ಗಾಯಕಿ ಲತಾ ಮಂಗೇಶ್ಕರ್ ಬಂಗಲೆ ಬಳಿ ಕಂಡ ಚಿರತೆ: ಆತಂಕದಲ್ಲಿ ಸ್ಥಳೀಯರು..!

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಬಂಗಲೆಯ ಸಮೀಪ ಇರುವ ಬಂಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಚಿರತೆಯನ್ನು ಕಂಡದ್ದಾಗಿ ಸ್ಥಳೀಯರು ಹೇಳಿದ್ದಾರೆ.

ಲತಾ ಮಂಗೇಶ್ಕರ್ ಬಂಗಲೆ ಬಳಿ ಕಂಡ ಚಿರತೆ

ಲತಾ ಮಂಗೇಶ್ಕರ್ ಬಂಗಲೆ ಬಳಿ ಕಂಡ ಚಿರತೆ

  • Share this:
ಮಹಾರಾಷ್ಟ್ರದ ಕೊಲ್ಲಾಪುರದ ಪನ್ಹಾಲ ಪ್ರದೇಶದಲ್ಲಿ ಚಿರತೆಯೊಂದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಆರಂಭದಲ್ಲಿ ಈ ಚಿರತೆ ಕಣ್ಣಿಗೆ ಬಿದ್ದದ್ದು ಮೂರು ಜನ ಸ್ನೇಹಿತರಿಗೆ. ಅವರು ಆಗಸ್ಟ್ 13 ರಂದು ಸಂಜೆ ಪನ್ಹಾಲ ಕೋಟೆಯ ಬಳಿ ಇರುವ ಬಂಡೆಯೊಂದರ ಮೇಲೆ ಚಿರತೆಯೊಂದು ಮಲಗಿರುವುದನ್ನು ಕಂಡರು ಎಂದು ವರದಿಗಳು ತಿಳಿಸಿವೆ. ಆ ಚಿರತೆ ಕಂಡು ಬಂದ ರಸ್ತೆಯನ್ನು ಪ್ರಸ್ತುತ ಅಲ್ಲಿನ ನಿವಾಸಿಗಳು ಮತ್ತು ಪ್ರವಾಸಿಗರು ಪನ್ಹಾಲ ಕೋಟೆಯನ್ನು ತಲುಪಲು ಪರ್ಯಾಯ ಮಾರ್ಗ ಉಪಯೋಗಿಸುತ್ತಿದ್ದಾರೆ. ಸದ್ಯಕ್ಕೆ ಪನ್ಹಾಲ ಕೋಟೆಗೆ ಹೋಗುವ ಮುಖ್ಯ ಮಾರ್ಗವನ್ನು ಭೂಕುಸಿತದ ಕಾರಣದಿಂದಾಗಿ ಮುಚ್ಚಲಾಗಿದೆ.

ಚಿರತೆ ಕಂಡು ಬಂದಿರುವ ಕುರಿತು ಅಲ್ಲಿನ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದು, ಕೋಟೆಯನ್ನು ತಲುಪಲು ನಿಕಂವಾಡಿ ಮಾರ್ಗ ಬಳಸುವುದು ಅಪಾಯಕಾರಿ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಚಿರತೆ, ತನ್ನ ಸ್ನೇಹಿತರ ಜೊತೆ ಆ ಮಾರ್ಗವಾಗಿ ಹೋಗುತ್ತಿದ್ದ ಉತ್ತಮ್ ದಲ್ವಿ ಅವರ ಕಣ್ಣಿಗೆ ಬಿದ್ದಿತ್ತು. ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಬಂಗಲೆಯ ಸಮೀಪ ಇರುವ ಬಂಡೆಯ ಮೇಲೆ ವಿಶ್ರಮಿಸುತ್ತಿದ್ದ ಚಿರತೆಯನ್ನು ಕಂಡದ್ದಾಗಿ ಉತ್ತಮ್ ದಲ್ವಿ ಹೇಳಿದ್ದಾರೆ.

Panhala Fort, Lata Mangeshkar, Leopard, ಪನ್ಹಾಲ ಕೋಟೆ, ಲತಾ ಮಂಗೇಶ್ಕರ್, ಚಿರತೆ, Leopard Spotted Near Singer Lata Mangeshkars Bungalow in Kolhapur ae
ಚಿರತೆ


ಅವರು ಆ ಚಿರತೆಯ ಫೋಟೋ ತೆಗೆಯಲು ತಮ್ಮ ಫೋಟೋಗ್ರಾಫರ್ ಸ್ನೇಹಿತನನ್ನು ಕೂಡ ಆ ಸ್ಥಳಕ್ಕೆ ಬರುವಂತೆ ಕರೆ ಮಾಡಿದ್ದರು. ಆ ಪ್ರದೇಶದಲ್ಲಿ ಚಿರತೆ ಕಂಡು ಬಂದಿರುವ ಸಂಗತಿ ಕೇಳಿ ಅಲ್ಲಿನ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಆದರೆ ಚಿರತೆ ಅದರ ನೈಜ ವಾಸ ಸ್ಥಾನದಲ್ಲಿ ಇರುವುದರಿಂದ ಯಾರೂ ಹೆದರಬಾರದು ಮತ್ತು ಅದು ಯಾರಿಗೂ ಹಾನಿ ಮಾಡಿಲ್ಲ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಜನರಿಗೆ ಸಮಾಧಾನ ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ಮಾಡೋಕೆ ಕೆಲಸ ಇಲ್ಲ ಅಂದ್ರೆ ರಶ್ಮಿಕಾ ಮಂದಣ್ಣ ಏನೆಲ್ಲ ಮಾಡ್ತಾರೆ ನೋಡಿ..!

ಪನ್ಹಾಲ ಕೋಟೆಯ ಸುತ್ತಮುತ್ತ ಇರುವ ವನ ಪ್ರದೇಶದಲ್ಲಿ ಸುಮಾರು 7 - 8 ಚಿರತೆಗಳು ವಾಸಿಸುತ್ತಿವೆ ಎಂದು ಆ ವ್ಯಕ್ತಿ ಜನರಿಗೆ ಮಾಹಿತಿ ನೀಡಿದ್ದಾರೆ. ಆ ಪ್ರದೇಶದಲ್ಲಿ ಚಿರತೆ ಕಂಡು ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ, ಅಲ್ಲಿನ ಸ್ಥಳೀಯರು ಚಿರತೆಯನ್ನು ನೋಡಲು ಗುಂಪು ಸೇರಿದ್ದರು. ಆದರೆ ಸುತ್ತಲೂ ಜನರ ಗುಂಪನ್ನು ನೋಡಿದ ಆ ಚಿರತೆ ಕಾಡಿಗೆ ಮರಳಿತು.

ಆದರೆ, ಮಹಾರಾಷ್ಟ್ರದ ಈ ಪ್ರದೇಶದಲ್ಲಿ, ಚಿರತೆಯೊಂದು ಜನ ವಸತಿ ಇರುವ ಸ್ಥಳಕ್ಕೆ ಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಏಪ್ರಿಲ್‌ ಆರಂಭದಲ್ಲಿ ಸಾಂಗ್ಲಿ ನಗರದ ರಾಜ್‍ವಾಡ ಚೌಕದಲ್ಲಿ ಚಿರತೆಯೊಂದು ಕಂಡು ಬಂದಿತ್ತು. ನಗರದಲ್ಲಿ ಸೇರಿಕೊಂಡಿರುವ ಚಿರತೆಯನ್ನು ಪತ್ತೆ ಹಚ್ಚಲು ಮತ್ತು ಅದನ್ನು ಅಲ್ಲಿಂದ ರಕ್ಷಿಸಲು, ಕೋಲ್ಹಾಪುರದಿಂದ ರಕ್ಷಕರ ತಂಡವನ್ನು ಕರೆಸಲಾಗಿತ್ತು. ಆ ಚಿರತೆ ಅಲ್ಲಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಅರಣ್ಯ ಅಧಿಕಾರಿಗಳನ್ನು ಆ ಸ್ಥಳವನ್ನು ಸುತ್ತುವರೆಯಬೇಕಾಯಿತು. ಅದೊಂದು ಹೆಣ್ಣು ಚಿರತೆ ಆಗಿತ್ತು. ಅದರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ  ಅಧಿಕಾರಿಗಳು ಅದನ್ನು ತಲುಪಬೇಕಾಯಿತು.

ಇದನ್ನೂ ಓದಿ: ಮಗಳ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಅನು ಪ್ರಭಾಕರ್​-ರಘು ಮುಖರ್ಜಿ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Anitha E
First published: