ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಎಲ್​ಇಟಿ ಉಗ್ರನನ್ನು ಬಂಧಿಸಿದ ಭದ್ರತಾ ಪಡೆ

ನಿಸಾರ್ ಅಹಮದ್​ ದಾರ್​​ 23 ವರ್ಷದವನಾಗಿದ್ದು, ಆತನ ವಿರುದ್ಧ 8 ಎಫ್​ಐಆರ್​​​ ದಾಖಲಾಗಿವೆ. ಉಗ್ರರ ಪಟ್ಟಿಯಲ್ಲಿರುವ ಈತ ಈಗಾಗಲೇ ಎರಡು ಬಾರಿ ಪಬ್ಲಿಕ್​ ಸೇಫ್ಟಿ ಆ್ಯಕ್ಟ್​​ ಅಡಿಯಲ್ಲಿ ಪೊಲೀಸರ ವಶವಾಗಿದ್ದ ಎಂದು ಮೂಲಗಳು ತಿಳಿಸಿವೆ.

news18-kannada
Updated:January 4, 2020, 10:50 AM IST
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಎಲ್​ಇಟಿ ಉಗ್ರನನ್ನು ಬಂಧಿಸಿದ ಭದ್ರತಾ ಪಡೆ
ನಿಸಾರ್ ಅಹಮದ್​ ದಾರ್​​ 23 ವರ್ಷದವನಾಗಿದ್ದು, ಆತನ ವಿರುದ್ಧ 8 ಎಫ್​ಐಆರ್​​​ ದಾಖಲಾಗಿವೆ. ಉಗ್ರರ ಪಟ್ಟಿಯಲ್ಲಿರುವ ಈತ ಈಗಾಗಲೇ ಎರಡು ಬಾರಿ ಪಬ್ಲಿಕ್​ ಸೇಫ್ಟಿ ಆ್ಯಕ್ಟ್​​ ಅಡಿಯಲ್ಲಿ ಪೊಲೀಸರ ವಶವಾಗಿದ್ದ ಎಂದು ಮೂಲಗಳು ತಿಳಿಸಿವೆ.
  • Share this:
ಜಮ್ಮು(ಜ.04): ಭದ್ರತಾ ಪಡೆಯು ಲಷ್ಕರ್​-ಇ-ತೋಯ್ಬಾ ಸಂಘಟನೆಗೆ ಸೇರಿದ ಉಗ್ರ ನಿಸಾರ್​​ ಅಹಮದ್​ ದಾರ್​​ನನ್ನು ಶ್ರೀನಗರದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಿದೆ.  ಉಗ್ರ ಅಡಗಿ ಕುಳಿತಿದ್ದಾನೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು.

ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಶ್ರೀನಗರದ ಮಹಾರಾಜ ಹರಿ ಸಿಂಗ್​ ಆಸ್ಪತ್ರೆಯಲ್ಲಿ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಅಂದರೆ 2019 ನವೆಂಬರ್​​​ನಲ್ಲಿ ಕುಲ್ಲಾನ್​​​ ಗಂದೇರ್​​ಬಲ್​​ನಲ್ಲಿ ನಡೆದ ಎನ್​ಕೌಂಟರ್​​​​ನಲ್ಲಿ ನಿಸಾರ್​​ ತಪ್ಪಿಸಿಕೊಂಡಿದ್ದ. ಆತ ಭದ್ರತಾ ಪಡೆ ಮೇಲೆ ದಾಳಿ ನಡೆಸಲು ಪ್ಲಾನ್​ ಮಾಡಿದ್ದ ಎನ್ನಲಾಗಿತ್ತು.

ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ; ಸತತ 2ನೇ ಬಾರಿಗೆ ಕೇರಳ ಟ್ಯಾಬ್ಲೋ ತಿರಸ್ಕೃತ

ಇದಾದ ಬಳಿಕ, ಭದ್ರತಾ ಪಡೆ ಸ್ಥಳೀಯ ಪೊಲೀಸರ ಜತೆ ಸೇರಿ ಶ್ರೀನಗರದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಕಾರ್ಯಾಚರಣೆ ಯಶಸ್ವಿಯಾಗಿದ್ದು, ಶುಕ್ರವಾರ ಎಲ್​ಇಟಿ ಸಂಘಟನೆಗೆ ಸೇರಿದ ಉಗ್ರ ನಿಸಾರ್​​ನನ್ನು ಬಂಧಿಸಿದ್ದಾರೆ. ಇನ್ನು, ಉಗ್ರನ ಬಳಿ ಇದ್ದ ಅಪಾರ ಪ್ರಮಾಣದ ಮದ್ದು-ಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿಸಾರ್ ಅಹಮದ್​ ದಾರ್​​ 23 ವರ್ಷದವನಾಗಿದ್ದು, ಆತನ ವಿರುದ್ಧ 8 ಎಫ್​ಐಆರ್​​​ ದಾಖಲಾಗಿವೆ. ಉಗ್ರರ ಪಟ್ಟಿಯಲ್ಲಿರುವ ಈತ ಈಗಾಗಲೇ ಎರಡು ಬಾರಿ ಪಬ್ಲಿಕ್​ ಸೇಫ್ಟಿ ಆ್ಯಕ್ಟ್​​ ಅಡಿಯಲ್ಲಿ ಪೊಲೀಸರ ವಶವಾಗಿದ್ದ ಎಂದು ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲದೇ, ನಿಸಾರ್​ ಉತ್ತರ ಕಾಶ್ಮೀರದಲ್ಲಿ ಹೆಚ್ಚು ಸಕ್ರಿಯವಾಗಿರುವ ಎಲ್​ಇಟಿ ಉಗ್ರ ಸಲೀಂ ಪರಾಯ್​​​ನ ಜೊತೆ ಇದ್ದ. ಉಗ್ರ ಚಟುವಟಿಕೆಗಳಲ್ಲಿ ಹೆಚ್ಚು ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯೋಜಿತ ಕಾರ್ಯಾಚರಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭದ್ರತಾ ಪಡೆಗಳು ಈಗ ಆತನನ್ನು ವಿಚಾರಣೆ ನಡೆಸುತ್ತಿವೆ.

ಇರಾಕ್​ ಮೇಲೆ ಅಮೆರಿಕ ಸೇನಾಪಡೆಯಿಂದ ಮತ್ತೆ ವಾಯುದಾಳಿ; ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ 6 ಜನ ಸಾವು
First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading