ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ 2 ಅಡಗುತಾಣ ಧ್ವಂಸ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

ಲಷ್ಕರ್-ಇ-ತೊಯ್ಬಾ ಸಂಘಟನೆಯ ಎರಡು ಅಡಗುತಾಣಗಳನ್ನು ಪುಲ್ವಾಮಾ ಜಿಲ್ಲೆಯ ಆವಂತಿಪೊರದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಪತ್ತೆ ಹಚ್ಚಿ, ಧ್ವಂಸ ಮಾಡಿದ್ದಾರೆ.

ಪುಲ್ವಾಮಾ ಬಳಿ ವಶಕ್ಕೆ ಪಡೆಯಲಾಗಿರುವ ಎಲ್​ಇಟಿ ಉಗ್ರರ ಶಸ್ತ್ರಾಸ್ತ್ರಗಳು

ಪುಲ್ವಾಮಾ ಬಳಿ ವಶಕ್ಕೆ ಪಡೆಯಲಾಗಿರುವ ಎಲ್​ಇಟಿ ಉಗ್ರರ ಶಸ್ತ್ರಾಸ್ತ್ರಗಳು

  • Share this:
ಶ್ರೀನಗರ (ಆ. 13): ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೊರದಲ್ಲಿ ಭಾರತೀಯ ಭದ್ರತಾ ಪಡೆ ಶೋಧ ಕಾರ್ಯಾಚರಣೆಯಲ್ಲಿ ನಡೆಸಿದ್ದು, ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿ, ಧ್ವಂಸ ಮಾಡಲಾಗಿದೆ. ಇಂದು ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಷ್ಕರ್-ಇ-ತೊಯ್ಬಾ ಸಂಘಟನೆಯ ಎರಡು ಅಡಗುತಾಣಗಳನ್ನು ಪುಲ್ವಾಮಾ ಜಿಲ್ಲೆಯ ಆವಂತಿಪೊರದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಎರಡೇ ದಿನಗಳು ಬಾಕಿ ಇರುವುದರಿಂದ ಶೋಧ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಯ ಸಿಬ್ಬಂದಿ ಇಂದು ಬೆಳಗ್ಗೆ ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿ,  ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ಉಗ್ರರು ಈ ಅಡಗುತಾಣವನ್ನು ಬಳಸುತ್ತಿದ್ದರು.

ಇದನ್ನೂ ಓದಿ: ಎಚ್-1ಬಿ ವೀಸಾ ನಿಷೇಧದ ನಿಯಮ ಸಡಿಲಿಕೆ; ಹಳೇ ಉದ್ಯೋಗಕ್ಕೆ ಮರಳಲು ಅಮೆರಿಕ ಅನುಮತಿ

ಆವಂತಿಪೊರದ ಬಳಿ ಇರುವ ಬದ್ರೂ ಬರ್ಸೋ ಅರಣ್ಯದಲ್ಲಿ ಉಗ್ರರ ಎರಡು ಅಡಗುತಾಣಗಳು ಪತ್ತೆಯಾಗಿವೆ. ಇಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳು, ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ಸ್ಫೋಟಕ ವಸ್ತುಗಳಿದ್ದವು. ಇನ್ನೂ ಹೆಚ್ಚು ಗುಪ್ತ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಆಗಸ್ಟ್​ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ತಪಾಸಣೆ ನಡೆಸಲಾಗಿತ್ತು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದುದರಿಂದ ಹೆಚ್ಚಿನ ನಿಗಾ ವಹಿಸಲಾಗಿತ್ತು. ಈ ವೇಳೆ ಅಡಗುತಾಣದಲ್ಲಿ ಮದ್ದು-ಗುಂಡುಗಳು, ಎಕೆ 47, ಗ್ರೆನೇಡ್ಸ್​ ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದು, ಅಡಗುತಾಣವನ್ನು ಧ್ವಂಸಗೊಳಿಸಲಾಗಿದೆ.
Published by:Sushma Chakre
First published: