ಗುಜರಾತ್​ನ ಜುನಾಘಡದಲ್ಲಿ ಹೋಟೆಲ್​ಗೆ ನುಗ್ಗಿದ ಸಿಂಹ; ಸಿಸಿಟಿವಿ ವಿಡಿಯೋ ವೈರಲ್​!

ಗುಜರಾತ್​ನ ಜುನಾಘಡ ಪ್ರದೇಶದಲ್ಲಿ ಸಿಂಹಗಳು ಕಾಡಿನಿಂದ ನಾಡಿಗೆ ಎಂಟ್ರಿ ಕೊಡುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯ ಸಂಗತಿ ಎಂಬಂತಾಗಿದೆ ಎಂದು ಉಯನ್​ ಕಚ್ಚಿ ತಮ್ಮ ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಹೋಟೆಲ್ ಒಳಗೆ ಪ್ರವೇಶಿಸುತ್ತಿರುವ ಸಿಂಹ.

ಹೋಟೆಲ್ ಒಳಗೆ ಪ್ರವೇಶಿಸುತ್ತಿರುವ ಸಿಂಹ.

 • Share this:
  ಜುನಾಘಡ: ಫೆಬ್ರವರಿ 8 ರಂದು ಗುಜರಾತ್‌ನ ಸರೋವರ್​ ಪೋರ್ಟಿಕೋ ಎಂಬ ಖಾಸಗಿ ಹೋಟೆಲ್‌ನ ಆವರಣದಲ್ಲಿ ಸಿಂಹವೊಂದು ಪ್ರವೇಶಿಸಿದ್ದು ಜನರನ್ನು ಭಯಭೀತಗೊಳಿಸಿದೆ, ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಈ ದೃಶ್ಯವನ್ನು ಉದಯನ್​ ಕಚ್ಚಿ ಎಂಬ ವ್ಯಕ್ತಿ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. 

  ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿರುವ ದೃಶ್ಯದಲ್ಲಿ ಸಿಂಹವು ಪಾರ್ಕಿಂಗ್ ಸ್ಥಳದ ಸುತ್ತಲೂ ನಡೆದು ಹೋಟೆಲ್​ನ ಆವರಣದಲ್ಲಿ ಓಡಾಡಿದೆ. ಸ್ವಲ್ಪ ಸಮಯದ ನಂತರ, ಸಿಂಹ ಗೋಡೆಯ ಮೇಲೆ ಹಾರಿ ಹೋಟೆಲ್ ಹೊರಗೆ ಹೋಗಿದೆ. ಏತನ್ಮಧ್ಯೆ, ಸಿಂಹವು ಹೊರಗೆ ಹಾರಿಹೋಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಮುಖ್ಯ ದ್ವಾರದಲ್ಲಿರುವ ತನ್ನ ಕ್ಯಾಬಿನ್‌ನಲ್ಲಿ ಭಯಭೀತರಾಗಿ ಕುಳಿತದ್ದನ್ನು ಕಾಣಬಹುದಾಗಿದೆ. ಕೆಲ ಕ್ಷಣಗಳ ನಂತರ, ಸಿಂಹವು ಮುಖ್ಯ ರಸ್ತೆಯ ಹಾದಿಯಲ್ಲಿ ನಡೆದು ಹೋಗಿರುವುದನ್ನು ಆ ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ.

  ಗುಜರಾತ್​ನ ಜುನಾಘಡ ಪ್ರದೇಶದಲ್ಲಿ ಸಿಂಹಗಳು ಕಾಡಿನಿಂದ ನಾಡಿಗೆ ಎಂಟ್ರಿ ಕೊಡುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯ ಸಂಗತಿ ಎಂಬಂತಾಗಿದೆ ಎಂದು ಉಯನ್​ ಕಚ್ಚಿ ತಮ್ಮ ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.  ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಕೂಡ ತಮ್ಮ ಟೈಮ್‌ಲೈನ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋ ಮತ್ತಷ್ಟು ವೇಗವಾಗಿ ವೈರಲ್ ಆಗುತ್ತಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, "ಇನ್ನೂ ಬೆಳಗಿನ ಸಮಯದಲ್ಲಿ ಮನುಷ್ಯರು ಕಾಡು ಪ್ರಾಣಿಗಳ ಜೊತೆ ವಾಕ್ ಮಾಡಬೇಕಾದ ಸಮಯ ಎದುರಾಗಲಿದೆ. ಇದನ್ನುನಾವು ಒಪ್ಪಿಕೊಳ್ಳಲೇಬೇಕಾದ ಕಾಲ ಎದುರಾಗಲಿದೆ" ಎಂದು ಹಲವರು ಕಮೆಂಟ್​ ಮೂಲಕ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
  Published by:MAshok Kumar
  First published: