• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Lions and Buffaloes: ಪಾಕಿಸ್ತಾನದಲ್ಲಿ ಎಮ್ಮೆಗಿಂತ ಸಿಂಹಗಳೇ ಕಡಿಮೆ ಬೆಲೆಯಲ್ಲಿ ಸಿಗ್ತವಂತೆ! ಕಾರಣ ಏನು ನೋಡಿ

Lions and Buffaloes: ಪಾಕಿಸ್ತಾನದಲ್ಲಿ ಎಮ್ಮೆಗಿಂತ ಸಿಂಹಗಳೇ ಕಡಿಮೆ ಬೆಲೆಯಲ್ಲಿ ಸಿಗ್ತವಂತೆ! ಕಾರಣ ಏನು ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಮ್ಮ ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಕಾಡಿನ ರಾಜ ಅಂತಾನೆ ಕರೆಯಲ್ಪಡುವ ಸಿಂಹಗಳನ್ನು ಮಾರಾಟ ಮಾಡಲಾಗುತ್ತಿದೆಯಂತೆ. ಅಲ್ಲದೆ ಎಮ್ಮೆಗಿಂತ ಅಗ್ಗದ ಬೆಲೆಗೆ ಸಿಂಹಗಳನ್ನು ಖರೀದಿಸಬಹುದಂತೆ ಅಂತ ನಾವು ನಿಮಗೆ ಹೇಳಿದರೆ ‘ಸುಳ್ಳು ಹೇಳ್ತಾ ಇದ್ದೀರಾ, ತಮಾಷೆ ಸಾಕು’ ಅಂತ ನೀವು ನಮಗೆ ಹೇಳಬಹುದು.

ಮುಂದೆ ಓದಿ ...
  • Share this:

ಕೆಲವೊಮ್ಮೆ ತಲೆದೂರುವ ಕಠಿಣವಾದ ಪರಿಸ್ಥಿತಿಗಳನ್ನು (Tough situation) ನಿಭಾಯಿಸಲು ಮತ್ತು ಆ ಪರಿಸ್ಥಿತಿಯಿಂದ ಮುಕ್ತವಾಗಲು ನಾವು ಅನೇಕ ಮಾರ್ಗಗಳನ್ನು ಹುಡುಕುತ್ತೇವೆ. ಹಾಗೆ ಮಾರ್ಗಗಳನ್ನು ಹುಡುಕಿಕೊಂಡಾಗ ನಾವು ಕಳೆದುಕೊಳ್ಳುವುದು ಸಹ ತುಂಬಾನೇ ಅಮೂಲ್ಯವಾಗಿರುತ್ತದೆ ಎಂದು ನಮಗೆ ಆನಂತರ ತಿಳಿಯುತ್ತದೆ. ವನ್ಯಜೀವಿಗಳ ಸಂರಕ್ಷಣೆ ಮಾಡುವುದು (Conservation of wildlife) ನಮ್ಮ ಕರ್ತವ್ಯ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಇದೆಲ್ಲಾ ಏಕೆ ಹೇಳುತ್ತಾ ಇದ್ದೇವೆ ಅಂತ ನಿಮಗೆ ಪ್ರಶ್ನೆ ಕಾಡಬಹುದು. ನಮ್ಮ ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಕಾಡಿನ ರಾಜ ಅಂತಾನೆ ಕರೆಯಲ್ಪಡುವ ಸಿಂಹಗಳನ್ನು (Lion) ಮಾರಾಟ ಮಾಡಲಾಗುತ್ತಿದೆಯಂತೆ. ಅಲ್ಲದೆ ಎಮ್ಮೆಗಿಂತ (Buffalo) ಅಗ್ಗದ ಬೆಲೆಗೆ ಸಿಂಹಗಳನ್ನು ಖರೀದಿಸಬಹುದಂತೆ ಅಂತ ನಾವು ನಿಮಗೆ ಹೇಳಿದರೆ ‘ಸುಳ್ಳು ಹೇಳ್ತಾ ಇದ್ದೀರಾ, ತಮಾಷೆ ಸಾಕು’ ಅಂತ ನೀವು ನಮಗೆ ಹೇಳಬಹುದು.


ಎಮ್ಮೆ ಮತ್ತು ಸಿಂಹಗಳ ಬೆಲೆ ಎಷ್ಟು?
ನೀವು ಈ ಸುದ್ದಿಯನ್ನು ಒಂದು ಕ್ಷಣ ಸುಳ್ಳು ಅಂತ ಅಂದು ಕೊಳ್ಳಬಹುದು, ಆದರೆ ಪಾಕಿಸ್ತಾನದಲ್ಲಿರುವ ಮಾಧ್ಯಮ ವರದಿಗಳು ಈ ಸುದ್ದಿಯನ್ನು ನೀಡಿವೆ. ಆದಾಗ್ಯೂ, ಲಾಹೋರ್ ಸಫಾರಿ ಮೃಗಾಲಯದ ಆಡಳಿತವು ಸಾಕಲಾದ ತನ್ನ ಕೆಲವು ಆಫ್ರಿಕನ್ ಸಿಂಹಗಳನ್ನು ಮಾರುತ್ತಿದ್ದು ಪ್ರತಿ ಸಿಂಹದ ಬೆಲೆ ಕೇವಲ 1,50,000 ರೂಪಾಯಿ ಅಂತೆ.


ಲಾಹೋರ್ ಸಫಾರಿ ಮೃಗಾಲಯದ ಆಡಳಿತವು ಸಿಂಹಗಳನ್ನು ಈ ಬೆಲೆಗೆ ಮಾರಾಟ ಮಾಡಲು ಸಿದ್ಧವಿದೆ ಎಂದು ಸಮಾ ಟಿವಿ ವರದಿ ಮಾಡಿದೆ. ಇದಕ್ಕೆ ಹೋಲಿಸಿದರೆ, ಒಂದು ಎಮ್ಮೆ ಆನ್ಲೈನ್ ಮಾರುಕಟ್ಟೆಯಲ್ಲಿ 3,50,000 ರೂಪಾಯಿಗಳಿಂದ 1 ಮಿಲಿಯನ್ ರೂಪಾಯಿಗಳವರೆಗೆ ಭಾರಿ ಮೊತ್ತಕ್ಕೆ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಇದನ್ನು ನೋಡಿದರೆ ನಿಮಗೆ ಅರ್ಥವಾಗಿರಬೇಕಲ್ಲವೇ ಪಾಕಿಸ್ತಾನದಲ್ಲಿ ಒಂದು ಸಿಂಹವನ್ನು ಆರಾಮಾಗಿ ಕೊಂಡುಕೊಳ್ಳಬಹುದು, ಆದರೆ ಒಂದು ಎಮ್ಮೆಯನ್ನು ಖರೀದಿ ಮಾಡುವುದಕ್ಕೆ ತುಂಬಾ ಹಣ ನೀಡಬೇಕು ಅಂತ.


ಮೃಗಾಲಯದಲ್ಲಿ ಪ್ರಾಣಿಗಳನ್ನು ಮಾರಾಟ ಮಾಡುತ್ತಿರುವದೇಕೆ?
ಲಾಹೋರ್ ಸಫಾರಿ ಮೃಗಾಲಯದ ಆಡಳಿತವು ಆಗಸ್ಟ್ ಮೊದಲ ವಾರದಲ್ಲಿ ತನ್ನ ಮೃಗಾಲಯದಲ್ಲಿರುವ 12 ಸಿಂಹಗಳನ್ನು ಮಾರಾಟ ಮಾಡುವ ಭರವಸೆ ಹೊಂದಿದೆ. ಮಾರಾಟಕ್ಕಿರುವ ದೊಡ್ಡ ಸಿಂಹಗಳಲ್ಲಿ, ಮೂರು ಸಿಂಹಿಣಿಗಳು ಇವೆ, ಅವುಗಳನ್ನು ಖಾಸಗಿ ವಸತಿ ಯೋಜನೆಗಳು ಅಥವಾ ಪಶುಸಂಗೋಪನಾ ಉತ್ಸಾಹಿಗಳಿಗೆ ಪ್ರೀಮಿಯಂನಲ್ಲಿ ಮಾರಾಟ ಮಾಡುವುದಾಗಿ ಯೋಚನೆ ಮಾಡುತ್ತಿದೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಿದೆ.


ಇದನ್ನೂ ಓದಿ:  Biggest Shark: ಜಗತ್ತಿನ ಅತಿ ದೊಡ್ಡ ಶಾರ್ಕ್ ಮಾಂಸಹಾರಿಯಲ್ಲ! ಹಾಗಿದ್ದರೆ ಇದು ತಿನ್ನೋದೆನನ್ನು?


ಮೃಗಾಲಯದಲ್ಲಿ ಹೆಚ್ಚುತ್ತಿರುವ ಪ್ರಾಣಿಗಳ ನಿರ್ವಹಣೆ ವೆಚ್ಚ ಮತ್ತು ಇತರ ವೆಚ್ಚಗಳನ್ನು ಪೂರೈಸುವ ಸಲುವಾಗಿ ಮೃಗಾಲಯದ ಆಡಳಿತವು ತಮ್ಮ ಪ್ರಾಣಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಸಮಾ ಟಿವಿ ವರದಿ ಮಾಡಿದೆ. ಲಾಹೋರ್ ಸಫಾರಿ ಮೃಗಾಲಯವು, ದೇಶಾದ್ಯಂತದ ಇತರ ಮೃಗಾಲಯಗಳಿಗಿಂತ ಭಿನ್ನವಾಗಿ, ಒಂದು ಬೃಹತ್ ಸೌಲಭ್ಯವಾಗಿದೆ. ಸುಮಾರು 142 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಇದು ಹಲವಾರು ಕಾಡುಪ್ರಾಣಿಗಳನ್ನು ಹೊಂದಿದೆ. ಆದಾಗ್ಯೂ, ಅದರ ಹೆಮ್ಮೆ ಎಂದರೆ 40 ಸಿಂಹಗಳ ತಳಿ ಇರುವುದು. ಅವುಗಳನ್ನು ನಿರ್ವಹಿಸುವುದು ಕಷ್ಟ ಮಾತ್ರವಲ್ಲದೇ ಮೃಗಾಲಯದ ಆಡಳಿತದವರಿಗೆ ಸಾಕಷ್ಟು ದುಬಾರಿಯಾಗಿದೆ.


ಸಿಂಹಗಳನ್ನೇ ಮಾರುವುದೇಕೆ ?
ಆದ್ದರಿಂದ, ಮೃಗಾಲಯದ ಆಡಳಿತವು ಕೆಲವು ಸಿಂಹಗಳನ್ನು ನಿಯಮಿತವಾಗಿ ಮಾರಾಟ ಮಾಡುತ್ತದೆ ಮತ್ತು ಅದರಿಂದ ಬರುವ ಹಣವನ್ನು ಮೃಗಾಲಯದ ಇತರೆ ಪ್ರಾಣಿಗಳನ್ನು ನೋಡಿಕೊಳ್ಳಲು ವೆಚ್ಚ ಮಾಡುತ್ತದೆ ಎಂದು ಹೇಳಿದೆ ಎಂದು ಸಮಾ ಟಿವಿ ವರದಿ ಮಾಡಿದೆ. ಕಳೆದ ವರ್ಷ ಸಫಾರಿ ಮೃಗಾಲಯದಲ್ಲಿ ಸೀಮಿತ ಸ್ಥಳಾವಕಾಶದ ಕಾರಣ ನೀಡಿ ಸುಮಾರು 14 ಸಿಂಹಗಳನ್ನು ನಾಗರಿಕರಿಗೆ ಮಾರಾಟ ಮಾಡಿತ್ತು.


ಇದನ್ನೂ ಓದಿ: Man v/s Donkey: ಕತ್ತೆಗೆ ಪದೇ ಪದೇ ಥಳಿಸಿ, ತನ್ನ ಕರ್ಮದ ಫಲ ಅಲ್ಲೇ ಪಡೆದ ವ್ಯಕ್ತಿ! ವೈರಲ್ ವಿಡಿಯೋ ನೀವೂ ನೋಡಿ


ಹೀಗೆ ಕೆಲವು ಮೃಗಾಲಯಗಳು ತನ್ನ ಬಳಿ ಇರುವಂತಹ ಪ್ರಾಣಿಗಳನ್ನು ನೋಡಿಕೊಳ್ಳಲು ವ್ಯವಸ್ಥೆ ಮತ್ತು ಹಣ ಇರದೆ ಇದ್ದರೆ ಆ ಪ್ರಾಣಿಗಳನ್ನು ಬೇರೆ ಮೃಗಾಲಯಕ್ಕೆ ಸ್ಥಳಾಂತರಿಸುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ ಕೂಡ. ಆದರೆ ನೆರೆಯ ಪಾಕಿಸ್ತಾನದಲ್ಲಿ ಸಿಂಹಗಳನ್ನೇ ಮಾರುತ್ತಿರುವುದು ಸ್ವಲ್ಪ ವಿಚಿತ್ರ ಅಂತ ಕೆಲವರಿಗೆ ಅನ್ನಿಸಬಹುದು.

First published: