HOME » NEWS » National-international » LEBANON PM ANNOUNCES RESIGNATION OF GOVERNMENT OVER DEADLY BEIRUT BLASTS RMD

ಬೈರೂತ್ ಸ್ಫೋಟದ ಹೊಣೆ ಹೊತ್ತು ರಾಜೀನಾಮೆ ನೀಡಿದ ಲೆಬನಾನ್ ಪ್ರಧಾನಿ

ಈ ಅವಘಢಕ್ಕೆ ರಾಜಕಾರಣಿಗಳ ನಿರ್ಲಕ್ಷ್ಯ ಮುಖ್ಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಅಲ್ಲಿನ ಜನರು ಬೀದಿಗೆ ಇಳಿದು ದಂಗೆ ನಡೆಸುತ್ತಿದ್ದಾರೆ. ದಂಗೆ ನಿಯಂತ್ರಣ ಮಾಡಲಾಗದೆ ಮಣಿದಿರುವ ಅಲ್ಲಿನ ಪ್ರಧಾನಿ ರಾಜೀನಾಮೆ ನೀಡಿದ್ದಾರೆ.

news18-kannada
Updated:August 11, 2020, 1:05 PM IST
ಬೈರೂತ್ ಸ್ಫೋಟದ ಹೊಣೆ ಹೊತ್ತು ರಾಜೀನಾಮೆ ನೀಡಿದ ಲೆಬನಾನ್ ಪ್ರಧಾನಿ
ಬೈರೂತ್​ ಸ್ಫೋಟ
  • Share this:
ಬೈರೂತ್ (ಆ.11)​: ಲೆಬನಾನ್​ನ ಬೈರೂತ್​ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಅಲ್ಲಿನ ಸರ್ಕಾರ ಭಾರೀ ದಂಡ ತೆತ್ತಿದೆ. ಸ್ಫೋಟದ ಬೆನ್ನಲ್ಲೇ ಅಲ್ಲಿನ ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಪರಿಣಾಮ ಲೆಬನಾನ್​ ಪ್ರಧಾನಿ ಹಸ್ಸನ್​ ದಿಯಾಬ್​ ರಾಜೀನಾಮೆ ನೀಡಿದ್ದಾರೆ.

ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಆಗಸ್ಟ್​5ರಂದು ಮಧ್ಯಾಹ್ನ ಸಂಭವಿಸಿರುವ ಭಾರೀ ಸ್ಟೋಟದಿಂದ ಅಲ್ಲಿನ ಜನರ ಬದುಕು ನುಚ್ಚು ನೂರಾಗಿದೆ. 6 ಸಾವಿರ ಜನ ಗಾಯಗೊಂಡು 160 ಹೆಚ್ಚು ಜನರು ಮೃತಪಟ್ಟಿದ್ದಾರೆ. 20 ಜನರು ಕಾಣೆಯಾಗಿದ್ದಾರೆ. ಈ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್​ ಕಾರಣವಾಗಿತ್ತು. 2013-14 ಸಂದರ್ಭದಲ್ಲಿ ಹಡಗೊಂದರಿಂದ ಸುಮಾರು 2,750 ಟನ್​  ಅಮೋನಿಯಂ ನೈಟ್ರೇಟ್ ವಶಕ್ಕೆ ಪಡೆಯಲಾಗಿತ್ತು. ಅದನ್ನು ಬೈರೂತ್​ ಬಂದರಿನಲ್ಲಿ ಶೇಖರಿಸಿಡಲಾಗಿತ್ತು. ಇದಕ್ಕೆ ಬೆಂಕಿ ತಾಕಿ ಇಡಿ ಬೈರೂತ್​ ನಾಶವಾಗಿತ್ತು.

ಈ ಅವಘಢಕ್ಕೆ ರಾಜಕಾರಣಿಗಳ ನಿರ್ಲಕ್ಷ್ಯ ಮುಖ್ಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಅಲ್ಲಿನ ಜನರು ಬೀದಿಗೆ ಇಳಿದು ದಂಗೆ ನಡೆಸುತ್ತಿದ್ದಾರೆ. ದಂಗೆ ನಿಯಂತ್ರಣ ಮಾಡಲಾಗದೆ ಮಣಿದಿರುವ ಅಲ್ಲಿನ ಪ್ರಧಾನಿ ರಾಜೀನಾಮೆ ನೀಡಿದ್ದಾರೆ.
Youtube Video

ಪ್ರಧಾನಿ ಹಸನ್​ ಸಂಸತ್ ಸಭೆ ಕರೆದಿದ್ದರು. ಈ ವೇಳೆ ಬಹುತೇಕ ಸಂಸತ್​ ಸದಸ್ಯರು ರಾಜೀನಾಮೆ ನೀಡುವ ನಿರ್ಧಾರ ವ್ಯಕ್ತಪಡಿಸಿದ್ದಾರೆ. ಹಸ್ಸನ್​ ಸರ್ಕಾರಕ್ಕೆ ಅತೀ ಭ್ರಷ್ಟ ಸರ್ಕಾರ ಎನ್ನುವ ಹಣೆಪಟ್ಟಿ ಬಿದ್ದಿದೆ. ಅವರು ಅಧಿಕಾರದಿಂದ ಕೆಳಗಿಳಿಯುವಂತೆಯೂ ಆಗ್ರಹ ಕೇಳಿ ಬಂದಿದೆ. ಹೀಗಾಗಿ, ಹಸ್ಸನ್​ ರಾಜೀನಾಮೆ ನೀಡಿದ್ದಾರೆ
Published by: Rajesh Duggumane
First published: August 11, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories