2022ರಲ್ಲಿ ಮಕ್ಕಳಿಗೆ ಸಿಗಲಿದೆ Covovax ಲಸಿಕೆ, ಅಕ್ಟೋಬರ್​ನಿಂದ ವಯಸ್ಕರಿಗೆ ಲಭ್ಯ; ಅದಾರ್​ ಪೂನವಾಲಾ

ಇದೇ ವೇಳೆ ಪೂನವಾಲಾ ಸರ್ಕಾರದ ಬೆಂಬಲಕ್ಕೆ ಧನ್ಯವಾದ ತಿಳಿಸಿದರು. ಕಳೆದ ಆರ್ಥಿಕ ಬಿಕಟ್ಟಿನ ಸಮಯದಲ್ಲಿ ಕಚ್ಚಾವಸ್ತುಗಳನ್ನು ಸಂಗ್ರಹಿಸಲು ಎದುರಾಗಿದ್ದ ಸವಾಲ್​ ಈ ಬಾರಿ ಇರುವುದಿಲ್ಲ

 ಅದಾರ್​ ಪೂನವಾಲಾ

ಅದಾರ್​ ಪೂನವಾಲಾ

 • Share this:
  ಕೋವಿಡ್​ ಸೋಂಕಿನ ವಿರುದ್ಧ ಕೊವಾವಾಕ್ಸ್​ ಲಸಿಕೆ (Covovax vaccine ) ಯನ್ನು ಈ ವರ್ಷದಲ್ಲಿ ಆರಂಭಿಸಲಾಗುವುದು ಎಂದು ಸೆರಂ ಸಂಸ್ಥೆ ಸಿಇಒ ಅದಾರ್​ ಪೂನವಾಲಾ (Adar Poonawalla)  ಭರವಸೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಡಿಸಿಜಿಐ ಅನುಮೋದನೆಗೆ ಕೊವಾವಾಕ್ಸ್​ (Covovax) ಅನುಮೋದಿಸಿದ್ದು, ಅಕ್ಟೋಬರ್​ನಲ್ಲಿ ವಯಸ್ಕರಿಗೆ 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಕೆ ಲಸಿಕೆ ಬರಲಿದೆ ಎಂದಿದ್ದಾರೆ. 12 ವರ್ಷಕ್ಕಿಂತ ಮೇಲ್ಪಟ ಮಕ್ಕಳಿಗೆ ಅಕ್ಟೋಬರ್​ ವೇಳೆಗೆ ಲಸಿಕೆ ನೀಡಲಾಗುವುದು. 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮುಂದಿನ ವರ್ಷದ ಆರಂಭಿಕ ತಿಂಗಳಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ಬಿಡುಗಡೆ ಸಮಯದ ವೇಳೆ ಇದರ ದರದ ಕುರಿತು ತಿಳಿಸಲಾಗುವುದು ಎಂದಿದ್ದಾರೆ.

  ಇದೇ ವೇಳೆ ಪೂನವಾಲಾ ಸರ್ಕಾರದ ಬೆಂಬಲಕ್ಕೆ ಧನ್ಯವಾದ ತಿಳಿಸಿದರು. ಕಳೆದ ಆರ್ಥಿಕ ಬಿಕಟ್ಟಿನ ಸಮಯದಲ್ಲಿ ಕಚ್ಚಾವಸ್ತುಗಳನ್ನು ಸಂಗ್ರಹಿಸಲು ಎದುರಾಗಿದ್ದ ಸವಾಲ್​ ಈ ಬಾರಿ ಇರುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.

  ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ಬಳಿಕ ಮಾತನಾಡಿದ ಅವರು, ಸರ್ಕಾರ ನಮಗೆ ಸದಾ ಸಹಾಯ ಮಾಡುತ್ತಿದೆ. ಇದಕ್ಕಾಗಿ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ನಾವು ಧನ್ಯವಾದ ತಿಳಿಸಬೇಕು ಎಂದರು.

  ಇದೇ ವೇಳೆ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಅವರನ್ನು ಕೂಡ ಭೇಟಿಯಾಗಿ ಕೋವಿಶೀಲ್ಡ್​​ ಲಸಿಕೆ ಪೂರೈಕೆ ಕುರಿತು ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಲಸಿಕೆ ಉತ್ಪಾದನೆ ಕುರಿತು ಚರ್ಚೆ ನಡೆಸಲಾಯಿತು. ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಯುರೋಪಿನ 17 ಕ್ಕೂ ಹೆಚ್ಚು ದೇಶಗಳು ಅನುಮತಿಸಿವೆ. ಮತ್ತಷ್ಟು ದೇಶಗಳು ಕೂಡ ಲಸಿಕೆಗೆ ಅನುಮೋದನೆ ನೀಡಲು ಕಾಯುತ್ತಿವೆ. ಇದು ವಿದೇಶಿ ಪ್ರಯಾಣ ನಡೆಸುವ ಪ್ರಯಾಣಿಕರಿಗೆ ಸಹಾಯವಾಗಲಿದೆ. ಜೊತೆಗೆ ವಿದ್ಯಾರ್ಥಿಗಳಿಗೂ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿಸಿದರು

  ಸರ್ಕಾರದ ಮಾಹಿತಿಯಂತೆ ಆಗಸ್ಟ್​ನಲ್ಲಿ ಕೋವಾಕ್ಸಿನ್ (Covaxin)​ 2. 65 ಮತ್ತು ಕೋವಿಶೀಲ್ಡ್ (Covishield)​ 23 ಕೋಟಿ ಲಸಿಕೆ ಉತ್ಪಾದಿಸಬೇಕಿದೆ. ಸೆಪ್ಟೆಂಬರ್​ನಲ್ಲಿ ಕೋವಾಕ್ಸಿನ್​ 3. 15 ಮತ್ತು ಕೋವಿಶೀಲ್ಡ್​​ 23 ಕೋಟಿ ಉತ್ಪಾದಿಸಬೇಕಿದೆ. ಅಕ್ಟೋಬರ್​ನಲ್ಲಿ ಎರಡು ಲಸಿಕೆ ಸೇರಿ ಒಟ್ಟು 28.25 ಡೋಸ್​ ಲಸಿಕೆ ಉತ್ಪಾದಿಸಲಾಗುವುದು

  ಇದನ್ನು ಓದಿ: ರಾಜಧಾನಿಯಲ್ಲಿ ಆತಂಕ ಮೂಡಿಸುತ್ತಿದೆ ಡೆಲ್ಟಾ ಪ್ಲಸ್

  ಈ ನಡುವೆ ನೋವಾವ್ಯಾಕ್ಸ್‌ (Novavax) ತನ್ನ ಲಸಿಕೆಗೆ ಅನುಮತಿ ನೀಡಲು ಭಾರತೀಯ ನಿಯಂತ್ರಕರಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ . ಯುಎಸ್ ಮೂಲದ ನೊವಾವಾಕ್ಸ್ ಮೂರು ದೇಶಗಳಲ್ಲಿ ಅರ್ಜಿ ಸಲ್ಲಿಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಪಾಲುದಾರಿಕೆ ಹೊಂದಿದೆ ಮತ್ತು ಈ ತಿಂಗಳಾಂತ್ಯದಲ್ಲಿ ಕೋವ್ಯಾಕ್ಸ್ ಜಾಗತಿಕ ಲಸಿಕೆ ಕಾರ್ಯಕ್ರಮದ ಭಾಗವಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಿಮರ್ಶೆ ಪಡೆಯಲು ಯೋಜಿಸಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತುರ್ತು ಅಗತ್ಯವಿರುವ ದೇಶಗಳಿಗೆ ಲಕ್ಷಾಂತರ ಡೋಸ್ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯ ಪ್ರವೇಶದ ಪ್ರಮುಖ ಹೆಜ್ಜೆ ಎಂದು ನೋವಾವ್ಯಾಕ್ಸ್ ಸಿಇಒ ಸ್ಟಾನ್ಲಿ ಎರ್ಕ್ ಭಾರತ ಸೇರಿ ಮೂರು ದೇಶಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: