HOME » NEWS » National-international » LIQUOR SHOP AUCTION IN RAJASTHAN VILLAGE ALCOHOL SHOP BIDDING ENDS AT 510 CRORE RUPEES STG SCT

Liquor Shop: ರಾಜಸ್ಥಾನದ ಗ್ರಾಮವೊಂದರ ಲಿಕ್ಕರ್‌ ಶಾಪ್ 510 ಕೋಟಿ ರೂ.ಗೆ ಹರಾಜು!

Rajasthan: ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ ಮದ್ಯದಂಗಡಿಯ 500 ಕೋಟಿ ರೂ. ಗೂ ಹೆಚ್ಚು ಮೊತ್ತಕ್ಕೆ ಬಿಡ್‌ ಆಗಿದೆ.

news18
Updated:March 10, 2021, 1:42 PM IST
Liquor Shop: ರಾಜಸ್ಥಾನದ ಗ್ರಾಮವೊಂದರ ಲಿಕ್ಕರ್‌ ಶಾಪ್ 510 ಕೋಟಿ ರೂ.ಗೆ ಹರಾಜು!
ಸಾಂದರ್ಭಿಕ ಚಿತ್ರ
  • News18
  • Last Updated: March 10, 2021, 1:42 PM IST
  • Share this:
ಹಳ್ಳಿಯೊಂದರ ಮದ್ಯದಂಗಡಿ ಅಬ್ಬಬ್ಬಾ ಅಂದರೆ ಎಷ್ಟು ಮೊತ್ತಕ್ಕೆ ಹರಾಜಾಗಬಹುದು. ಆದರೆ, ರಾಜಸ್ಥಾನದಲ್ಲಿ ನೀವು ನಂಬಲಸಾಧ್ಯವಾದ ಘಟನೆ ನಿಜಕ್ಕೂ ನಡೆದಿದೆ. ರಾಜಸ್ಥಾನದ ಹನುಮಾನ್‌‌ಗಢ ಜಿಲ್ಲೆಯ ಗ್ರಾಮವೊಂದರ ಲಿಕ್ಕರ್‌ ಶಾಪ್‌ ಬರೋಬ್ಬರಿ 510 ಕೋಟಿ ರೂ. ಗೆ ಹರಾಜಾಗಿದೆ. ಇದೇನಪ್ಪಾ ವಿಚಿತ್ರ ಅಂತೀರಾ.. ಹೌದು, ಬೆಳಗ್ಗೆಯಿಂದ ನಸುಕಿನ ಜಾವದವರೆಗೂ ಈ ಮದ್ಯದಂಗಡಿ ಕೊಂಡುಕೊಳ್ಳಲು ಬಿಡ್ಡಿಂಗ್ ನಡೆದಿದ್ದು, 72 ಲಕ್ಷ ರೂ. ಗಳ ಮೂಲ ಬೆಲೆ ಹೊಂದಿದ್ದ ಲಿಕ್ಕರ್‌ ಶಾಪ್‌ 500 ಕೋಟಿ ರೂ. ಗೂ ಹೆಚ್ಚು ಮೊತ್ತಕ್ಕೆ ಸೇಲಾಗಿದೆ.

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ ಮದ್ಯದಂಗಡಿಯ ಹರಾಜು ನಿಜವಾಗಿಯೂ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಬಿಡ್ಡಿಂಗ್ ಮಧ್ಯರಾತ್ರಿಯ ನಂತರ ಅಂತ್ಯವಾಗಿದೆ. ಅದೂ ಸಹ 500 ಕೋಟಿ ರೂ. ಗೂ ಹೆಚ್ಚು ಮೊತ್ತಕ್ಕೆ ಬಿಡ್‌ ಆಗಿದೆ. ರಾಜಸ್ಥಾನದಲ್ಲಿ ಮದ್ಯದಂಗಡಿಗಳ ಹರಾಜು ಹೊಸ ಪರಿಕಲ್ಪನೆಯಲ್ಲ. ಇತ್ತೀಚೆಗೆ, ರಾಜ್ಯದಲ್ಲಿ ಇ-ಹರಾಜನ್ನು ಪುನಾರಂಭಿಸಲಾಗಿದೆ.

ಅಂತಹ 7,000 ಕ್ಕೂ ಹೆಚ್ಚು ಅಂಗಡಿಗಳನ್ನು ಇದೇ ರೀತಿ ಹರಾಜು ಹಾಕಲಾಗುತ್ತದೆ ಎಂದು ತಿಳಿದುಬಂದಿದೆ. ಮಾಜಿ ಸಿಎಂ ವಸುಂಧರಾ ರಾಜೆ ಈ ವ್ಯವಸ್ಥೆಯನ್ನು ರದ್ದುಗೊಳಿಸಿದ್ದರೂ, ಸಿಎಂ ಅಶೋಕ್‌ ಗೆಹ್ಲೋಟ್‌ ಅವಧಿಯಲ್ಲಿ ಮತ್ತೆ ಬಿಡ್ಡಿಂಗ್ ಪ್ರಾರಂಭವಾಗಿದೆ.

ಹನುಮಾನ್‌ಗಢ ಜಿಲ್ಲೆಯಲ್ಲಿ ನಡೆದ ಈ ಹರಾಜಿನಲ್ಲಿ, ಬೆಳಗ್ಗೆ 72 ಲಕ್ಷ ರೂ.ಗಳಿಂದ ಪ್ರಾರಂಭವಾದ ಬಿಡ್ಡಿಂಗ್ ಮುಂದುವರಿಯುತ್ತಲೇ ಇತ್ತು. ಬಿಡ್‌ದಾರರು ಆ ಲಿಕ್ಕರ್‌ ಶಾಪ್‌ಗೆ ಹೆಚ್ಚು ಬೆಲೆಯನ್ನು ಉಲ್ಲೇಖಿಸುತ್ತಲೇ ಇದ್ದರು. ಇಡೀ ದಿನ ಮುಂದುವರಿದ ಬಿಡ್ಡಿಂಗ್, ಮಧ್ಯರಾತ್ರಿಯೂ ನಡೆದು ಮುಂಜಾನೆ 2 ಗಂಟೆಗೆ ಅಂತ್ಯಗೊಂಡಿದೆ. ಅದೂ ಬರೋಬ್ಬರಿ 510 ಕೋಟಿ ರೂ.ಗೆ ಬಿಡ್‌ ಆಗಿದೆ.

ಇದನ್ನೂ ಓದಿ: Mamata Banerjee | ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಟೀ ಮಾಡಿದ ಸಿಎಂ ಮಮತಾ ಬ್ಯಾನರ್ಜಿ; ವಿಡಿಯೋ ವೈರಲ್

ಹನುಮಾನ್‌ಗಢ ಜಿಲ್ಲೆಯ ನೊಹಾರ್‌ನಲ್ಲಿರುವ ವೈನ್ ಅಂಗಡಿಯ ಮೂಲ ಬೆಲೆ 72 ಲಕ್ಷ ರೂ.ಗಳಾಗಿದ್ದು, ಕಳೆದ ವರ್ಷ ಇದು ಲಾಟರಿ ಬಿಡ್‌ನಲ್ಲಿ 65 ಲಕ್ಷ ರೂ.ಗೆ ಮಾರಾಟವಾಗಿತ್ತು ಎಂದು ವರದಿಗಳು ತಿಳಿಸಿವೆ. ಆದರೆ ಈ ವರ್ಷದ ಇ-ಹರಾಜಿನಲ್ಲಿ ಅಂಗಡಿಯ ಮೌಲ್ಯವನ್ನು 510 ಕೋಟಿ ರೂ. ಗೆ ಬಿಡ್‌ ಮಾಡಲಾಗಿದೆ. ಈ ಮದ್ಯದಂಗಡಿಯನ್ನು ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಮಹಿಳೆಯರು ಖರೀದಿಸಿದ್ದು, ಅವರಲ್ಲಿ ಒಬ್ಬರ ಹೆಸರು ಕಿರಣ್ ಕನ್ವರ್ ಎಂದು ತಿಳಿದುಬಂದಿದೆ.

510 ಕೋಟಿ ರೂ.ಗಳಿಗೆ ಮದ್ಯದಂಗಡಿ ಹರಾಜಾಗಿರುವ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರು ತೀವ್ರ ಅಚ್ಚರಿ ಪಟ್ಟಿದ್ದಾರೆ. ಇದು ಮೂಲ ಬೆಲೆ 72 ಲಕ್ಷ ರೂ. ಗಿಂತ 708 ಪಟ್ಟು ಹೆಚ್ಚು ಬಿಡ್ ಆಗಿದೆ.
Youtube Video

ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ, ಹೊಸ ಮದ್ಯದಂಗಡಿ ಮಾಲೀಕರು ಶಾಪ್‌ನ ವೆಚ್ಚದ ಶೇ. 2 ರಷ್ಟು ಹಣವನ್ನು ಅಧಿಕಾರಿಗಳಿಗೆ ಪಾವತಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ಹೊಸ ಅಬಕಾರಿ ನೀತಿಯು ಹಿಂದಿನ ಲಾಟರಿ ವ್ಯವಸ್ಥೆಗೆ ಬದಲಾಗಿ, ಈಗ ರಾಜ್ಯದ ಮದ್ಯದಂಗಡಿಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುವುದು ಎಂದು ಹೇಳಿದೆ.
Published by: Sushma Chakre
First published: March 10, 2021, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories