಲ್ ಆಗಿದೆ. ಮೂಳೆ ಮಜ್ಜೆಯ ಪ್ಲಾಸ್ಮಾ ಕ್ಯಾನ್ಸರ್‌ನಿಂದ (Plasma Cancer)ಬಳಲುತ್ತಿದ್ದ ಲೀಸಾ ರೇ, ತಾವು ಅನುಭವಿಸಿದ ಯಾತನೆ ಹಾಗೂ ಹೋರಾಟದ ಕಥಾನಕವನ್ನು ಬರವಣಿಗೆಯ ಮೂಲಕ ವರ್ಣಿಸಿದ್ದಾರೆ.


  ಕ್ಯಾನ್ಸರ್ ನೀಡಿದ್ದ ಪೆಟ್ಟು ಅಷ್ಟಿಷ್ಟಲ್ಲ


  ವೈದ್ಯರ ಬಳಿ ಪರೀಕ್ಷೆಗೆ ಹೋದ ಸಮಯದಲ್ಲಿ ಲೀಸಾ ದೇಹದಲ್ಲಿ ಕೆಂಪು ರಕ್ತಕಣಗಳು ಕ್ಷೀಣಗೊಂಡಿದ್ದವು ಇದರಿಂದ ನೀವು ಯಾವಾಗ ಬೇಕಾದರೂ ಹೃದಯ ಸ್ತಂಭನಕ್ಕೆ ಒಳಗಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದರು ಎಂಬುದನ್ನು ಲೀಸಾ ಸ್ಮರಿಸಿಕೊಂಡಿದ್ದಾರೆ. ಲೀಸಾ ಅವರ ರಕ್ತಪರೀಕ್ಷೆಯನ್ನು ವರದಿಯನ್ನು ನೋಡಿದ ವೈದ್ಯರು ಈ ಹೇಳಿಕೆಯನ್ನು ನೀಡಿದ್ದಲ್ಲದೆ ವರದಿ ನೋಡಿದ ಇನ್ನೊಬ್ಬ ವೈದ್ಯರು ಲೀಸಾ, ಮೂಳೆ ಮಜ್ಜೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ತಿಳಿಸಿದ್ದರು. ಆ ಸಮಯದಲ್ಲಿ ಒಂದು ಕ್ಷಣ ನಾನು ಉಸಿರಾಡುವುದನ್ನೇ ನಿಲ್ಲಿಸಿದೆ ಎಂದು ಹೇಳುವ ಲೀಸಾ, ನನ್ನ ದೇಹದ ಒಂದು ಭಾಗ ಫ್ಯಾಶನ್ ಜಗತ್ತಿನ ರೆಡ್ ಕಾರ್ಪೆಟ್‌ ಅನ್ನು ಆಳುತ್ತಿದ್ದರೆ ಇನ್ನೊಂದು ಭಾಗ ಅಂತಿಮ ವಿಶ್ರಾಂತಿಯನ್ನು ಬಯಸುವ ಧಾವಂತದಲ್ಲಿತ್ತು ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್‌ ಎಂದರೇನು? ಬೇಗ ಗುಣಪಡಿಸೋದು ಹೇಗೆ? ಇಲ್ಲಿದೆ ಮಾಹಿತಿ


  ಸಾವಿನ ಮನೆಯ ಕದತಟ್ಟಿ ಮರುಹುಟ್ಟು ಪಡೆದುಕೊಂಡ ಲೀಸಾ


  ಮೂಳೆ ಮಜ್ಜೆಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾವಿನ ಮನೆಯ ಕದತಟ್ಟಿ ನಾನು ಮರುಹುಟ್ಟು ಪಡೆದುಕೊಂಡಿರುವ ಎಂದು ಹೇಳಿರುವ ಲೀಸಾ ರೇ ಕ್ಯಾನ್ಸರ್ ನನ್ನ ಸಂಪೂರ್ಣ ಜೀವನವನ್ನೇ ಬದಲಾಯಿಸಿತು ಎಂದು ತಿಳಿಸಿದ್ದಾರೆ. ಕ್ಯಾನ್ಸರ್‌ನೊಂದಿಗೆ ಜೀವಿಸುವುದು ಹೇಗೆ ಎಂಬುದರ ಕುರಿತು ನಾನು ಬ್ಲಾಗ್ ಬರೆದಿರುವೆ ಎಂದು ತಿಳಿಸಿರುವ ಲೀಸಾ, ಜನರು ನನ್ನ ಪ್ರಮಾಣೀಕತೆಯನ್ನು ಒಪ್ಪಿಕೊಂಡಿದ್ದರಿಂದ ನನ್ನನ್ನು ನಾನು ಸ್ವೀಕರಿಸುವಲ್ಲಿ ಧೈರ್ಯವನ್ನು ಕಂಡುಕೊಂಡೆ ಎಂದು ತಿಳಿಸಿದ್ದಾರೆ.


  ಕೀಮೋದಿಂದ ಕೂದಲೂ ಹೋಯಿತು ಉದ್ಯೋಗವೂ ನಷ್ಟವಾಯಿತು


  ಚಿಕಿತ್ಸೆಯ ನಂತರದ ಜೀವನ ಎಷ್ಟು ಯಾತನಾಮಯವಾಗಿತ್ತು ಎಂದು ತಿಳಿಸಿರುವ ಲೀಸಾ ರೇ ಕೀಮೋದಿಂದ ಕೂದಲು ಕಳೆದುಕೊಂಡಿದ್ದು ಮಾತ್ರವಲ್ಲದೆ ಟ್ರಾವೆಲ್ ಚಾನಲ್‌ನಲ್ಲಿದ್ದ ಉದ್ಯೋಗವೂ ಕೈಬಿಟ್ಟುಹೋಯಿತು ಎಂಬುದನ್ನು ತಿಳಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ವಿಗ್ ಧರಿಸುವ ಪ್ರಯತ್ನವನ್ನು ಮಾಡಿದ್ದ ಲೀಸಾ ಹಾಸ್ಯಸ್ಪದ ಎಂಬುದಾಗಿ ನನಗದು ಮನವರಿಕೆಯಾಯಿತು ಎಂದು ಆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಕೀಮೋದ ನಂತರ ನನ್ನ ಸಣ್ಣದಾಗಿದ್ದ ಕೂದಲಿನೊಂದಿಗೆ ಪ್ರಯಾಣಿಸುತ್ತಿದ್ದೆ ಇದನ್ನು ನಾನು ಕೀಮೋ ಕಟ್ ಎಂದು ಉಲ್ಲೇಖಿಸಿದ್ದೇನೆ ಎಂದು ಲೀಸಾ ಹೇಳಿಕೊಂಡಿದ್ದಾರೆ.


  ಕ್ಯಾನ್ಸರ್ ಸಂಪೂರ್ಣ ಜೀವನವನ್ನೇ ಬದಲಾಯಿಸಿದೆ


  3 ವರ್ಷಗಳ ಚೇತರಿಕೆಯ ನಂತರ ನಟಿ ಮಾಡೆಲ್ ಲೀಸಾ ರೇ, ಪುನಃ ಅನಾರೋಗ್ಯಕ್ಕೆ ಒಳಗಾದರು. ಈ ಸಮಯದಲ್ಲಿ ಆಕೆಯನ್ನು ಪುನಃ ಕಾಡಿದ್ದ ಕ್ಯಾನ್ಸರ್‌ನಿಂದ ಹೇಗೆ ಚೇತರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ನಾನು ಆಂತರಿಕವಾಗಿ ಗಟ್ಟಿಗೊಂಡೆ. ನನ್ನ ಒಳಗಿನ ಧ್ವನಿಯನ್ನು ಆಲಿಸಿದೆ. 3 ವಾರಗಳ ಪರಿವರ್ತನೆ ಕಾರ್ಯಕ್ರಮಕ್ಕೆ ನನ್ನನ್ನು ನಾನು ತೊಡಗಿಸಿಕೊಂಡೆ. ಧ್ಯಾನ ಮಾಡಿದೆ, ಬೇರೆ ಬೇರೆ ಜ್ಯೂಸ್ ಸೇವಿಸಿದೆ ಮೊಳಕೆಗಳನ್ನು ತಿಂದಿರುವೆ ಹೀಗೆ ನನ್ನೆಲ್ಲಾ ಆಹಾರ ಅಭ್ಯಾಸಗಳನ್ನು ಮಾರ್ಪಡಿಸಿಕೊಂಡೆ. ಯಾವುದೇ ಮಜ್ಜೆ ಸರ್ಜರಿ ಇಲ್ಲದೆಯೇ ಪುನಃ ಕ್ಯಾನ್ಸರ್ ಅನ್ನು ಸೋಲಿಸಿದೆ. ಇದಾಗಿ 9 ವರ್ಷಗಳೇ ಕಳೆದಿವೆ. ಹೆಚ್ಚಿನ ಚಿತ್ರಗಳಲ್ಲಿ ಪಾತ್ರನಿಭಾಯಿಸಿರುವೆ, ಪುಸ್ತಕ ಬರೆದಿರುವೆ, ಕ್ಯಾನ್ಸರ್ ಬಗ್ಗೆ ಕಾಳಜಿ ಮೂಡಿಸಿರುವೆ, ಮಕ್ಕಳನ್ನು ಹೊಂದಿರುವೆ ಹಾಗೂ ಕಲಾ ವೇದಿಕೆಯನ್ನು ಆರಂಭಿಸುವ ಧೈರ್ಯವನ್ನು ಪಡೆದುಕೊಂಡೆ ಎಂದು ಲೀಸಾ ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್ ಬರಲು ಇದೇ ಕಾರಣವಂತೆ, ಅದರ ಲಕ್ಷಣಗಳು ಇಲ್ಲಿದೆ


  ಸಾಮಾನ್ಯವಾಗಿ ಅಂತ್ಯ ಹಾಡುವ ಕಾಯಿಲೆಯೇ ನನ್ನನ್ನು ಹಾಗೂ ನನ್ನ ಜೀವನವನ್ನು ಬದಲಾಯಿಸಿತು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಬದುಕಬೇಕೆನ್ನುವ ಇಚ್ಛೆಯನ್ನು ಬಲಪಡಿಸಿತು ವಿಪರ್ಯಾಸವೆಂದರೆ ಇದೇ ಅಲ್ಲವೇ ಎಂಬ ಮಾತುಗಳೊಂದಿಗೆ ತಮ್ಮ ಪೋಸ್ಟ್‌ ಅನ್ನು ನಟಿ ಕೊನೆಗೊಳಿಸಿದ್ದಾರೆ.

  Published by:Precilla Olivia Dias
  First published: