Yogi Adityanath: ಯೋಗಿ ಆದಿತ್ಯನಾಥ್‌ಗೆ ಹತ್ಯೆ ಬೆದರಿಕೆ, ಪತ್ರದಲ್ಲಿ ಸ್ಫೋಟಕ ಕಳಿಸಿದ್ಯಾರು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ಹಿಂದಿನಿಂದಲೂ ಉಗ್ರ ಸಂಘಟನೆಗಳ ಟಾರ್ಗೆಟ್ ಆಗಿದ್ದಾರೆ. ಈ ಹಿಂದೆಯೂ ಅವರ ಹತ್ಯೆಗೆ ಹಲವಾರು ಭಾರಿ ವಿಫಲ ಯತ್ನಗಳು ನಡೆದಿವೆ. ಈಗ ಬೆದರಿಕೆ ಪತ್ರದ ಜೊತೆಗೆ ಸ್ಫೋಟಕ ಸಿಕ್ಕಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
ಉತ್ತರ ಪ್ರದೇಶ (Uttara Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಉಗ್ರರ (terrorist) ಹಿಟ್ ಲಿಸ್ಟ್‌ನಲ್ಲಿ (hit list) ಇರೋದು ಗೊತ್ತಿರೋ ವಿಚಾರ. ಉಗ್ರರ ವಿರುದ್ಧದ ಹಲವು ಕಾರ್ಯಾಚರಣೆ, ಹಲವು ನಗರಗಳಿಗೆ ಇಟ್ಟಿದ್ದ ಮೊಘಲ್ ಹೆಸರುಗಳ ಬದಲಾವಣೆ ಸೇರಿದಂತೆ ತಮ್ಮ ಹಲವು ಯೋಜನೆಗಳಿಂದ ಯೋಗಿ ಈಗಾಗಲೇ ಉಗ್ರರ ಟಾರ್ಗೆಟ್ ಆಗಿದ್ದಾರೆ. ಪಾಕಿಸ್ತಾನ (Pakistan) ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಅನೇಕ ಉಗ್ರರು ಯೋಗಿ ಆದಿತ್ಯನಾಥ್ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. ಇದೀಗ ಇದೇ ವಿಚಾರದ ಕುರಿತಂತೆ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಹೌದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆಗೈಯಲು ಉಗ್ರರು ಇದೀಗ ಮತ್ತೊಮ್ಮೆ ವಿಫಲ ಯತ್ನ ನಡೆಸಿದ್ದಾರೆ. ಗಣರಾಜ್ಯೋತ್ಸವದ (republic day) ದಿನವೇ ಸ್ಕೆಚ್ ಹಾಕಿದ್ದು, ಪೊಲೀಸರ ಮುಂಜಾಗೃತೆಯಿಂದ ಉಗ್ರರ ಯತ್ನ ವಿಫಲವಾಗಿದೆ.

ಗಣರಾಜ್ಯೋತ್ಸವದ ದಿನವೇ ಉಗ್ರರ ಪ್ಲಾನ್

ಇಂದು ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಇದೆ. ಆದರೆ ಉಗ್ರರು ಮಾತ್ರ ವಿಧ್ವಂಸಕ ಕೃತ್ಯ ನಡೆಸಿ, ದೇಶದ ಭದ್ರತೆಗೆ ಧಕ್ಕೆ ತರುವು ಪ್ಲಾನ್‌ನಲ್ಲಿದ್ದರು. ಈ ಮೂಲಕ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಲು ಯೋಜನೆ ರೂಪಿಸಿದ್ದರು. ಈ ಯೋಜನೆಯ ಒಂದು ಭಾಗವೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹತ್ಯೆಯ ಪ್ಲಾನ್.

ಮಧ್ಯಪ್ರದೇಶದಲ್ಲಿ ಸಿಕ್ತು ಬೆದರಿಕೆ ಪತ್ರ

ಮಧ್ಯಪ್ರದೇಶದ ರೇವಾದಲ್ಲಿ ಉಗ್ರರ ಬೆದರಿಕೆಯ ಪತ್ರ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ-30ರ ಸೇತುವೆಯ ಕೆಳಗೆ ಈ ವಸ್ತುಗಳು ಪತ್ತೆಯಾಗಿವೆ. ಟೈಮರ್‌ನೊಂದಿಗೆ ಸ್ಫೋಟಕವನ್ನು ಜಿಲ್ಲಾ ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆಯ ಪತ್ರವೊಂದು ಪತ್ತೆಯಾಗಿದೆ.

ಇದನ್ನೂ ಓದಿ: ಬಿಜೆಪಿ ಸೇರಿದ RPN Singh; ಹಿರಿಯರಿಲ್ಲದ ಮನೆಯಂತೆ ಆದ ಉತ್ತರ ಪ್ರದೇಶ ಕಾಂಗ್ರೆಸ್

ಪತ್ರದಲ್ಲಿ ಸ್ಫೋಟಕ ಇಟ್ಟಿದ್ದ ಭಯೋತ್ಪಾದಕರು

ಮಧ್ಯಪ್ರದೇಶದ ರೇವಾದಲ್ಲಿ ಸಿಕ್ಕಿದ ಪತ್ರದಲ್ಲಿ ಸ್ಫೋಟಕವೂ ಪತ್ತೆಯಾಗಿದೆ. ಪತ್ರದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವ ಬಗ್ಗೆ ಉಗ್ರರು ಬೆದರಿಕೆ ಹಾಕಿದ್ದಾರೆ. ಪೊಲೀಸರ ಮುಂಜಾಗ್ರತೆಯಿಂದ ಮಹಾದೊಡ್ಡ ವಿಪತ್ತೊಂದು ತಪ್ಪಿಹೋಗಿದೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು, ಬಾಂಬ್ ಸ್ಕ್ವಾಡ್‌ನ ಸಹಾಯದಿಂದ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಯೋಗಿ ಹತ್ಯೆಗೆ ಸ್ಕೆಚ್

ಉತ್ತರಪ್ರದೇಶದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯುಪಿ ಸಿಎಂ ಆದಿತ್ಯನಾಥ್‌ಗೆ ಬೆದರಿಕೆಯು ಭಯೋತ್ಪಾದನಾ ಚಟುವಟಿಕೆಗಳ ಭೀತಿಯನ್ನು ಹುಟ್ಟುಹಾಕಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಹೀಗಾಗಿ ಈ ವೇಳೆ ಆತಂಕ ಸೃಷ್ಟಿಸುವುದು ಉಗ್ರರ ಉದ್ದೇಶವಾಗಿತ್ತು.

ಇದನ್ನೂ ಓದಿ: Padma Awards 2022: ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ

ಯೋಗಿ ವಿರುದ್ಧ ಸ್ಕೆಚ್ ಇದೇ ಮೊದಲಲ್ಲ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹತ್ಯೆಗೆ ಸ್ಕೆಚ್ ಹಾಕಿವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಬೇರೆ ಬೇರೆ ಭಯೋತ್ಪಾದಕ ಸಂಘಟನೆಗಳ ಉಗ್ರರು ಯೋಗಿ ಹತ್ಯೆಗೆ ಯತ್ನ ನಡೆಸಿದ್ದರು. ಆದರೆ ಅವೆಲ್ಲವೂ ವಿಫಲವಾಗಿದೆ.

ಇದೀಗ ಭಯೋತ್ಪಾದಕರ ಪತ್ರ ಹಾಗೂ ಸ್ಫೋಟಕ ಸಿಕ್ಕಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಧ್ಯಪ್ರದೇಶ ಪೊಲೀಸರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರೆ ಪತ್ರದ ಹಿಂದಿರೋ ವ್ಯಕ್ತಿಗಳು ಯಾರು? ಆ ಉಗ್ರರಿಗೆ ಬೆಂಬಲ ನೀಡುತ್ತಿರುವುದು ಯಾರು, ಇದರ ಹಿಂದೆ ಪಾಕಿಸ್ತಾನದ ಕೈವಾಡ ಇದೆಯಾ ಅನ್ನೋ ಬಗ್ಗೆ ಗೊತ್ತಾಗಲಿದೆ.
Published by:Annappa Achari
First published: