• Home
  • »
  • News
  • »
  • national-international
  • »
  • Liquor Bottles: ಮದ್ಯದ ಬಾಟಲಿಯಿಂದ ಮಹಿಳೆಯರಿಗೆ ಉದ್ಯೋಗ! ಹೆಣ್ಣುಮಕ್ಕಳ ಕೈಯಲ್ಲಿ ನಳನಳಿಸಲಿವೆ ಲಿಕ್ಕರ್ ಬಾಟಲಿ

Liquor Bottles: ಮದ್ಯದ ಬಾಟಲಿಯಿಂದ ಮಹಿಳೆಯರಿಗೆ ಉದ್ಯೋಗ! ಹೆಣ್ಣುಮಕ್ಕಳ ಕೈಯಲ್ಲಿ ನಳನಳಿಸಲಿವೆ ಲಿಕ್ಕರ್ ಬಾಟಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮದ್ಯವನ್ನೇನೋ ನಾಶಪಡಿಸಬಹುದು, ಆದ್ರೆ ಅಷ್ಟೊಂದು ಗಾಜಿನ ಬಾಟಲಿಗಳನ್ನಾದ್ರೂ ಏನು ಮಾಡ್ತಾರೆ? ಒಡೆದು ಪುಡಿಪುಡಿ ಮಾಡಿ ಹಾಕಿದ್ರೆ ಕಾಲಿಗೆ ಚುಚ್ಚಲ್ವಾ? ಪರಿಸರ ಮಾಲಿನ್ಯವಾಗಲ್ವಾ?

  • Share this:

ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ್ರು, ಮುಟ್ಟುಗೋಲು ಹಾಕಲಾಯ್ತು ಎಂಬ ಸುದ್ದಿಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದ್ರೆ ಹೀಗೆ ಸೀಜ್ ಮಾಡಿದ ಮದ್ಯದ ಬಾಟಲಿಗಳನ್ನು (Liquor Bottles)ಏನು ಮಾಡಲಾಗುತ್ತೆ? ಈ ಪ್ರಶ್ನೆ ಮೂಡುವುದು ಸಹಜ. ಮದ್ಯವನ್ನೇನೋ ನಾಶಪಡಿಸಬಹುದು, ಆದ್ರೆ ಅಷ್ಟೊಂದು ಗಾಜಿನ ಬಾಟಲಿಗಳನ್ನಾದ್ರೂ (Seized Liquor Bottles) ಏನು ಮಾಡ್ತಾರೆ? ಒಡೆದು ಪುಡಿಪುಡಿ ಮಾಡಿ ಹಾಕಿದ್ರೆ ಕಾಲಿಗೆ ಚುಚ್ಚಲ್ವಾ? ಪರಿಸರ ಮಾಲಿನ್ಯವಾಗಲ್ವಾ? ಅನ್ನೋ ಗಂಭೀರ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತೆ. ಆದ್ರೆ ಇದಕ್ಕೆಲ್ಲ ಪರಿಹಾರವಾಗಿ ಸಖತ್ ಐಡಿಯಾವೊಂದನ್ನು ಬಿಹಾರ ಸರ್ಕಾರ (Bihar Government) ಜಾರಿಗೊಳಿಸಿದೆ.


2016ರಲ್ಲಿ ಬಿಹಾರ ಸರ್ಕಾರ ಮದ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೂ ಬಿಹಾರದಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ಮಾರಾಟವಾಗುತ್ತಲೇ ಇದ್ದವು. ಅವುಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಲೇ ಇತ್ತು. ಹೀಗೆ ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಏನು ಮಾಡೋದು? ಅಂತ ಯೋಚಿಸಿದಾಗ ಹೊಳೆದದ್ದೇ ಈ ಸಖತ್ ಐಡಿಯಾ!


ಜೀವನೋಪಾಯದ ಮಾರ್ಗವಾಯ್ತು ಮದ್ಯದ ಬಾಟಲಿ!
ವಶಪಡಿಸಿಕೊಂಡ ಗಾಜಿನ ಮದ್ಯದ ಬಾಟಲಿಗಳನ್ನು ಮಹಿಳೆಯರ ಕೈಗೆ ಕೊಡೋಕೆ ಬಿಹಾರ ಸರ್ಕಾರ ನಿರ್ಧರಿಸಿತು! ಹೌದು, ಆಗ ಗ್ರಾಮೀಣಾಭಿವೃದ್ಧಿ- ಗ್ರಾಮೀಣ ಮಹಿಳೆಯ ಜೀವನೋಪಾಯ ಅಭಿವೃದ್ದಿಯಂತಹ ಹಲವು ಯೋಜನೆಗಳನ್ನು ಕೈಗೊಳ್ಳುವ ಯೋಚನೆಯಲ್ಲಿತ್ತು. ಅಕ್ರಮ ಮದ್ಯದ ಬಾಟಲಿಗಳನ್ನು ಗ್ರಾಮೀಣ ಮಹಿಳೆಯರ ಕೈಗಿಟ್ಟರೆ ಅವರಿಗೂ ಒಂದು ಉದ್ಯೋಗ ಸೃಷ್ಟಿಯಾಗಿ ಜೀವನೋಪಾಯದ ಮಾರ್ಗವಾಗುತ್ತದೆ ಎಂದು ಬಿಹಾರ ಸರ್ಕಾರದ ಯೋಚನೆಯಾಗಿತ್ತು.


ಈ ಮದ್ಯದ ಬಾಟಲಿಗಳನ್ನು ಏನು ಮಾಡೋದು?
ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಮತ್ತೆ ಯಾವುದೋ ಫ್ಯಾಕ್ಟರಿಗೆ ಕೊಟ್ಟು ನವೀಕರಿಸುವ ಬದಲು ಗಾಜಿನ ಬಳೆಗಳನ್ನು ತಯಾರಿಸಲು ಬಳಸಲು ಬಿಹಾರ ಸರ್ಕಾರ ನಿರ್ಧರಿಸಿತು. ಇದರಿಂದ ಗ್ರಾಮೀಣ ಮಹಿಳೆಯರಿಗೂ ಉದ್ಯೋಗ ಸೃಷ್ಟಿಯಾಗುತ್ತೆ. ಅಲ್ಲದೇ ಅದೇ ಗ್ರಾಮೀಣ ಮಹಿಳೆಯ ಕೈಗೆ ಸಾಂಪ್ರದಾಯಿಕ ಬಳೆಗಳ ಅಲಂಕಾರವೂ ದೊರೆಯುತ್ತೆ ಎಂಬ ಯೋಚನೆ ಇಲ್ಲಿ ಕೆಲಸ ಮಾಡಿತ್ತು.


ಗಾಜಿನ ಬಳೆ ತಯಾರಿಕೆ ತರಬೇತಿ
ಉತ್ತರ ಪ್ರದೇಶದ ಬಳೆ ತಯಾರಿಕಾ ಘಟಕದೊಂದಿಗೆ ಒಪ್ಪಂದ ಮಾಡಿಕೊಂಡಿತು. ಬಿಹಾರದ ಮಹಿಳೆಯರಿಗೆ ಗಾಜಿನ ಬಳೆಗಳನ್ನು ತಯಾರಿಸಲು ತರಬೇತಿ ನೀಡಿತು. ಜೀವಿಕಾ ಎಂಬ ಕಾರ್ಖಾನೆ ತೆರೆದು ಅಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ನೀಡಿತು.


ಜೀವಿಕಾ ಎಂಬ ಕಾರ್ಖಾನೆ
ಬಿಹಾರ ಸರ್ಕಾರವು ತನ್ನ ಗ್ರಾಮೀಣ ಜೀವನೋಪಾಯ ಪ್ರಚಾರ ಕಾರ್ಯಕ್ರಮದ ಅಡಿಯಲ್ಲಿ ರಾಜಧಾನಿ ಪಾಟ್ನಾದಲ್ಲಿ ಜೀವಿಕಾ ಎಂದು ಕರೆಯಲ್ಪಡುವ ಕಾರ್ಖಾನೆಯನ್ನು ನಿರ್ಮಿಸಿತು. ವಿಶ್ವ ಬ್ಯಾಂಕ್‌ನಿಂದ ಧನಸಹಾಯವೂ ಈ ಜೀವಿಕಾ ಕಾರ್ಖಾನೆಗೆ ದೊರೆತಿತ್ತು.


ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬಿಹಾರ ರಾಜ್ಯದ ಇತರ ಭಾಗಗಳಲ್ಲೂ ಗಾಜಿನ ಬಳೆ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸುವ ಯೋಚನೆ ಸರ್ಕಾರಕ್ಕಿದೆ.


ಯೋಜನೆಗೆ ವಿರೋಧ! ಏನು ಕಾರಣ?
ಆದರೆ ಈ ಯೋಜನೆಗೆ ವಿರೋಧವೂ ವ್ಯಕ್ತವಾಗಿತ್ತು.  ಗಾಜಿನ ಬಳೆಗಳ ಫ್ಯಾಕ್ಟಿಗೆ ಸಾಲುವಷ್ಟು ಮದ್ಯದ ಬಾಟಲಿಗಳು ಲಭ್ಯವಿದೆಯೇ ಎಂಬ ಪ್ರಶ್ನೆ ಹೊರಹೊಮ್ಮಿತ್ತು. ಅಲ್ಲದೇ ಗಾಜಿನ ಬಳೆಗಳನ್ನು ತಯಾರಿಸಲು ಬೇಕಾದ ಇತರ ಅಗತ್ಯ ವಸ್ತುಗಳನ್ನು ಎಲ್ಲಿಂದ ತರೋದು ಎಂದು ಹಲವುರ ಪ್ರಶ್ನಿಸಿದ್ದರು. 


ಮದ್ಯದ ಸ್ಮಗ್ಲಿಂಗ್​ಗೆ ನಿರಾತಂಕ; ಬಿಜೆಪಿ ಟೀಕೆ
ಜೊತೆಗೆ ಬಿಜೆಪಿ ಸಹ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಗಾಜಿನ ಬಳೆಗಳನ್ನು ತಯಾರಿಲು ಎಂದಾದರೂ ಅಕ್ರಮ ಮದ್ಯದ ಸ್ಮಗ್ಲಿಂಗ್​ಗೆ ಅವಕಾಶ ನೀಡಲಾಗುತ್ತೆ ಎಂದು ಬಿಹಾರ ಬಿಜೆಪಿ ಉಗ್ರ ಟೀಕೆ ನಡೆಸಿತ್ತು. 


ಇದನ್ನೂ ಓದಿ: Dangerous Virus: ಹಳ್ಳಿಯಿಂದ 36 ಗಂಟೆಗಳಲ್ಲಿ ಈ ವೈರಸ್ ಜಗತ್ತನ್ನೇ ತಲುಪುತ್ತಂತೆ! ಏನಿದು ಶಾಕಿಂಗ್ ನ್ಯೂಸ್?


ಸದ್ಯ ಮದ್ಯದ ಗಾಜಿನ ಬಾಟಲಿಗಳಿಂದ ಬಳೆಗಳನ್ನು ತಯಾರಿಸುವ ಯೋಜನೆ ಮುಂದಿನ ದಿನಗಳಲ್ಲಿ ಹೇಗೆ ಅಭಿವೃದ್ಧಿಯಾಗಲಿದೆ ಎಂದು ಕಾದುನೋಡಬೇಕಷ್ಟೆ. ಇದು ಸಫಲವಾದಲ್ಲಿ ಇನ್ನಷ್ಟು ಇಂತಹ ಕಾರ್ಖಾನೆಗಳು ಓಪನ್ ಆಗೋದಂತೂ ಸತ್ಯ.

Published by:ಗುರುಗಣೇಶ ಡಬ್ಗುಳಿ
First published: