ನವ ದೆಹಲಿ (ಮೇ 07); ಭಾರತೀಯ ಚುನಾವಣಾ ಆಯೋಗದ ವಿರುದ್ಧ ಇತ್ತೀಚೆಗೆ ಸಾಕಷ್ಟು ಆರೋಪಗಳು ಮತ್ತು ಅಪಸ್ವರಗಳು ಕೇಳಿ ಬರುತ್ತಲೇ ಇದೆ. ಭಾಗಶಃ ಚುನಾವಣಾ ಆಯೋಗ ಕಳೆದ 7 ದಶಕಗಳಲ್ಲಿ ಇಷ್ಟ ಮಟ್ಟಿಗೆ ಆಗಾಗ್ಗೆ ಸುದ್ದಿಯಾಗುತ್ತಿರುವುದು ಇದೇ ಮೊದಲು. ಚುನಾವಣಾ ಆಯೋಗ ಬಿಜೆಪಿ ಸಹಕರಿಸುತ್ತಿದೆ ಎಂಬುದು ಹಲವು ವಿರೋಧ ಪಕ್ಷಗಳ ಒಕ್ಕೊರಲ ಆರೋಪ. ಈ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುತ್ತಿರುವ ವಕೀಲರೊಬ್ಬರು, ಆಯೋಗದ ವಕೀಲರ ಸಮಿತಿಗೆ ರಾಜೀನಾಮೆ ನೀಡಿದ್ದು, ತನ್ನ ಮೌಲ್ಯಗಳು ಚುನಾವಣಾ ಆಯೋಗದ ಪ್ರಸ್ತುತ ಕಾರ್ಯನಿರ್ವಹಣೆಗೆ ಸರಿ ಹೊಂದುತ್ತಿಲ್ಲ ಎಂದು ಹೇಳಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಮೋಹಿತ್ ಡಿ ರಾಮ್ ರಾಜೀನಾಮೆ ನೀಡಿದ ವಕೀಲರಾಗಿದ್ದು, ಇವರು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗಕ್ಕೆ 2013 ರಿಂದ ಪ್ಯಾನಲ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಇತ್ತೀಚೆಗೆ ಚುನಾವಣಾ ಆಯೋಗದ ಮೌಲ್ಯ ಕುಸಿದಿದೆ ಎಂಬ ಕಾರಣಕ್ಕೆ ಮೋಹಿತ್ ಡಿ ರಾಮ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಮೋದಿ ಮನ್ ಕಿ ಬಾತ್ ಭಾಷಣ ಮಾಡುವ ಬದಲು ತುಸು ನಮ್ಮ ಮಾತನ್ನೂ ಆಲಿಸಲಿ: ಜಾರ್ಖಂಡ್ ಸಿಎಂ ಆಕ್ರೋಶ
ಈ ಬಗ್ಗೆ ಮಾತನಾಡಿರುವ ಮೋಹಿತ್, "ನನ್ನ ಮೌಲ್ಯಗಳು ಚುಣಾವಣಾ ಆಯೋಗದ ಪ್ರಸ್ತುತ ಕಾರ್ಯನಿರ್ವಹಣೆಗೆ ಸರಿ ಹೊಂದುತ್ತಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದ್ದರಿಂದ ನಾನು ಸುಪ್ರೀಂ ಕೋರ್ಟ್ ಮುಂದೆ ಆಯೋಗದ ಪ್ಯಾನೆಲ್ ಸಲಹೆಗಾರನ ಜವಾಬ್ದಾರಿಗಳಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ