HOME » NEWS » National-international » LATEST NEWS KANNADA DEATH TOLL IN LAST WEEKS NORTHEAST DELHI RIOTS RISES TO 53 654 CASES REGISTERED SO FAR SNVS

Delhi Violence: ದೆಹಲಿ ಗಲಭೆ: 53ಕ್ಕೇರಿದ ಸಾವಿನ ಸಂಖ್ಯೆ - 654ಕ್ಕೂ ಹೆಚ್ಚು ಪ್ರಕರಣ ದಾಖಲು

Delhi Riots Latest News: ಇತ್ತೀಚೆಗೆ ಬಂದ ವರದಿಯ ಪ್ರಕಾರ, 44 ಜನರು ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಇನ್ನು ಜನರು ರಾಮ್ ಮನೋಹರ್ ಲೊಹೀಯಾ ಆಸ್ಪತ್ರೆಯಲ್ಲಿ ಐದು ಮತ್ತು ಲೋಕ್ ನಾಯಕ್ ಆಸ್ಪತ್ರೆಯಲ್ಲಿ ಮೂವರು ಹಾಗೂ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ.

news18
Updated:March 6, 2020, 10:21 AM IST
Delhi Violence: ದೆಹಲಿ ಗಲಭೆ: 53ಕ್ಕೇರಿದ ಸಾವಿನ ಸಂಖ್ಯೆ -  654ಕ್ಕೂ ಹೆಚ್ಚು ಪ್ರಕರಣ ದಾಖಲು
ದೆಹಲಿ ಹಿಂಸಾಚಾರ
  • News18
  • Last Updated: March 6, 2020, 10:21 AM IST
  • Share this:
ನವದೆಹಲಿ(ಮಾ. 06): ಇತ್ತೀಚೆಗೆ ಸಂಭವಿಸಿದ ದೆಹಲಿ ಕೋಮುದಳ್ಳುರಿಯಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿದೆ. 2013ರಲ್ಲಿ ಉತ್ತರ ಪ್ರದೇಶದ ಮುಜಾಫರ್​ನಗರ್​ನಲ್ಲಿ ಸಂಭವಿಸಿದ ಗಲಭೆ ನಂತರ ದೇಶ ಕಂಡ ಭಯಾನಕ ಗಲಭೆ ಇದಾಗಿದೆ ಎನ್ನಲಾಗುತ್ತಿದೆ. ಮುಜಾಫರ್​ನಗರ್ ಗಲಭೆಗಳಲ್ಲಿ 63 ಜನರು ಬಲಿಯಾಗಿದ್ದರು.

1992ರಲ್ಲಿ ಬಾಂಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ನಡೆದ ಕೋಮು ಗಲಭೆ ಕೋಲ್ಕತಾ, ದೆಹಲಿ, ಕಾನ್ಪುರ್, ಸೂರತ್, ಮುಂಬೈ ಸೇರಿದಂತೆ ದೇಶದ ಹಲವಾರು ಪ್ರದೇಶಗಳಿಗೆ ಹರಡಿ ಸಾವಿರಕ್ಕೂ ಹೆಚ್ಚು ಜನರನ್ನು ಬಲೆ ತೆಗೆದುಕೊಂಡಿತ್ತು. ಈ ಗಲಭೆಯಲ್ಲಿ ಬರೀ ಮುಂಬೈ ನಗರವೊಂದೇ 1,500 ಜನರ ಸಾವಿಗೆ ಸಾಕ್ಷಿಯಾಗಿತ್ತು.

ಇತ್ತೀಚೆಗೆ ಬಂದ ವರದಿಯ ಪ್ರಕಾರ, 44 ಜನರು ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಇನ್ನು ರಾಮ್ ಮನೋಹರ್ ಲೊಹೀಯಾ ಆಸ್ಪತ್ರೆಯಲ್ಲಿ ಐದು ಮತ್ತು ಲೋಕ್ ನಾಯಕ್ ಆಸ್ಪತ್ರೆಯಲ್ಲಿ ಮೂವರು ಹಾಗೂ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ANI ವರದಿ ಮಾಡಿದೆ.

ಇದನ್ನೂ ಓದಿ: ಕೊರೋನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 30ಕ್ಕೇರಿಕೆ; ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಸೋಂಕು ಏರಿಕೆ

ಆದರೆ, ಅಧಿಕಾರಿಗಳು ಸಾವಿನ ಸಂಖ್ಯೆಯನ್ನು 44ಕ್ಕೆ ನಿಲ್ಲಿಸಿದ್ದಾರೆ.  ಎಎಲ್​ಎನ್​ಜಿಪಿ ಆಸ್ಪತ್ರೆಯಲ್ಲಿನ ಮೂರು ಜನರ ಸಾವು ಮತ್ತು ಆರ್​ಎಮ್​ಎಲ್  ಆಸ್ಪತ್ರೆಯಲ್ಲಿ 5 ಸಾವುಗಳು ಸಂಭವಿಸಿರುವುದು ಗಲಭೆಗೆ ಸಂಬಂಧಿಸಿದ್ದು ಎಂಬುದು ದೃಢಪಟ್ಟಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸಾವಿನ ಸಂಖ್ಯೆ 44 ಇದೆ. ನಾವು ಇನ್ನೂ ಪೊಲೀಸರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದೇವೆ ಎಂದು ಈಶಾನ್ಯ ದೆಹಲಿಯ ಜಿಲ್ಲಾಧಿಕಾರಿ ಶಶಿ ಕೌಶಲ್ ತಿಳಿಸಿದ್ದಾರೆ. ಅಲ್ಲದೇ ಪೊಲೀಸರು ಸಹ ಸಾವಿನ ಸಂಖ್ಯೆ 44 ಎಂದು ಖಚಿತಪಡಿಸಿದ್ದಾರೆ. ಈಶಾನ್ಯ ದೆಹಲಿಯ ಗಲಭೆಯಲ್ಲಿನ ಸಾವಿನ ಪ್ರಮಾಣ 44 ಎಂದು ಹೆಚ್ಚುವರಿ ಪಿಆರ್​ಓ ಅನಿಲ್ ಮಿತ್ತಲ್ ಹೇಳಿದ್ದಾರೆ.

ಇದನ್ನೂ ಓದಿ: YES Bank: ಕೆಟ್ಟ ಸಾಲದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯೆಸ್​ ಬ್ಯಾಂಕ್ ಆಡಳಿತ ಮಂಡಳಿ ಸುಪರ್ದಿಗೆ ಪಡೆದ ಆರ್​ಬಿಐಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ 654 ಪ್ರಕರಣಗಳು ದಾಖಲಾಗಿವೆ. 1820 ಜನರನ್ನು ಬಂಧಿಸಲಾಗಿದೆ ಮತ್ತು 47 ಶಸ್ರಾಸ್ತ್ರ ಸಂಬಂಧಿತ ಪ್ರಕರಣಗಳು ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ನ್ಯೂಸ್18 ಇತ್ತೀಚೆಗೆ ನಡೆಸಿದ ಪ್ರತ್ಯಕ್ಷ ವರದಿ ಪ್ರಕಾರ, ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಹತಾಶೆ ಮಡುಗಟ್ಟಿದೆ. ವಿವಿಧ ಸಮುದಾಯಗಳ ಜನರು ಪರಸ್ಪರ ರಕ್ಷಣೆ ಕೂಡ ಮಾಡಿದ ಸಕಾರಾತ್ಮಕ ಉದಾಹರಣೆಗಳುಂಟು. ಇನ್ನು, ಗಲಭೆಯಲ್ಲಿ ಮೃತಪಟ್ಟವರು ಅವರ ಮನೆಯ ಆಧಾರಸ್ತಂಭವಾಗಿದ್ದರೆನ್ನಲಾಗಿದೆ. ಗಲಭೆಗೆ ಬಲಿಯಾದವರಲ್ಲಿ ಬಡ ಕಾರ್ಮಿಕರು, ಉದ್ಯಮಿಗಳು, ಚಾಲಕರು ಎಲ್ಲರೂ ಸೇರಿದ್ದಾರೆ.

- ಸಂಧ್ಯಾ ಎಂ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: March 6, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories