ನಿಮ್ಮ ಬಳಿ SBI Account ಇದ್ರೆ, ಈ ಕೆಲಸ ಮೊದಲು ಮಾಡಿ: ಇಲ್ಲದಿದ್ರೆ ನಿಮ್ಮ ಖಾತೆ ಸ್ಥಗಿತವಾಗುತ್ತೆ..!

ನೀವಿನ್ನೂ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್‌ ಕಾರ್ಡ್‌ ಅನ್ನು ಲಿಂಕ್ ಮಾಡಿಲ್ಲವೇ..? ಈ ಬಗ್ಗೆ ಗೊಂದಲಗಳಿವೆಯೇ..? ಹಾಗಾದ್ರೆ, ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಹೇಗೆ ಎಂದು ಈ 4 ಹಂತಗಳಲ್ಲಿ ಸುಲಭವಾಗಿ  ತಿಳಿದುಕೊಳ್ಳಿ. 

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ದೇಶದ ಅತಿದೊಡ್ಡ ಸಾಲದಾತ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ವಿಶೇಷ ಎಚ್ಚರಿಕೆ ನೀಡಿದೆ.  ಖಾತೆದಾರರು ತಮ್ಮ ಖಾಯಂ ಖಾತೆ ಸಂಖ್ಯೆಯನ್ನು (PAN) ತಮ್ಮ ಆಧಾರ್ ಕಾರ್ಡ್ ಜೊತೆ ಸೆಪ್ಟೆಂಬರ್ 30ರ ಅಂತ್ಯದೊಳಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಎಸ್‌ಬಿಐ, ಬ್ಯಾಂಕ್ ತನ್ನ ಗ್ರಾಹಕರಿಗೆ ಯಾವುದೇ ಅನಾನುಕೂಲತೆ ಆಗುವುದನ್ನು ತಪ್ಪಿಸಲು ತಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಸಲಹೆ ನೀಡುತ್ತದೆ ಎಂದು ಹೇಳಿದೆ. ನೀಡಿರುವ ಗಡುವಿನೊಳಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಗ್ರಾಹಕರು ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದೂ ಬ್ಯಾಂಕ್‌ ಎಚ್ಚರಿಸಿದೆ.

"ನಮ್ಮ ಗ್ರಾಹಕರಿಗೆ ಯಾವುದೇ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ" ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.  ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಗ್ರಾಹಕರು ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಬೇಕು ಎಂದು ಬ್ಯಾಂಕ್ ಹೇಳಿದೆ. ಅಲ್ಲದೆ, ಆಧಾರ್ ಕಾರ್ಡ್ ಜೊತೆ PAN ಲಿಂಕ್ ಮಾಡುವುದು ಕಡ್ಡಾಯ ಎಂದೂ ಎಸ್‌ಬಿಐ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ.

ಎಸ್​ಬಿಐ ಮಾಡಿರುವ​ ಟ್ವೀಟ್​ ಲಿಂಕ್​....

We advise our customers to link their PAN with Aadhaar to avoid any inconvenience and continue enjoying a seamless banking service.#ImportantNotice #AadhaarLinking #Pancard #AadhaarCard pic.twitter.com/bVGDbbYajXಇನ್ನು, ನೀವಿನ್ನೂ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್‌ ಕಾರ್ಡ್‌ ಅನ್ನು ಲಿಂಕ್ ಮಾಡಿಲ್ಲವೇ..? ಈ ಬಗ್ಗೆ ಗೊಂದಲಗಳಿವೆಯೇ..? ಹಾಗಾದ್ರೆ, ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಹೇಗೆ ಎಂದು ಈ 4 ಹಂತಗಳಲ್ಲಿ ಸುಲಭವಾಗಿ  ತಿಳಿದುಕೊಳ್ಳಿ.

ಇದನ್ನೂ ಓದಿ: Rashmika Mandanna: ವೈರಲ್ ಆಗುತ್ತಿದೆ ರಶ್ಮಿಕಾರ ಮತ್ತೊಂದು ಚುಂಬನದ ಚಿತ್ರ..!

ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಅನ್ನು ಸುಲಭವಾಗಿ ಲಿಂಕ್ ಮಾಡುವುದು ಹೇಗೆ..?

1. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. 2. ಆಧಾರ್ ಲಿಂಕ್ ವಿಭಾಗಕ್ಕೆ ಹೋಗಿ. 3. ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ. 4. 'ಲಿಂಕ್ ಆಧಾರ್' ಆಯ್ಕೆಯನ್ನು ಸೆಲೆಕ್ಟ್‌ ಮಾಡಿ. ಇಷ್ಟೇ, ಬಳಿಕ ನಿಮ್ಮ ಪ್ಯಾನ್ ಅನ್ನು ಕೆಲವೇ ಸೆಕೆಂಡುಗಳಲ್ಲಿ ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ. ಈ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯು ಕಾರ್ಡ್ ಹೋಲ್ಡರ್‌ಗಳ ವೈಯಕ್ತಿಕ ವಿವರಗಳಾದ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಮಾನ್ಯ ಮಾಡುತ್ತದೆ.

SMS ಕಳುಹಿಸುವ ಮೂಲಕ ಲಿಂಕ್ ಮಾಡುವುದು ಹೇಗೆ..?

ಪ್ಯಾನ್ ಅನ್ನು SMS ಮೂಲಕವೂ ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.
ಇದಕ್ಕಾಗಿ, ನಿಮ್ಮ ಫೋನ್‌ನಲ್ಲಿ ನೀವು UIDPAN ಅನ್ನು ಟೈಪ್ ಮಾಡಬೇಕು. ಇದರ ನಂತರ, 12-ಅಂಕಿಯ ಆಧಾರ್ ಸಂಖ್ಯೆ ಮತ್ತು 10-ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಈಗ ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ. ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

ನಿಷ್ಕ್ರಿಯ ಪ್ಯಾನ್ ಅನ್ನು ಸಕ್ರಿಯಗೊಳಿಸುವುದು ಹೇಗೆ..?

ನಿಷ್ಕ್ರಿಯ ಪ್ಯಾನ್ ಕಾರ್ಡ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು. ಇದಕ್ಕಾಗಿ, ನೀವು SMS ಕಳುಹಿಸಬೇಕು.- ಸಂದೇಶ ಪೆಟ್ಟಿಗೆಗೆ ಹೋಗುವ ಮೂಲಕ ನಿಮ್ಮ ನೋಂದಾಯಿತ ಮೊಬೈಲ್‌ನಿಂದ ನೀವು 12 ಅಂಕಿಯ ಪ್ಯಾನ್ ಅನ್ನು ನಮೂದಿಸಬೇಕು. ಇದರ ನಂತರ, ಸ್ಪೇಸ್‌ ನೀಡುವ ಮೂಲಕ 10-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ಈ ಸಂದೇಶವನ್ನು 567678 ಅಥವಾ 56161 ಗೆ SMS ಮಾಡಿ.

ಇದನ್ನೂ ಓದಿ: ಬೆಂಕಿಪಟ್ಣ ನಾಯಕನ ಉಗ್ರ ಪ್ರತಾಪ: ಹಲವು ಹೊಸತನಗಳ ದ ಕಲರ್ ಆಫ್ ಟೊಮೆಟೊ

ಇನ್ನು, ಷೇರುಗಳಲ್ಲಿ ಹೂಡಿಕೆ ಮಾಡುವಂತಹ ಹಲವಾರು ಹಣಕಾಸು ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು PAN ಕಾರ್ಡ್‌ಗೆ ಲಿಂಕ್ ಮಾಡುವುದು ಅಗತ್ಯವಾಗಿದೆ ಎಂದು ಈಗಾಗಲೇ ರಾಷ್ಟ್ರೀಯ ಭದ್ರತಾ ವಿನಿಮಯ (NSE) ತಿಳಿಸಿದೆ.
Published by:Anitha E
First published: