ಕಳೆದ 5 ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!: ಬೆಳ್ಳಿ ಬೆಲೆಯಲ್ಲೂ 620 ರೂ ಕುಸಿತ!


Updated:July 18, 2018, 4:09 PM IST
ಕಳೆದ 5 ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!: ಬೆಳ್ಳಿ ಬೆಲೆಯಲ್ಲೂ 620 ರೂ ಕುಸಿತ!

Updated: July 18, 2018, 4:09 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಜು.18): ಬುಧವಾರದಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಚಿನ್ನದ ಬೆಲೆ ಕಡಿಮೆಯಾಗಲು ಅಂತರಾಷ್ಟ್ರೀಯ ಮಟ್ಟದಲ್ಲಾದ ಬೆಲೆ ಕುಸಿತ ಮುಖ್ಯ ಕಾರಣವೆನ್ನಲಾಗಿದೆ. ಅಲ್ಲದೇ ಸ್ಥಳೀಯ ಚಿನ್ನದ ವ್ಯಾಪಾರಿಗಳಿಂದ ಬೇಡಿಕೆ ಕುಸಿದಿರುವುದು ಮತ್ತೊಂದು ಕಾರಣವೆನ್ನಲಾಗುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆಯು ಬುಧವಾರದಂದು ಪ್ರತಿ ಗ್ರಾಂಗೆ 250 ಗ್ರಾಂ ಕುಸಿತ ಕಂಡಿದೆ. ಈ ಮೂಲಕ ಕಳೆದ 5 ತಿಂಗಳಲ್ಲಿ ಚಿನ್ನದ ಮೌಲ್ಯವು ಅತ್ಯಂತ ಕೆಳ ಮಟ್ಟ ತಲುಪಿದೆ. ಇನ್ನು ಇತ್ತ ಬೆಳ್ಳಿಯ ಬೆಲೆಯೂ ಪ್ರತಿ ಕೆಜಿಗೆ 620 ರೂಪಾಯಿ ಕಡಿಮೆಯಾಗಿದೆ.

ಇಂದಿನ ಬೆಲೆ:

ರಾಷ್ಟ್ರೀಯ ರಾಜಧಾನಿಯಲ್ಲಿ ಶೇ. 99.9 ಹಾಗೂ 99.5 ರಷ್ಟು ಶುದ್ಧತೆಯ ಚಿನ್ನದ ಬೆಲೆಯಲ್ಲಿ ತಲಾ 250 ರೂಪಾಯಿ ಕುಸಿತವಾಗಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ 30800 ಹಾಗೂ 30,650 ರೂಪಾಯಿ ಆಗಿದೆ. ಇನ್ನು 2018ರ ಫೆಬ್ರವರಿ 8 ರಂದು ಇದ್ದ ಬೆಲೆಗೇ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುವುದು ಗಮನಾರ್ಹ. ಈ ಮೂಲಕ ಇನ್ನು ಒಂದು ಪೌಂಡ್​(8 ಗ್ರಾಂ) ಚಿನ್ನದ ಬೆಲೆಯು 24,700 ರೂಪಾಯಿಗೆ ಬಂದು ನಿಂತಿದೆ.

ರಾಜ್ಯ ರಾಜಧಾನಿಯಲ್ಲೂ ಚಿನ್ನದ ಬೆಲೆಯಲ್ಲಿ ಕುಸಿತವಾಗಿದ್ದು 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆಯು 30,770 ಆಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ:

ಅಂತರಾಷ್ಟ್ರೀಯ ಮಟ್ಟದಲ್ಲಿ ನ್ಯೂಯಾರ್ಕ್​ನಲ್ಲಿ ಚಿನ್ನದ ಬೆಲೆ 0.32 ಶೇಕಡಾ ಕುಸಿತ ಕಂಡು ಪ್ರತಿ ಔನ್ಸ್​(28.34 ಗ್ರಾಂ) 1,223.30 ಡಾಲರ್​ಗೆ ಬಂದಿದೆ. ಇನ್ನು ಬೆಳ್ಳಿಯ ಬೆಲೆ 0.84 ಶೇಕಡಾ ಕುಸಿತ ಕಂಡು ಪ್ರತಿ ಔನ್ಸ್​ಗೆ 15.41 ಡಾಲರ್​ ಆಗಿದೆ
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ