Lakhimpur Kheri Violence: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಲೇಟೆಸ್ಟ್ ಬೆಳವಣಿಗೆಗಳು ಇಲ್ಲಿವೆ!

ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಇಂದು ಮಹಾ ವಿಕಾಸ್ ಅಡಿ ಮೈತ್ರಿ ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳು ಜಂಟಿಯಾಗಿ ರಾಜ್ಯಾದ್ಯಂತ ಬಂದ್ ಆಚರಿಸುವಂತೆ ಕರೆ ನೀಡಿವೆ.

ಲಖೀಂಪುರ್​ಖೇರಿ ಹಿಂಸಾಚಾರ.

ಲಖೀಂಪುರ್​ಖೇರಿ ಹಿಂಸಾಚಾರ.

  • Share this:
ನವ ದೆಹಲಿ (ಅಕ್ಟೋಬರ್​. 7): ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹರಿಸಿರುವ ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence ) ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಚಾಟಿ ಬೀಸಿದ ಬಳಿಕ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡು ತನಿಖೆಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮವಾಗಿ ಹಿಂಸಾಚಾರದ ರೂವಾರಿ ಎನ್ನಲಾಗುತ್ತಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ (Union Home Minister (MoS) Ajay Mishra) ಮತ್ತು ಅವರ ಪುತ್ರ ಆಶೀಶ್ ಮಿಶ್ರಾನನ್ನು (Ashish Mishra) ಬಂಧಿಸಿ ನಿನ್ನೆ (ಅಕ್ಟೋಬರ್ 10ರಂದು) ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಸದ್ಯ ಆಶೀಶ್ ಮಿಶ್ರಾ ನ್ಯಾಯಾಂಗ ಬಂಧನದಲ್ಲಿದ್ದು ಇಂದು ಆತ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ಆಶೀಶ್ ಮಿಶ್ರಾನನ್ನು ಸುಮಾರು 12 ಗಂಟೆ ವಿಚಾರಣೆ ನಡೆಸಲಾಗಿತ್ತು. ಆದರೆ ಆತ ಪೊಲೀಸರ ಎಲ್ಲಾ ಪ್ರಶ್ನೆಗಳಿಗೂ ಗೊಂದಲಕಾರಿ ಉತ್ತರಗಳನ್ನೇ ನೀಡಿರುವುದರಿಂದ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯ ಇದೆ ಎಂದು ಉತ್ತರ ಪ್ರದೇಶ ಪೊಲೀಸರು (Uttar Pradesh Police) ಹೇಳಿದ್ದಾರೆ. ಈ‌ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಆಶೀಶ್ ಮಿಶ್ರಾನನ್ನು‌ ತಮ್ಮ‌ ವಶಕ್ಕೆ ಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಂದು ಆ ಅರ್ಜಿಯ ವಿಚಾರಣೆ ನಡೆಯಲಿದೆ.

ಇದಲ್ಲದೆ ತಮ್ಮ ಪರ ವಕೀಲರ ಮೂಲಕ ಆಶೀಶ್ ಮಿಶ್ರಾ ಕೂಡ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ನನ್ನನ್ನು ಪೊಲೀಸರು 12 ಗಂಟೆ ವಿಚಾರಣೆಗೆ ಒಳಪಡಿಸಿದ್ದಾರೆ. ಅದೂ ಅಲ್ಲದೆ ಹಿಂಸಾಚಾರ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ. ಬೇರೆ ಕಡೆ ಇದ್ದೆ ಎಂಬುದಕ್ಕೆ ಪುರಾವೆಯಾಗಿ ನಾಲ್ಕು ವಿಡಿಯೋ ತುಣುಕುಗಳನ್ನು ನೀಡಿದ್ದೇನೆ. ಇಷ್ಟಕ್ಕೂ ಇನ್ನೂ‌ ಹೆಚ್ಚಿನ ಮಾಹಿತಿ ಬೇಕಿದ್ದರೆ ಅವರು ಕರೆದಾಗ ಹೋಗಿ ಅಗತ್ಯ ಮಾಹಿತಿ,‌  ದಾಖಲೆ ‌ಹಾಗೂ ಸಾಕ್ಷ್ಯಗಳನ್ನು ನೀಡುತ್ತೇನೆ. ಆದುದರಿಂದ ತನಗೆ ಜಾಮೀನು ನೀಡಬೇಕು ಎಂದು ಕೇಳಿಕೊಳ್ಳುವ ಸಾಧ್ಯತೆ ಇದೆ.

ರೈತರ ಹತ್ಯೆಯ ಉಲ್ಲೇಖವೇ ಇಲ್ಲದೆ ಮತ್ತೊಂದು ಎಫ್ ಐಆರ್;

ಲಖೀಂಪುರ್ ಖೇರಿ ಹಿಂಸಾಚಾರದ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಮೂವರು ಬಿಜೆಪಿ (BJP) ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಘಟಕ ಪ್ರತ್ಯೇಕ ಪ್ರಕರಣವೊಂದನ್ನು ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐ ಆರ್ (FIR) ಅನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಹಿಂಸಾಚಾರದಲ್ಲಿ ನಾಲ್ವರು ರೈತರು ಹತ್ಯೆ ಆಗಿರುವ ಬಗ್ಗೆ ಏನೊಂದು ಮಾಹಿತಿಯನ್ನು ಉಲ್ಲೇಖ ಮಾಡಿಲ್ಲ ಎಂಬುದಾಗಿ ತಿಳಿದುಬಂದಿದೆ.

ಮಹಾರಾಷ್ಟ್ರದಲ್ಲಿ ಇಂದು ಬಂದ್!

ಇನ್ನೊಂದೆಡೆ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ (Maharashtra) ಇಂದು ಬಂದ್ (Band) ಆಚರಣೆಗೆ ಕರೆ ನೀಡಲಾಗಿದೆ. ಮಹಾರಾಷ್ಟ್ರದ ಮಹಾ ವಿಕಾಸ್ ಅಡಿ (Maha Vikas Adi) ಮೈತ್ರಿ ಪಕ್ಷಗಳಾದ ಶಿವಸೇನೆ (Shivasene), ಕಾಂಗ್ರೆಸ್ (Congress) ಹಾಗೂ ಎನ್‌ಸಿಪಿ (NCP)ಗಳು ಜಂಟಿಯಾಗಿ ಇಂದು‌ ರಾಜ್ಯಾದ್ಯಂತ ಬಂದ್ ಆಚರಿಸುವಂತೆ ಕರೆ ನೀಡಿವೆ.

ಇದನ್ನೂ ಓದಿ: Lakhimpur Kheri Massacre| ಲಖೀಂಪುರ್​ ಖೇರಿ ಹತ್ಯಾಕಾಂಡ; ಪ್ರಮುಖ ಆರೋಪಿ, ಸಚಿವರ ಪುತ್ರ ಆಶೀಶ್ ಮಿಶ್ರಾ ಬಂಧನ!

ಕೇಂದ್ರ ಸರ್ಕಾರದ (Unio Government) ರೈತ ವಿರೋಧಿ ನೀತಿಗಳ ವಿರುದ್ಧ ಜನರನ್ನು ಜಾಗೃತಗೊಳಿಸಲು‌ ಈ ಬಂದ್ ಗೆ ಕರೆ ನೀಡಲಾಗಿದೆ. ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ  ರೈತರನ್ನು ಹತ್ಯೆ ಮಾಡಿದವರಿಗೆ ಶಿಕ್ಷೆ ಆಗುವಂತೆ ಒತ್ತಾಯಿಸಲು ಬಂದ್ ಗೆ ಕರೆ ನೀಡಲಾಗಿದೆ ಎಂದು ಮೂರು ಪಕ್ಷಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ (Join Press meet) ಘೋಷಣೆ ಮಾಡಿವೆ.
Published by:MAshok Kumar
First published: