CBSE 10th ಮತ್ತು 12th ತರಗತಿ Terms Examಗಳ ಫಲಿತಾಂಶದ ಬಗ್ಗೆ ಇನ್ನಷ್ಟು ವಿವರ ತಿಳಿಯಿರಿ

ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯ ಆತಂಕಕ್ಕಿಂತಲೂ, ಅದರ ಫಲಿತಾಂಶದ ಬಗ್ಗೆ ತಿಳಿದುಕೊಳ್ಳುವಾಗ ಇರುವ ಆತಂಕ ತುಂಬಾನೇ ಜಾಸ್ತಿ ಇರುತ್ತದೆ. ಈ ಫಲಿತಾಂಶಗಳನ್ನು ಯಾವ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಅವರ ಅಂಕಪಟ್ಟಿಯನ್ನು ಎಲ್ಲಿ ಮತ್ತು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿದ್ಯಾರ್ಥಿಗಳಲ್ಲಿ (Students) ಅದರಲ್ಲೂ 10 ಮತ್ತು 12ನೇಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯ (Exam) ಆತಂಕಕ್ಕಿಂತಲೂ, ಅದರ ಫಲಿತಾಂಶದ (Result) ಬಗ್ಗೆ ತಿಳಿದುಕೊಳ್ಳುವಾಗ ಇರುವ ಆತಂಕ ತುಂಬಾನೇ ಜಾಸ್ತಿ ಇರುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (Central Board of Secondary Education) ಅಥವಾ ಸಿಬಿಎಸ್‌ಇ (CBSE) ತರಗತಿಗಳಲ್ಲಿ (Class) 10 ಮತ್ತು 12ನೇಯ ತರಗತಿಗಳ ಟರ್ಮ್ (Term) ಒಂದರ ಪರೀಕ್ಷೆಗಳನ್ನು ಈ ಹಿಂದೆ ಬರೆದಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಈ ವಾರದೊಳಗೆ ಬರಲಿದೆ ಫಲಿತಾಂಶ

ಸಿಬಿಎಸ್ಇ ಯ 10 ಮತ್ತು 12 ತರಗತಿಗಳ ಟರ್ಮ್ ಒಂದರ ಪರೀಕ್ಷೆಯ ಫಲಿತಾಂಶಗಳನ್ನು ಈ ವಾರದೊಳಗೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಈ ಹಿಂದೆ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದರು. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಫೆಬ್ರವರಿ 20 ರಂದು ಎಂದರೆ ಭಾನುವಾರದಂದು ಘೋಷಿಸುತ್ತಾರೆ ಎಂದು ನಿರೀಕ್ಷಿಸಿದ್ದರು.

ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಕ್ರಮ

ಈ ಫಲಿತಾಂಶಗಳನ್ನು ಯಾವ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಅವರ ಅಂಕಪಟ್ಟಿಯನ್ನು ಎಲ್ಲಿ ಮತ್ತು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ. ಅವರ ಈ ಅನೇಕ ರೀತಿಯ ಗೊಂದಲಗಳನ್ನು ಬಗೆ ಹರಿಸಲು ಇಲ್ಲಿ ಕೆಲವು ಹಂತಗಳನ್ನು ಅನುಸರಿಸಲು ತಿಳಿಸಲಾಗಿದೆ.

ಇದನ್ನೂ ಓದಿ: CBSE 10 ಮತ್ತು 12 ನೇ ತರಗತಿಗಳ ಪ್ರಾಯೋಗಿಕ ಪರೀಕ್ಷೆಗಳ ವೇಳಾಪಟ್ಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ

ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ

ಒಮ್ಮೆ ಈ ಫಲಿತಾಂಶ ಬಿಡುಗಡೆಯಾದ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಗಳಲ್ಲಿ ಸಿಬಿಎಸ್‌ಇ ಯ 10 ಮತ್ತು 12ನೇಯ ತರಗತಿಗಳ ಒಂದನೇ ಟರ್ಮ್ ನ ಪರೀಕ್ಷೆಗಳ ಫಲಿತಾಂಶಗಳನ್ನು ಪಡೆಯಬಹುದು. ಇದನ್ನು cbse.gov.in, cbseresults.nic.in

ಬೋರ್ಡ್ ನ ವೆಬ್‌ಸೈಟ್ ಗಳನ್ನು ಹೊರತುಪಡಿಸಿ, 10 ಮತ್ತು 12 ನೇ ತರಗತಿಯ ಟರ್ಮ್ ಒಂದರ ಫಲಿತಾಂಶಗಳನ್ನು ಪರಿಶೀಲಿಸಲು ಇತರ ಅಧಿಕೃತ ವಿಧಾನಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ digilocker.gov.in ಅನ್ನು ಸಹ ಒಳಗೊಂಡಿವೆ.

ಏತನ್ಮಧ್ಯೆ, ಸಿಬಿಎಸ್ಇ ಟರ್ಮ್ ಎರಡರ ಪರೀಕ್ಷೆಗಳು ಏಪ್ರಿಲ್ 26 ರಿಂದ ಆಫ್‌ಲೈನ್ ನಲ್ಲಿ ನಡೆಯಲಿವೆ. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವ್ಯಕ್ತಿನಿಷ್ಠ ರೀತಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಫಲಿತಾಂಶಗಳನ್ನು ಡಿಜಿಲಾಕರ್ ಮೂಲಕ ಡೌನ್‌ಲೋಡ್

ಈ ಫಲಿತಾಂಶದ ಅಂಕಪಟ್ಟಿಗಳು ಮತ್ತು ಫಲಿತಾಂಶಗಳಿಗಾಗಿ ಡಿಜಿಲಾಕರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಅನ್ನು ಬಳಸಲು, ವಿದ್ಯಾರ್ಥಿಗಳು ಮೊದಲು ಹೆಸರುಗಳು ಮತ್ತು ಅವರ ಜನ್ಮ ದಿನಾಂಕ ಸೇರಿದಂತೆ ಮಾಹಿತಿಯನ್ನು ಒದಗಿಸುವ ಮೂಲಕ ಆನ್‌ಲೈನ್ ಪ್ಲಾಟ್‌ಫಾರ್ಮ್ ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಆದಾಗ್ಯೂ, ಸಿಬಿಎಸ್ಇ ಟರ್ಮ್ ಒಂದರ ಫಲಿತಾಂಶಗಳನ್ನು ಪರಿಶೀಲಿಸಲು, ಅವರು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.

ಟರ್ಮ್ ಒಂದರ ಅಂತಿಮ ಅಂಕಪಟ್ಟಿ ಸಿಗುವುದು ಯಾವಾಗ?

ವಿದ್ಯಾರ್ಥಿಗಳು ಈ ಬಾರಿ ತಮ್ಮ ಅಂಕಪಟ್ಟಿಗಳನ್ನು ಸ್ವೀಕರಿಸುವುದಿಲ್ಲ, ಆದಾಗ್ಯೂ, ಅವರು ಎರಡನೇ ಟರ್ಮ್ ಪರೀಕ್ಷೆಯ ನಂತರ ತಮ್ಮ ಅಂತಿಮ ಅಂಕಪಟ್ಟಿಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: Education: ಕಂಪ್ಯೂಟರ್ ಸೈನ್ಸ್‌ ಪದವಿ ಇಲ್ಲದೆ ಸ್ನಾತಕೋತ್ತರ ಪದವಿ ಪಡೆಯಬಹುದೇ..? ಇಲ್ಲಿದೆ ಉತ್ತರ

ಸಿಬಿಎಸ್ಇ ಟರ್ಮ್ ಒಂದರ ಪ್ರಶ್ನೆ ಪತ್ರಿಕೆ ಮಾದರಿ ಏನಾಗಿರುತ್ತದೆ

ಸಿಬಿಎಸ್ಇ ಪರೀಕ್ಷೆಗಳ ಟರ್ಮ್ ಒಂದರ ಪ್ರಶ್ನೆ ಪತ್ರಿಕೆಗಳು ಪ್ರತಿಪಾದನೆ, ತಾರ್ಕಿಕ ಪ್ರಕಾರದ ಮೇಲೆ ಪ್ರಕರಣ ಆಧಾರಿತ ಬಹು-ಆಯ್ಕೆ ಪ್ರಶ್ನೆಗಳನ್ನು ಎಂದರೆ ಎಂಸಿಕ್ಯೂ ಪ್ರಶ್ನೆಗಳನ್ನು ಹೊಂದಿದ್ದವು ಮತ್ತು ತರ್ಕಬದ್ಧ ಪಠ್ಯಕ್ರಮದ ಶೇಕಡಾ 50 ರಷ್ಟು ಭಾಗದ ಪರೀಕ್ಷೆಯೂ 90 ನಿಮಿಷಗಳ ಅವಧಿಗೆ ನಡೆದವು ಎಂದು ಹೇಳಬಹುದು.

ಸಿಬಿಎಸ್ಇ ಪರೀಕ್ಷೆಯ ಒಂದನೇ ಟರ್ಮ್ ನ ಫಲಿತಾಂಶಗಳನ್ನು ಯಾವಾಗ ಪ್ರಕಟಿಸಲಾಗುವುದು ಎಂಬುದರ ಬಗ್ಗೆ ಯಾವುದೇ ಅಧಿಕೃತ ಮತ್ತು ನಿಖರವಾಗಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
Published by:Annappa Achari
First published: