• Home
  • »
  • News
  • »
  • national-international
  • »
  • Property: ಗಂಡನ ಶವ ಮನೆಯಲ್ಲೇ ಬಿಟ್ರು, ಆಫೀಸ್‌ಗೆ ಓಡೋಡಿ ಹೋದ್ರು; ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

Property: ಗಂಡನ ಶವ ಮನೆಯಲ್ಲೇ ಬಿಟ್ರು, ಆಫೀಸ್‌ಗೆ ಓಡೋಡಿ ಹೋದ್ರು; ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

ಗಂಡನ ಆಸ್ತಿಗಾಗಿ ಹೆಂಡತಿಯರ ಕಿತ್ತಾಟ

ಗಂಡನ ಆಸ್ತಿಗಾಗಿ ಹೆಂಡತಿಯರ ಕಿತ್ತಾಟ

ಅಂದಹಾಗೆ ಆತನಿಗೆ ಎರಡೆರಡು ಹೆಂಡತಿಯರು. ಆತ ಸತ್ತಾಗ ಕಣ್ಣೀರು ಹಾಕೋದಕ್ಕೆ ಯಾವೊಬ್ಬ ಹೆಂಡತಿಯೂ ಆತನ ಶವದ ಮುಂದೆ ಇರಲಿಲ್ಲ. ಯಾಕೆಂದ್ರೆ ಇಬ್ಬರು ಹೆಂಡತಿಯರೂ ಸ್ಪರ್ಧೆಗೆ ಬಿದ್ದವರಂತೆ ಓಡುತ್ತಾ, ಓಡುತ್ತಾ ತಹಶೀಲ್ದಾರ್ ಆಫೀಸ್‌ಗೆ ಹೋಗಿದ್ದರು!

  • Share this:

ತಮಿಳುನಾಡು: ಗಂಡ ಹೆಂಡತಿ ಸಂಬಂಧ (Husband Wife Relationship) ಅಂದ್ರೆ ಪವಿತ್ರವಾದುದು. ಗಂಡ ಹೆಂಡತಿ ಅಂದ್ರೆ ಬರೀ ಸುಖಕ್ಕಷ್ಟೇ ಅಲ್ಲ, ದುಃಖದಲ್ಲೂ ಜೊತೆಯಾಗಿರ್ತೀನಿ ಅಂತ ಪ್ರತಿಜ್ಞೆ ಮಾಡಿರುತ್ತಾರೆ. ನನ್ನ ಆಯುಷ್ಯವೆಲ್ಲ ನನ್ನ ಹೆಂಡತಿಗೇ ಇರಲಿ ಅಂತ ಗಂಡ ಬಯಸಿದ್ರೆ, ನಾನು ದೀರ್ಘ ಸುಮಂಗಲಿ ಆಗಿ, ನನ್ನ ಗಂಡ ಆಯುಷ್ಯವಂತನಾಗಿ ಅಂತ ಹೆಂಡತಿಯರು ಬೇಡಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಅಂದಹಾಗೆ ಆತನಿಗೆ ಎರಡೆರಡು ಹೆಂಡತಿಯರು. ಆತ ಸತ್ತಾಗ (Death) ಕಣ್ಣೀರು ಹಾಕೋದಕ್ಕೆ ಯಾವೊಬ್ಬ ಹೆಂಡತಿಯೂ ಆತನ ಶವದ (Dead Body) ಮುಂದೆ ಇರಲಿಲ್ಲ. ಯಾಕೆಂದ್ರೆ ಇಬ್ಬರು ಹೆಂಡತಿಯರೂ ಸ್ಪರ್ಧೆಗೆ ಬಿದ್ದವರಂತೆ ಓಡುತ್ತಾ, ಓಡುತ್ತಾ ತಹಶೀಲ್ದಾರ್ (Tahsildar) ಆಫೀಸ್‌ಗೆ (Office) ಹೋಗಿದ್ದರು. ಅಷ್ಟಕ್ಕೂ ಅಲ್ಲಿ ಏನು ನಡೆಯಿತು? ಏನಿದು ಇಬ್ಬರು ಹೆಂಡಿರ ಮುದ್ದಿನ ಗಂಡನ ಹೆಣಗಾಟದ ಕಥೆ? ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ…


ಇಬ್ಬರು ಹೆಂಡಿರ ಮುದ್ದಿನ ಗಂಡನ ಸಾವು


 ಈ ಕಥೆಯ ದುರಂತ ನಾಯಕನ ಹೆಸರು ನರಸಿಂಹಲು. ಇವರು ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಕೋರುಟ್ಲ ತಾಲೂಕಿನ ಐಲಾಪೂರ್​ ಗ್ರಾಮದ ನಿವಾಸಿ. ಇಬ್ಬರಿಗೆ ಇಬ್ಬರು ಹೆಂಡತಿಯರಿದ್ದು, ಮೊದಲ ಹೆಂಡತಿ ಬದುಕಿದ್ದಾಗಲೇ ಭಾರತೀ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದರು.


ಮೊದಲ ಹೆಂಡತಿ ಹೆಸರಲ್ಲಿ ಆಸ್ತಿ


ನರಸಿಂಹಲು ಅವರು ಗ್ರಾಮದ ಸರಪಂಚ್‌ರಾಗಿದ್ದು, ಸಾಕಷ್ಟು ಅನುಕೂಲಸ್ಥರಾಗಿದ್ದರು. ಹೀಗಾಗಿ ಅವರಿಗೆ ಸಾಕಷ್ಟು ಆಸ್ತಿ, ಮನೆ, ತೋಟ, ಹೊಲ ಎಲ್ಲವೂ ಇತ್ತು. ಅವೆಲ್ಲವನ್ನೂ ಮೊದಲನೆ ಹೆಂಡತಿ ಹೆಸರಿಗೆ ಮಾಡಿದ್ದರು. ಇನ್ನು ಎರಡನೇ ಮದುವೆಯಾದ ವಿಚಾರ ಮೊದಲ ಹೆಂಡತಿಗೂ ಗೊತ್ತಿತ್ತು. ನರಸಿಂಹಲು ಮೊದಲನೇ ಹೆಂಡತಿ ಜೊತೆಯೇ ಇದ್ದರು ಎನ್ನಲಾಗಿದೆ.


ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ


 ಅನಾರೋಗ್ಯದಿಂದ ಮೃತಪಟ್ಟ ನರಸಿಂಹಲು


ನಿನ್ನೆ ನರಸಿಂಹಲು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೊದಲನೇ ಪತ್ನಿ ಹಾಗೂ ಮನೆಯವರು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಈ ವೇಳೆ ವಿಚಾರ ತಿಳಿದ ಅವರ ಎರಡನೇ ಹೆಂಡತಿ ದೌಡಾಯಿಸಿ ಬಂದಿದ್ದಾಳೆ. ಯಾವುದೇ ಕಾರಣಕ್ಕೂ ನನ್ನ ಗಂಡನ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾಳೆ.


ಆಸ್ತಿಗಾಗಿ ಇಬ್ಬರು ಪತ್ನಿಯರ ಕಿತ್ತಾಟ


ನರಸಿಂಹಲು ಅವರು ತಮ್ಮ ಮೊದಲ ಪತ್ನಿಗೆ ಆಸ್ತಿ ನೀಡಿದ್ದ ವಿಚಾರ ತಿಳಿದಿದ್ದ 2ನೇ ಪತ್ನಿ ಭಾರತಿ, ತನಗೂ ಅದರಲ್ಲಿ ಪಾಲು ಬೇಕೆಂದು ಪಟ್ಟು ಹಿಡಿದಿದ್ದಾಳೆ. ಕೊನೆಗೆ ಹಿರಿಯರೆಲ್ಲ ಮುಂದಾಗಿ ಮಾತುಕತೆ ನಡೆಸಿ, 3 ಎಕರೆ ಭೂಮಿ ಅವಳ ಹೆಸರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.


ಗಂಡನ ಶವ ಮನೆಯಲ್ಲೇ ಬಿಟ್ಟು ಆಸ್ತಿ ಹಂಚಿಕೆಗೆ ಹೋದ ಪತ್ನಿಯರು


ಬಳಿಕ ಈಗಲೇ ಆಸ್ತಿ ತನ್ನ ಹೆಸರಿಗೆ ಮಾಡಿಸಿಕೊಡುವಂತೆ ಭಾರತಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅನ್ಯದಾರಿ ಕಾಣದೇ ಮೊದಲ ಪತ್ನಿಯು 2ನೇ ಪತ್ನಿ ಭಾರತಿಯನ್ನು ಕರೆದುಕೊಂಡು  ಕತ್ತಲಾಪುರ  ತಹಶೀಲ್ದಾರ್ ಕಚೇರಿಗೆ ತೆರಳಿದ್ದಾಳೆ. ಕೊಟ್ಟ ಮಾತಿನಂತೆ 3 ಎಕರೆ ಭೂಮಿ ಅವಳ ಹೆಸರಿಗೆ ವರ್ಗಾಯಿಸಿದ್ದಾಳೆ.


ಇದನ್ನೂ ಓದಿ: Viral Video: ಮೊಸಳೆ ಜೊತೆ ಮೇಯರ್ ಮದುವೆ! ಅದ್ಧೂರಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಜನ


 ಆಸ್ತಿ ವರ್ಗಾವಣೆ ಬಳಿಕ ಪತಿಯ ಅಂತ್ಯಕ್ರಿಯೆ


ಆಸ್ತಿ ವರ್ಗಾವಣೆ ಆದ ಬಳಿಕ ಇಬ್ಬರು ಪತ್ನಿಯರು ಮರಳಿ ಮನೆಗೆ ಬಂದಿದ್ದಾರೆ. ಇಬ್ಬರೂ ಅಳುತ್ತಾ ಗಂಡನ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ಸವತಿಯರ ಜಗಳ ನೋಡಿ ಗ್ರಾಮಸ್ಥರೆಲ್ಲ ದಂಗಾಗಿದ್ದಾರೆ.

Published by:Annappa Achari
First published: