• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Eartquake: ಟರ್ಕಿ, ಸಿರಿಯಾದಂತೆ ಭಾರತಕ್ಕೂ ಕಾದಿದ್ಯಾ ಭೂಕಂಪದ ಭೀತಿ? ಶಾಕಿಂಗ್ ರಿಪೋರ್ಟ್ ಕೊಟ್ಟ ಸಂಶೋಧಕರು

Eartquake: ಟರ್ಕಿ, ಸಿರಿಯಾದಂತೆ ಭಾರತಕ್ಕೂ ಕಾದಿದ್ಯಾ ಭೂಕಂಪದ ಭೀತಿ? ಶಾಕಿಂಗ್ ರಿಪೋರ್ಟ್ ಕೊಟ್ಟ ಸಂಶೋಧಕರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶತಮಾನದ ಭೀಕರ ಎನ್ನಬಹುದಾದ ಪ್ರಬಲ ಭೂಕಂಪನವು ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಸಂಭವಿಸಿದ್ದು ಅಪಾರ ಪ್ರಮಾಣದಲ್ಲಿ ಆಸ್ತಿ ಹಾಗೂ ಪ್ರಾಣ ನಷ್ಟಗಳಾಗಿವೆ. ಈ ಮಧ್ಯೆ ಡಚ್ ಮೂಲದ ಸಂಶೋಧಕರೊಬ್ಬರು ಮುಂದಿನ ಭೂಕಂಪನದ ಬಗ್ಗೆ ಹೇಳುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

    ಸುನಾಮಿ, ಜ್ವಾಲಾಮುಖಿ, ಭೂಕಂಪನಗಳು (Earthquake), ಚಂಡಮಾರುತಗಳು (Storm) ಪ್ರಕೃತಿಯ ಶಕ್ತಿಯುತ ವಿದ್ಯಮಾನಗಳಾಗಿದ್ದು ಮಾನವ ಕುಲಕ್ಕೆ ಅತ್ಯಂತ ಘಾತಕ ಎನಿಸಿವೆ. ಅದರಲ್ಲೂ ಭೂಕಂಪನ ಎಂಬುದು ಯಾವಾಗ, ಎಲ್ಲಿ ಬರುತ್ತದೆ ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಭೂಕಂಪನಗಳ ತೀವ್ರತೆಯನ್ನು ಸಾಮಾನ್ಯವಾಗಿ ರಿಕ್ಟರ್ ಮಾಪಕದಲ್ಲಿ (Richter Scale) ಅಳೆಯಲಾಗುತ್ತದೆ. ಇದರ ತೀವ್ರತೆ 5 ಅಥವಾ ಕಡಿಮೆಯಿದ್ದಾಗ ಅದರಿಂದ ಅಷ್ಟೊಂದೇನೂ ನಷ್ಟವಿಲ್ಲ ಆದರೆ ತೀವ್ರತೆಯು ಆರು ಹಾಗೂ ಏಳರ ಸಂಖ್ಯೆನ್ನು ದಾಟಿತ್ತೆಂದರೆ ನಷ್ಟಗಳುಂಟಾಗುದು ಗ್ಯಾರಂಟಿ ಎನ್ನಬಹುದು.


    ಕೆಲವೇ ಕೆಲವು ದಿನಗಳ ಹಿಂದೆ ಸಂಭವಿಸಿದ ಭೂಕಂಪನ ವಿಶ್ವವನ್ನೇ ಬೆಚ್ಚಿ ಬೀಳೀಸುವಂತೆ ಮಾಡಿದೆ. ಹೌದು, ಶತಮಾನದ ಭೀಕರ ಎನ್ನಬಹುದಾದ ಪ್ರಬಲ ಭೂಕಂಪನವು ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಸಂಭವಿಸಿದ್ದು ಅಪಾರ ಪ್ರಮಾಣದಲ್ಲಿ ಆಸ್ತಿ ಹಾಗೂ ಪ್ರಾಣ ನಷ್ಟಗಳಾಗಿವೆ.


    ಈ ಪ್ರಕೃತಿ ವಿಕೋಪಕ್ಕೆ ಸಾವಿರಾರು ಜನರು ಬಲಿಯಾಗಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮಧ್ಯೆ ಡಚ್ ಮೂಲದ ಸಂಶೋಧಕರೊಬ್ಬರು ಮುಂದಿನ ಭೂಕಂಪನದ ಬಗ್ಗೆ ಹೇಳುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.


    ಟಚ್​ ಸಂಶೋಧಕರಿಂದ ಮುನ್ಸೂಚನೆ


    ಅಷ್ಟಕ್ಕೂ ಆ ತುಣುಕಿನಲ್ಲಿ ಡಚ್ ಸಂಶೋಧಕರಾದ (Duch Researcher) ಹೋಗ್ರ್ಬೆ (Hogrbe) ಎಂಬುವವರು ಟರ್ಕಿ ಭೂಕಂಪನದ ಮುನ್ಸೂಚನೆ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಹೌದು, ಹೋಗ್ರ್ಬೆ ಈ ಭಯಾನಕ ಭೂಕಂಪನ ಟರ್ಕಿ ಹಾಗೂ ಸಿರಿಯಾದಲ್ಲಿ ಆಗುವ ಮೂರು ದಿನಗಳ ಹಿಂದೆ ಆ ಬಗ್ಗೆ ಸುಳಿವು ನೀಡಿದ್ದರು. ಅಷ್ಟೆ ಅಲ್ಲದೆ ಆ ಭೂಕಂಪನದ ಪರಿಮಾಣವು ರಿಕ್ಟರ್ ಮಾಪಕದಲ್ಲಿ ಏಳಕ್ಕಿಂತಲೂ ಹೆಚ್ಚಾಗಿರುವುದಾಗಿ ಅವರು ಭವಿಷ್ಯ ನುಡಿದಿದ್ದರು.


    ಇದನ್ನೂ ಓದಿ: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಇದೀಗ ಅವರು ಮತ್ತೊಂದು ಭವಿಷ್ಯವನ್ನು ನುಡಿದಿದ್ದು ಮುಂದಿನ ಬಾರಿ ಭೂಕಂಪನವು ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಸಂಭವಿಸಲಿರುವುದಾಗಿ ಹೇಳಿದ್ದಾರೆ. ವಿದೇಶಿ ಮಾಧ್ಯಮವೊಂದು ತನ್ನ ಭಾರತದ ಸುದ್ದಿ ವಿಭಾಗದಲ್ಲಿ ಹೂಗರ್ಬೀಟ್ಸ್ ತಮ್ಮ ಟ್ವಿಟರ್ ಪುಟದಲ್ಲಿ ನೀಡಿರುವ ಈ ಹೇಳಿಕೆಯನ್ನು ಉಲ್ಲೇಖಿಸಿದೆ. ಅಫ್ಘಾನಿಸ್ತಾನವು ಈ ಭೂಕಂಪನದ ಕೇಂದ್ರ ಬಿಂದುವಾಗಲಿದೆ ಎಂದು ಹೇಳಲಾಗಿದೆ.


    ಅಫ್ಘಾನಿಸ್ತಾನದಲ್ಲಿ ಆರಂಭ


    ಈ ಭೂಕಂಪನವು ಮೊದಲಿಗೆ ಅಫ್ಘಾನಿಸ್ತಾನದಲ್ಲಿ ಪ್ರಾರಂಭವಾಗಿ ಪಾಕಿಸ್ತಾನದ ಮೂಲಕ ಭಾರತ ಪ್ರವೇಶಿಸಿ ನಂತರ ಹಿಂದು ಮಹಾಸಾಗರದಲ್ಲಿ ಅಂತ್ಯವಾಗಲಿದೆ ಎನ್ನಲಾಗಿದೆ. ಪಾಕಿಸ್ತಾನದ ಅಧಿಕಾರಿಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹೋಗ್ರ್ಬೆ ಅವರ ಈ ಮುನ್ಸೂಚನೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.


    ಹಾಗೆ ನೋಡಿದರೆ ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತದ ಈ ಪ್ರದೇಶಗಳು ಸಾಕಷ್ಟು ಗಡುಸಾಗಿವೆ, ಅಲ್ಲದೆ ಭೂಕಂಪನ ಅತ್ಯಂತ ಕೆಟ್ಟ ಪರಿಣಾಮ ಉಂಟು ಮಾಡಲು ಇಲ್ಲಿ ಸಾಧ್ಯವೇ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.


    ಭೂಕಂಪನದಿಂದ ಪ್ರಾಣ ತೆತ್ತವರ ಸಂಖ್ಯೆ 16,000


    ಇನ್ನು ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪನದಿಂದ ಪ್ರಾಣ ತೆತ್ತವರ ಸಂಖ್ಯೆ 16,000 ಗಡಿ ದಾಟಿದ್ದು ಅದು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಲ್ಲದೆ, ಉರುಳಿ ಬಿದ್ದ ಕಟ್ಟಡದ ಅವಶೇಷಗಳ ಮಧ್ಯೆ ಬದುಕುಳಿದಿರುವ ನೂರಾರು ಜನರನ್ನು ಹೊರಕ್ಕೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಅದಾಗ್ಯೂ ಇನ್ನು ಎಷ್ಟು ಜನರು ಸಿಲುಕಿದ್ದಾರೆಂಬುದು ಅಸ್ಪಷ್ಟವಾಗಿದ್ದು ಅವರನ್ನು ಬದುಕಿಸುವ ಆಸೆ ದೂರವಾದಂತೆನಿಸಿದೆ.


    ವರದಿಯೊಂದರ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಟ್ರ್ಯಾಕ್ಟರ್, ಬುಲ್ ಡೋಜರ್, ಜೀಪುಗಳು ಸೇರಿದಂತೆ 5,500ಕ್ಕೂ ಹೆಚ್ಚಿನ ವಾಹನಗಳು ಸೇವೆಯಲ್ಲಿ ನಿರತವಾಗಿವೆ ಎಂದು ತಿಳಿದುಬಂದಿದೆ.




    ಎರಡು ಡಜನ್ ಗಿಂತಲೂ ಹೆಚ್ಚಿನ ಸಂಖ್ಯೆ ದೇಶಗಳ ರಕ್ಷಣಾ ಕಾರ್ಯಕರ್ತರ ತಂಡಗಳು ಈಗಾಗಲೇ ಟರ್ಕಿ ಹಾಗೂ ಸಿರಿಯಾದಲ್ಲಿ ಬೀಡು ಬಿಟ್ಟು ಇತರೆ ಸ್ಥಳೀಯ ಕಾರ್ಯಕರ್ತರೊಡನೆ ಸೇರಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಭಾರತದಿಂದಲೂ ಸಹ ಔಷಧಿ ಹಾಗೂ ವೈದ್ಯಕೀಯ ಸಾಮಗ್ರಿಗಳೊಂದಿಗೆ ರಕ್ಷಣಾ ತಂಡಗಳು ಟರ್ಕಿ ಹಾಗೂ ಸಿರಿಯಾ ತಲುಪಿದ್ದು ಕೆಲಸದಲ್ಲಿ ನಿರತವಾಗಿವೆ.


    ಈಗಲೂ ಅಲ್ಲಿನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ. ಏಕೆಂದರೆ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ದೊಡ್ಡ ದೊಡ್ಡ ಕಾಂಕ್ರೀಟ್ ಬ್ಲಾಕುಗಳ ಮಧ್ಯೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಇನ್ನೂ ಬದುಕಿರಬಹುದು ಎನ್ನಲಾಗಿರುವ ನೂರಾರು ಮಹಿಳೆಯರು ಹಾಗೂ ಮಕ್ಕಳು ತಮ್ಮ ರಕ್ಷಿಸುವ ಸರದಿಗಾಗಿ ಕಾಯುತ್ತಿದ್ದಾರೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು