ದೆಹಲಿ ತೀಸ್ ಹಜಾರಿ ಕೋರ್ಟ್​ ಪ್ರಕರಣ: ಪೊಲೀಸರ ವಿರುದ್ಧ ಬೀದಿಗಿಳಿದ ವಕೀಲರು: ನಾಳೆ ಮುಷ್ಕರಕ್ಕೆ ಕರೆ

ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ಮನ್ ಮನನ್ ಮಿಶ್ರಾ ನ. 2ರಂದು ಕೋರ್ಟ್​ ಆವರಣದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರ ವಿರುದ್ಧ ದೂರು ನೀಡಿದ್ದರು. ಆ ದೂರಿನ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಎರಡೂ ಕಡೆಯವರ ತಪ್ಪಿದೆ ಎಂದು ಘೋಷಿಸಿತ್ತು.

news18-kannada
Updated:November 15, 2019, 9:22 PM IST
ದೆಹಲಿ ತೀಸ್ ಹಜಾರಿ ಕೋರ್ಟ್​ ಪ್ರಕರಣ: ಪೊಲೀಸರ ವಿರುದ್ಧ ಬೀದಿಗಿಳಿದ ವಕೀಲರು: ನಾಳೆ ಮುಷ್ಕರಕ್ಕೆ ಕರೆ
ಪೊಲೀಸರ ವಿರುದ್ಧ ಬೀದಿಗಿಳಿದ ವಕೀಲರು
  • Share this:
ನವದೆಹಲಿ(ನ.15): ದೆಹಲಿ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ಪ್ರತಿಭಟನೆ ಬೆನ್ನಲ್ಲೀಗ ಬರೋಬ್ಬರಿ ಎರಡು ವಾರಗಳ ಬಳಿಕ ವಕೀಲರು ತಮ್ಮ ಕೆಲಸ ನಿಲ್ಲಿಸಿ ನಾಳೆ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಶನಿವಾರ ತಮ್ಮ ಕೋರ್ಟ್​​ ಮತ್ತು ಕಚೇರಿ ಕೆಲಸ ಬಂದ್​​ ಮಾಡಿ ಪೊಲೀಸರ ವಿರುದ್ಧ ವಕೀಲರು ಮುಷ್ಕರ ಹೂಡಲಿದ್ದಾರೆ.

ಈ ಹಿಂದೆ ದೆಹಲಿ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು-ವಕೀಲರ ನಡುವೆ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯಲ್ಲಿ ಓರ್ವ ಲಾಯರ್​​ ತೀವ್ರವಾಗಿ ಗಾಯಗೊಂಡಿದ್ದರು. ನ್ಯಾಯಲಯದ ಆವರಣದಲ್ಲಿ ಪಾರ್ಕಿಂಗ್​​ ವಿಚಾರವಾಗಿ ಪೊಲೀಸ್​​ ಮತ್ತು ವಕೀಲರ ನಡುವೆ ಈ ಘರ್ಷಣೆ ನಡೆದಿದ್ದು, ಫೈರಿಂಗ್​​ ಮಾಡಲಾಗಿತ್ತು. ಪೊಲೀಸರ ಗುಂಡೇಟಿಗೆ ಲಾಯರ್​​ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು.

ಕೋರ್ಟ್​ ಆವರಣದೊಳಗೆ ಆಗಮಿಸುವಾಗ ಪೊಲೀಸರ ವಾಹನ ಲಾಯರ್​​ಗೆ ಗುದ್ದಿತು. ಈ ವೇಳೆ ಪೊಲೀಸರ ವಿರುದ್ಧ ಲಾಯರ್​​ ಕಿರುಚಾಡಿದರು. ಆಗ ಪೊಲೀಸರು ಲಾಯರ್​ ಅವರನ್ನು ವಾಹನದೊಳಗೆ ಹಾಕಿ ಹಿಗ್ಗಾಮುಗ್ಗಾ ಥಳಿಸಿದರು. ಒಟ್ಟು ಆರು ಮಂದಿ ಪೊಲೀಸರು ಲಾಯರ್​​ಗೆ ಮನಬಂದತೆ ಥಳಿಸಿದರು ಎಂದಿದ್ದರು ತೀಸ್​ ಹಜಾರಿ ಅಸೊಸಿಯೇಷನ್​​​​ ಪದಾಧಿಕಾರಿ ಜೈ ಬಿಸ್ವಾಲ್​​.

ಇದನ್ನೂ ಓದಿ: ಗ್ರಾಹಕರು ಮಾಡುವ ಖರ್ಚು ಕುರಿತಾದ ಸರ್ವೇ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ವಕೀಲರು ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಪೊಲೀಸರ ವಾಹನಗಳು ಸುಟ್ಟು ಕರಕಲಾಗಿದ್ದವು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನ್ಯಾಯಲಯದ ಆವರಣದಲ್ಲಿ ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದರು. ಈ ಮಧ್ಯೆ ವಕೀಲರು ಮತ್ತು ಪೊಲೀಸರ ನಡುವಿನ ಗಲಭೆಯ ಕುರಿತು ಮೊದಲ ಬಾರಿಗೆ ಸುಪ್ರೀಂಕೋರ್ಟ್​ ಪ್ರತಿಕ್ರಿಯೆ ನೀಡಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮತ್ತು ವಕೀಲರು ಎರಡೂ ಕಡೆಯವರ ತಪ್ಪಿದೆ. ಯಾಕೆಂದರೆ ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ಇದನ್ನೂ ಓದಿ: CBI Raids: ಅಮ್ನೆಸ್ಟಿ ಸಂಸ್ಥೆ ಮೇಲೆ ಸಿಬಿಐ ದಾಳಿ: ತನಿಖೆ ಮುಂದುವರಿಸಿದ ಅಧಿಕಾರಿಗಳು

ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ಮನ್ ಮನನ್ ಮಿಶ್ರಾ ನ. 2ರಂದು ಕೋರ್ಟ್​ ಆವರಣದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರ ವಿರುದ್ಧ ದೂರು ನೀಡಿದ್ದರು. ಆ ದೂರಿನ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಎರಡೂ ಕಡೆಯವರ ತಪ್ಪಿದೆ ಎಂದು ಘೋಷಿಸಿದೆ.-----------
First published: November 15, 2019, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading