Lineman: ಟ್ರಾಫಿಕ್ ನಿಯಮ ಉಲ್ಲಂಘಿಸಿದಕ್ಕೆ ದಂಡ ವಿಧಿಸಿದರೆಂದು ಕೋಪಗೊಂಡ ಲೈನ್‍ಮ್ಯಾನ್ ಹಿಂಗೆಲ್ಲಾ ಮಾಡೋದಾ!

ಉತ್ತರ ಪ್ರದೇಶ ಬರೇಲಿಯ ಭೂಪನೊಬ್ಬನಿಗೆ ಅದೇನು ಭಂಡ ಧೈರ್ಯವೋ, ಪೊಲೀಸರ ಮೇಲೆ ಕೋಪಗೊಂಡು ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಇತ್ತೀಚೆಗೆ ಲೈನ್‍ಮ್ಯಾನ್ ಒಬ್ಬನಿಗೆ ಆತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಎಂಬ ಕಾರಣಕ್ಕಾಗಿ ಟ್ರಾಫಿಕ್ ಇನ್‍ಸ್ಟೆಕ್ಟರ್ ಒಬ್ಬರು ದಂಡ ವಿಧಿಸಿದ್ದರು. ಅದಕ್ಕೆ ಸಿಟ್ಟುಗೊಂಡ ಆತ ಹರ್ದಾಸ್ ಪುರ್ ಪೊಲೀಸ್ ಸ್ಟೇಶನ್‍ನ ವಿದ್ಯುತ್ ಸರಬರಾಜನ್ನೇ ಸ್ಥಗಿತಗೊಳಿಸಿದ್ದಾನೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ನಮಗೆ ಯಾರ ಮೇಲಾದರೂ ಸಿಟ್ಟು ಬಂದರೆ, ಸುಮ್ಮನಿರುವುದಿಲ್ಲ, ಅವರಿಗೆ ಏನಾದರೂ ಉಲ್ಟಾ ಹೊಡೆದೇ ಹೊಡೆಯುತ್ತೇವೆ. ಅವರಿವರ ಮೇಲೆ ಸಿಟ್ಟು ತೋರಿಸಿಕೊಳ್ಳುವುದೇನೊ ಸುಲಭ, ಆದರೆ ಪೊಲೀಸರ (Police) ಮೇಲೆ ಸಿಟ್ಟು ಬಂದರೆ? ಪೊಲೀಸರೆಂದರೆ ಜನ ಸಾಮಾನ್ಯರಿಗೆ (Common People) ಭಯ ಹೆಚ್ಚು, ಹಾಗಾಗಿ ಅವರ ಮೇಲೆ ಸಿಟ್ಟು ಬಂದರೂ, ಬಡವ ನೀ ಮಾಡಗ್ದಂಗಿರು ಎಂಬಂತೆ ಸುಮ್ಮನಿರುತ್ತೇವೆ ಅಲ್ಲವೇ? ಆದರೆ ಉತ್ತರ ಪ್ರದೇಶ (Uttar Pradesh) ಬರೇಲಿಯ ಭೂಪನೊಬ್ಬನಿಗೆ ಅದೇನು ಭಂಡ ಧೈರ್ಯವೋ, ಪೊಲೀಸರ ಮೇಲೆ ಕೋಪಗೊಂಡು ವಿಚಿತ್ರ ರೀತಿಯಲ್ಲಿ ಸೇಡು (Revenge) ತೀರಿಸಿಕೊಂಡಿದ್ದಾನೆ.

ಲೈನ್‍ಮ್ಯಾನ್ ಒಬ್ಬನಿಗೆ ದಂಡ ವಿಧಿಸಿದ ಟ್ರಾಫಿಕ್ ಇನ್‍ಸ್ಪೆಕ್ಟರ್
ಅಷ್ಟಕ್ಕೂ ಆಗಿದ್ದೇನು ಅಂತೀರಾ? ಇತ್ತೀಚೆಗೆ ಲೈನ್‍ಮ್ಯಾನ್ ಒಬ್ಬನಿಗೆ ಆತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಎಂಬ ಕಾರಣಕ್ಕಾಗಿ ಟ್ರಾಫಿಕ್ ಇನ್‍ಸ್ಪೆಕ್ಟರ್ ಒಬ್ಬರು ದಂಡ ವಿಧಿಸಿದ್ದರು. ಅದಕ್ಕೆ ಸಿಟ್ಟುಗೊಂಡ ಆತ ಹರ್ದಾಸ್ ಪುರ್ ಪೊಲೀಸ್ ಸ್ಟೇಶನ್‍ನ ವಿದ್ಯುತ್ ಸರಬರಾಜನ್ನೇ ಸ್ಥಗಿತಗೊಳಿಸಿದ್ದಾನೆ.

ಇದನ್ನೂ ಓದಿ: Viral Video: ಮಗನ ಮೃತ ದೇಹ ಪಡೆಯಲು ಪೋಷಕರು ಪಡುವ ಕಷ್ಟ ನೋಡಿ; ಈ ವಿಡಿಯೋ ನೋಡ್ತಿದ್ರೆ ಮನಕಲಕುತ್ತೆ

ಭಗವಾನ್ ಸ್ವರೂಪ್ ಎಂಬ ಹೆಸರಿನ ಲೈನ್‍ಮ್ಯಾನ್ ಬೈಕಿನಲ್ಲಿ ಹೋಗುತ್ತಿದ್ದಾಗ, ಇನ್‍ಸ್ಪೆಕ್ಟರ್ ಮೋದಿ ಸಿಂಗ್ ಎಂಬ ಅಧಿಕಾರಿ ಅವರನ್ನು ತಡೆದು ನಿಲ್ಲಿಸಿ, ಅಗತ್ಯ ದಾಖಲೆಗಳನ್ನು ತೋರಿಸಲು ಹೇಳಿದರು. ಆತ ದಾಖಲೆಗಳನ್ನು ತೋರಿಸಲು ಸಾಧ್ಯವಾಗದಿದ್ದಾಗ ಪೊಲೀಸ್ ಅಧಿಕಾರಿ 500 ರೂ ದಂಡ ವಿಧಿಸಿದರು. ಸದ್ಯಕ್ಕೆ ತನ್ನ ಬಳಿ ದಾಖಲೆಗಳು ಇಲ್ಲ, ತಾನು ಮನೆಗೆ ಹೋಗಿ ಅದನ್ನು ತಂದು ತೋರಿಸುವೆ ಎಂದು ಭಗವಾನ್ ಸಿಂಗ್ ಆ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನು ಕೇಳಿಕೊಂಡನು. ಆದರೆ ಆ ಪೊಲೀಸ್ ಅಧಿಕಾರಿ ಆತನ ಕೋರಿಕೆಗೆ ಜಗ್ಗಲಿಲ್ಲ.

ಕೋಪಗೊಂಡ ಲೈನ್‍ಮ್ಯಾನ್ ಮಾಡಿದ್ದು ಏನು ನೋಡಿ
ಈ ಘಟನೆಯಿಂದಾಗಿ ಸಿಕ್ಕಾಪಟ್ಟೆ ಕೋಪಗೊಂಡ ಆ ಲೈನ್‍ಮ್ಯಾನ್, ವಿದ್ಯುತ್‍ಶಕ್ತಿ ವಿಭಾಗದ ತನ್ನ ಸಹುದ್ಯೋಗಿಯೊಂದಿಗೆ ಸೇರಿಕೊಂಡು ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ, ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನೇ ಕಡಿತಗೊಳಿಸಿಬಿಟ್ಟ. ಪೊಲೀಸ್ ಠಾಣೆಯಲ್ಲಿ ಎಲೆಕ್ಟ್ರಿಕ್ ಮೀಟರ್ ಇಲ್ಲದೆಯೇ ವಿದ್ಯುತ್ ಶಕ್ತಿಯನ್ನು ಬಳಸಲಾಗುತಿತ್ತು ಮತ್ತು ಅದು ಕಾನೂನು ಬಾಹಿರ ಎಂದು ಆತ ಮಾಧ್ಯಮಗಳಿಗೆ ತಿಳಿಸಿದ್ದಾನೆ.ಹಾಗಂತ ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಮಾರ್ಚ್ ತಿಂಗಳಲ್ಲಿ, ಕೈಲಿ ಗ್ರಾಮದಲ್ಲಿ ಪವರ್ ಲೈನ್ ರಿಪೇರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಅಜಯ್ ಎಂಬ ಲೈನ್ ಮ್ಯಾನ್ ಅನ್ನು ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ ರಾಮ್ ನರೇಶ್ ಎಂಬ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ತಡೆದು ನಿಲ್ಲಿಸಿ, ದಂಡ ವಿಧಿಸಿದ್ದರು. ಇದರಿಂದ ಕುಪಿತಗೊಂಡ ಆತ, ಈ ಘಟನೆಯ ಬಗ್ಗೆ ತನ್ನ ಜೂನಿಯರ್ ಎಂಜಿನಿಯರ್‍ಗೆ ತಿಳಿಸಿದ್ದ. ವಿದ್ಯುತ್ ಇಲಾಖೆಯ ಉದ್ಯೋಗಿಗಳು ಬದ್ವಾನ್ ಪೊಲೀಸ್ ಸ್ಟೇಶನ್‍ಗೆ ಹೋಗಿ, ಅದರ ಆವರಣ ಮತ್ತು ವಸತಿ ಗೃಹಗಳಲ್ಲಿ ಬಳಸಲಾಗುತ್ತಿದ್ದ 12 ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಿದರು.

ಪ್ರೇಯಸಿಯನ್ನು ಭೇಟಿಯಾಗಲು ಗ್ರಾಮದ ವಿದ್ಯುತ್ ಸರಬರಾಜು ಸ್ಥಗಿತ
ಬಿಹಾರದಲ್ಲೊಬ್ಬ ಪಾಗಲ್ ಪ್ರೇಮಿಯ ಕಥೆ ಮತ್ತೊಂದು ಬಗೆಯದ್ದು. ಆತ ತನ್ನ ಪ್ರೇಯಸಿಯನ್ನು ಕತ್ತಲಲ್ಲಿ ಭೇಟಿಯಾಗಲು ಮನಸ್ಸಾದಾಗಲೆಲ್ಲಾ, ತನ್ನ ಇಡೀ ಗ್ರಾಮದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತಿದ್ದ. ಬಿಹಾರದ ಪುರ್ನಿಯಾ ಜಿಲ್ಲೆಯ ಗಣೇಶ್‍ಪುರದ ಆ ಯುವಕ ನಿತ್ಯ ಸಂಜೆ ನಿರ್ದಿಷ್ಟ ಸಮಯದಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಗ್ರಾಮದ ವಿದ್ಯುತ್ ಸರಬರಾಜನ್ನು ನಿಲ್ಲಿಸುತ್ತಿದ್ದನಂತೆ.

ಇದನ್ನೂ ಓದಿ: KIMSನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಬೆಳ್ಳಂಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ಪತ್ತೆಯಾದ ಕಂದಮ್ಮ

ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇರುವಾಗ ತಮಗಷ್ಟೇ, ಅದೂ ನಿರ್ದಿಷ್ಟ ಸಮಯದಲ್ಲಿ ಇಡೀ ಗ್ರಾಮವೇ ಕತ್ತಲಲ್ಲಿ ಮುಳುಗುತ್ತಿರುವುದು ಏಕೆ ಎಂದು ಗ್ರಾಮಸ್ಥರಿಗೆ ಸೋಜಿಗವಾಗಿತ್ತು. ಕೊನೆಗೆ ಈ ವಿಷಯದ ಆಳಕ್ಕೆ ಇಳಿದು ಪರಿಶೀಲನೆ ನಡೆಸಿದಾಗ, ಅಸಲಿ ಸಂಗತಿ ತಿಳಿದು ಅವರೆಲ್ಲರಿಗೂ ಶಾಕ್ ಆಗಿತ್ತು. ಇನ್ನು ಆ ಪಾಗಲ್ ಪ್ರೇಮಿಯ ಕಥೆ ಏನಾಗಿರಬಹುದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?
Published by:Ashwini Prabhu
First published: