news18-kannada Updated:October 25, 2020, 3:17 PM IST
ನರೇಂದ್ರ ಮೋದಿ.
ನವ ದೆಹಲಿ (ಅಕ್ಟೋಬರ್ 25); ಇಡೀ ಭಾರತ ಇಂದು ದಸರಾ ಹಬ್ಬದ ಸಂಭ್ರಮದಲ್ಲಿದೆ. ಹಬ್ಬದ ಪ್ರಯುಕ್ತ ದೇಶದ ಜನರಿಗೆ 70ನೇ ಮನ್ ಕಿ ಬಾತ್ನಲ್ಲಿ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದು, "ಧೈರ್ಯಶಾಲಿ ಸೈನಿಕರು ಮತ್ತು ಭದ್ರತಾ ಪಡೆಗಳೊಂದಿಗೆ ಭಾರತ ದೃಢವಾಗಿ ನಿಂತಿದೆ. ಕೊರೋನಾ ಸಾಂಕ್ರಾಮಿಕದ ನಡುವೆ ಹಬ್ಬಗಳನ್ನು ಆಚರಿಸುವಾಗ ಸೈನಿಕರಿಗಾಗಿ ದೀಪ ಬೆಳಗಿಸಬೇಕು" ಎಂದು ದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ. ಈ ತಿಂಗಳ ಮನ್ ಕಿ ಬಾತ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, "ದಸರಾ ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿ, ದೇಶಾದ್ಯಂತ ಕೊರೋನಾ ಉಲ್ಬಣಗೊಳ್ಳುತ್ತಿರುವ ಈ ಸಮಯದಲ್ಲಿ ಹಬ್ಬಗಳನ್ನು ಆಚರಿಸುವಾಗ ಜನರು ತಾಳ್ಮೆ, ಎಚ್ಚರಿಕೆ ವಹಿಸಬೇಕು" ಎಂದು ಹೇಳಿದ್ದಾರೆ.
“ದೇಶದ ಜನರನ್ನು, ದೇಶವನ್ನು ಹೊರಗಿನ ದಾಳಿಗಳಿಂದ ಸುರಕ್ಷಿತವಾಗಿರಿಸಲು ನಮ್ಮ ಸೈನಿಕರು ತಮ್ಮ ಕುಟುಂಬಗಳಿಂದ ದೂರ ಇದ್ದು ಸೇವೆ ಸಲ್ಲಿಸುತ್ತಿದ್ದಾರೆ. ಈ ಸಮಯದಲ್ಲಿ ಈದ್, ದೀಪಾವಳಿಯಂತಹ ಹಲವಾರು ಹಬ್ಬಗಳು ನಡೆಯಲಿವೆ. ಈ ಹಬ್ಬಗಳ ಸಮಯದಲ್ಲಿ, ಗಡಿಯಲ್ಲಿ ನಿಂತಿರುವ ನಮ್ಮ ಕೆಚ್ಚೆದೆಯ ಸೈನಿಕರನ್ನು ಸಹ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದಿದ್ದಾರೆ
ಭಾರತ ಮಾತೆಯ ಈ ಧೈರ್ಯಶಾಲಿ ಪುತ್ರರು ಮತ್ತು ಹೆಣ್ಣುಮಕ್ಕಳ ಗೌರವಾರ್ಥವಾಗಿ ನಾವು ಮನೆಯಲ್ಲಿ ಸೈನಿಕರಿಗಾಗಿ ದೀಪವನ್ನು ಬೆಳಗಿಸಬೇಕಾಗಿದೆ’ ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಹೇಳಿದರು.
ಭಾರತ-ಚೀನಾ ಭಿನ್ನಾಭಿಪ್ರಾಯಕ್ಕೆ ಸಿಲುಕಿರುವ ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಈ ಅಭಿಪ್ರಾಯಗಳು ವ್ಯಕ್ತಪಡಿಸಿದ್ದಾರೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಸುಮಾರು 3,500 ಕಿ.ಮೀ ಉದ್ದದ ಗಡಿಯಲ್ಲಿ ಚೀನಾ ತನ್ನ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಗಮನಾರ್ಹವಾಗಿ ಬಲಪಡಿಸಿದ್ದು, ಲಡಾಖ್ನಲ್ಲಿ ಉದ್ವಿಗ್ನತೆ ಕಡಿಮೆಗೊಳ್ಳುವ ಯಾವುದೇ ಲಕ್ಷಣ ಕಾಣಿಸಿಲ್ಲ.
ಇದನ್ನೂ ಓದಿ : ಭಾರತದ ಇಂಟರ್ನೆಟ್ ಸ್ಪೀಡ್ ವಿಶ್ವದಲ್ಲಿಯೇ ಅತ್ಯಂತ ಕಳಪೆ; ಪ್ರಶ್ನಾರ್ಥಕವಾದ ಡಿಜಿಟಲ್ ಇಂಡಿಯಾ
ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆಲುವು ಖಚಿತವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಮಗೆಲ್ಲಾ ಸಂಯಮ ಮುಖ್ಯ ಎಂದಿದ್ದಾರೆ. ಹಬ್ಬದ ಸಂದರ್ಭದಲ್ಲಿ ದೇಶದ ಜನತೆ ಸ್ವದೇಶಿ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.
"ಹಬ್ಬದ ಆಚರಣೆಯಲ್ಲಿ ಕೊರೋನಾ ನಿಯಮಾವಳಿಗಳನ್ನು ಮರೆಯಬೇಡಿ. ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ ಎಂದಿದ್ದಾರೆ. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಖಾದಿ ಮಾಸ್ಕ್ಗಳು ಜನಪ್ರಿಯವಾಗಿವೆ. ಮೆಕ್ಸಿಕೊದ ಒಕ್ಸಾಕ ಪ್ರದೇಶದಲ್ಲಿಯೂ ಖಾದಿ ಮಾಸ್ಕ್ ತಯಾರಿಸಲಾಗುತ್ತಿದೆ. ಖಾದಿಯು ಪರಿಸರಸ್ನೇಹಿಯೂ ಶರೀರ ಸ್ನೇಹಿಯೂ ಆಗಿದೆ" ಎಂದು ಹೇಳಿದ್ದಾರೆ.
Published by:
MAshok Kumar
First published:
October 25, 2020, 3:17 PM IST