ಖ್ಯಾತ ಸಂಗೀತಗಾರ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫ ಖಾನ್ ನಿಧನ

Ghulam Mustafa Khan

Ghulam Mustafa Khan

1931 ರಲ್ಲಿ ಉತ್ತರಪ್ರದೇಶದ ಬದಾಯುನಲ್ಲಿ ಜನಿಸಿದ ಉಸ್ತಾದ್ ಮುಸ್ತಫ ಅವರಿಗೆ 1991ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು. ಹಾಗೆಯೇ ಸಂಗೀತ ಕ್ಷೇತ್ರದಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ 2006ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಒಲಿದು ಬಂತು.

 • Share this:

  ಮುಂಬೈ, (ಜ.17): ಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಗಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫ ಖಾನ್ ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಸ್ವಗೃಹದಲ್ಲಿ 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.


  1931 ರಲ್ಲಿ ಉತ್ತರಪ್ರದೇಶದ ಬದಾಯುನಲ್ಲಿ ಜನಿಸಿದ ಉಸ್ತಾದ್ ಮುಸ್ತಫ ಅವರಿಗೆ 1991ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು. ಹಾಗೆಯೇ ಸಂಗೀತ ಕ್ಷೇತ್ರದಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ 2006ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಒಲಿದು ಬಂತು. ಬಾಲಿವುಡ್​ನ ಹೆಸರಾಂತ ಗಾಯಕರಾದ ಆಶಾ ಭೋಂಸ್ಲೆ, ಮನ್ನಾಡೆ, ವಹೀದಾ ರೆಹಮಾನ್, ಗೀತಾ ದತ್, ಎ.ಆರ್ ರೆಹಮಾನ್, ಹರಿಹರನ್, ಶಾನ್, ಸೋನು ನಿಗಮ್, ಶಿಲ್ಪಾ ರಾವ್ ಮುಂತಾದವರಿಗೆ ಉಸ್ತಾದ್ ಮುಸ್ತಫಾ ಗುರುವಿನ ಸ್ಥಾನದಲ್ಲಿದ್ದರು.  ಭಾರತೀಯ ಸಂಗೀತ ಕ್ಷೇತ್ರದಲ್ಲಿ ಉಸ್ತಾದ್ ಮುಸ್ತಾಫ ಖಾನ್ ಅವರ ಸಾಧನೆಯನ್ನು ಗಣನೆಗೆ ತೆಗೆದುಕೊಂಡು 2018ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು. ಇನ್ನು ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ನಿಧನಕ್ಕೆ ಖ್ಯಾತ ಗಾಯಕಿ ಲತಾ ಮಂಗೇಶ್ವರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.


  ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಉಸ್ತಾದ್ ಗುಲಾಮ್ ಮುಸ್ತಫ ಖಾನ್ ಸಾಹೇಬ್ ಅವರ ನಿಧನವು ನಮ್ಮ ಸಾಂಸ್ಕೃತಿಕ ಜಗತ್ತನ್ನು ಬಡವಾಗಿಸಿದೆ. ಸಂಗೀತ ಕ್ಷೇತ್ರದಲ್ಲಿದ್ದ ಅವರ ಸೃಜನಶೀಲತೆಯ ಹಲವು ತಲೆಮಾರುಗಳನ್ನು ಮಂತ್ರಮುಗ್ಧರನ್ನಾಗಿಸಿತ್ತು. ಅವರೊಂದಿಗೆ ನಡೆಸಿದ ಸಂವಹನ ಇನ್ನೂ ಕೂಡ ನನ್ನ ನೆನಪಿನಲ್ಲಿವೆ. ಅವರ ಅಗಲಿಕೆಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

  Published by:zahir
  First published: