ಬೆಚ್ಚಿಬಿದ್ದ ರಾಂಚಿ; ಸಿಎಂ ಮನೆ ಬಳಿಯೇ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, 12 ಯುವಕರ ಬಂಧನ

ಯುವತಿ ಓದುತ್ತಿರುವ ಕಾಲೇಜಿನಿಂದ 4 ಕಿ.ಮೀ. ಹಾಗೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಕೇವಲ 10 ಕಿ.ಮೀ. ದೂರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಲ್ಲದೆ, ಈ ಘಟನೆ ನಡೆದ ಸ್ಥಳದ ಸುತ್ತಮುತ್ತ ಡಿಜಿಪಿ, ಜಾರ್ಖಂಡ್ ಮುಖ್ಯ ನ್ಯಾಯಮೂರ್ತಿ, ವಿರೋಧಪಕ್ಷದ ನಾಯಕರು ಮುಂತಾದ ಅನೇಕ ವಿವಿಐಪಿಗಳ ಮನೆಗಳಿವೆ.

Sushma Chakre | news18-kannada
Updated:November 29, 2019, 11:53 AM IST
ಬೆಚ್ಚಿಬಿದ್ದ ರಾಂಚಿ; ಸಿಎಂ ಮನೆ ಬಳಿಯೇ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, 12 ಯುವಕರ ಬಂಧನ
ಸಾಂದರ್ಭಿಕ ಚಿತ್ರ
  • Share this:
ರಾಂಚಿ (ನ. 29): ಹೈದರಾಬಾದ್​ನಲ್ಲಿ ರಾತ್ರಿ ಕೆಲಸ ಮುಗಿಸಿ ಬರುವಾಗ ಸ್ಕೂಟಿ ಕೆಟ್ಟು ನಿಂತಿದ್ದರಿಂದ ಅಸಹಾಯಕ ಪರಿಸ್ಥಿತಿಯಲ್ಲಿದ್ದ 27ವರ್ಷದ ಪಶು ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ರಸ್ತೆ ಬದಿಯಲ್ಲೇ ಸುಟ್ಟು ಹಾಕಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ರಾಂಚಿಯಲ್ಲಿ 25 ವರ್ಷದ ಕಾನೂನು ವಿದ್ಯಾರ್ಥಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ರಾಂಚಿಯ ವಿಶೇಷ ಭದ್ರತೆ ಇರುವ ವಿಐಪಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಕಾನೂನು ವಿದ್ಯಾರ್ಥಿನಿ ಹಣೆಗೆ ಗನ್ ಇಟ್ಟು 12 ಜನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ. ಈ ಬಗ್ಗೆ ಕಣ್ಕೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ನವೆಂಬರ್ 26ರ ಸಂಜೆ 5.30ಕ್ಕೆ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ.

ರಾಂಚಿಯ ಹೊರವಲಯದಲ್ಲಿರುವ ಸಂಗ್ರಾಮಪುರ ಏರಿಯಾಗೆ ಕಾನೂನು ವಿದ್ಯಾರ್ಥಿನಿ  ತನ್ನ ಸ್ನೇಹಿತನೊಂದಿಗೆ ಹೋಗಿದ್ದಳು. ಆಗ 2 ಬೈಕ್​ಗಳಲ್ಲಿ ಅಲ್ಲಿಗೆ ಬಂದ ಯುವಕರು ಆಕೆಯನ್ನು ಅಪಹರಿಸಿ, ಹಣೆಗೆ ಗನ್​ ಪಾಯಿಂಟ್ ಇಟ್ಟು ಅತ್ಯಾಚಾರ ನಡೆಸಿದ್ದಾರೆ. ಆ ಯುವತಿ ಓದುತ್ತಿರುವ ಕಾಲೇಜಿನಿಂದ 4 ಕಿ.ಮೀ. ದೂರದಲ್ಲಿ ಹಾಗೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಕೇವಲ 10 ಕಿ.ಮೀ. ದೂರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಲ್ಲದೆ, ಈ ಘಟನೆ ನಡೆದ ಸ್ಥಳದ ಸುತ್ತಮುತ್ತ ಡಿಜಿಪಿ, ಜಾರ್ಖಂಡ್ ಮುಖ್ಯ ನ್ಯಾಯಮೂರ್ತಿ, ವಿರೋಧಪಕ್ಷದ ನಾಯಕರು ಮುಂತಾದ ಅನೇಕ ವಿವಿಐಪಿಗಳ ಮನೆಗಳಿವೆ. ಹೀಗಾಗಿ, ಈ ಪ್ರದೇಶದ ಸುತ್ತಮುತ್ತ ವಿಶೇಷ ಪೊಲೀಸ್ ಭದ್ರತೆ ಇರುತ್ತದೆ.

ಸೀರಿಯಲ್ ನಟಿಯರ ಮೂಲಕ 10 ರಾಜಕಾರಣಿಗಳ ಹನಿಟ್ರ್ಯಾಪ್; ಈ ಜಾಲಕ್ಕೆ ಸಿಲುಕಿದ್ದಾರೆ ಇಬ್ಬರು ಅನರ್ಹ ಶಾಸಕರು!

ಅಷ್ಟೆಲ್ಲ ಭದ್ರತೆಗಳು, ಸಿಸಿಟಿವಿ ಕಣ್ಗಾವಲಿದ್ದರೂ 12 ಜನ ಸೇರಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಬೈಕ್​ನಲ್ಲಿಯೇ ಯುವತಿಯನ್ನು ಅಪಹರಿಸಿಕೊಂಡು ಹೋಗುವಾಗ ಮಧ್ಯದಲ್ಲೇ ಪೆಟ್ರೋಲ್ ಖಾಲಿಯಾಗಿದೆ. ಹೀಗಾಗಿ, ತಮ್ಮ ಗೆಳೆಯರಿಗೆ ಕಾರು ತೆಗೆದುಕೊಂಡು ಬರುವಂತೆ ಅವರು ಫೋನ್ ಮಾಡಿದ್ದಾರೆ. ಕಾರಿನಲ್ಲಿ ಬಂದ ಯುವಕರೂ ಸೇರಿದಂತೆ ಒಟ್ಟು 12 ಜನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಮಾರನೇ ದಿನ ಪೊಲೀಸ್ ಠಾಣೆಗೆ ಹೋದ ಸಂತ್ರಸ್ತ ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ನೀಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಯುವಕರನ್ನು ಬಂಧಿಸಿದ್ದಾರೆ. ಒಂದು ಕಾರು, ಒಂದು ಪಿಸ್ತೂಲ್, 8 ಮೊಬೈಲ್ ಫೋನ್​ಗಳನ್ನು ಸೀಜ್ ಮಾಡಲಾಗಿದೆ.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ