Election: ಉತ್ತರ ಪ್ರದೇಶದಲ್ಲಿ ಇಂದು ಕೊನೆ ಹಂತದ ಮತದಾನ, ಪಂಚ ರಾಜ್ಯಗಳ ಚುನಾವಣೆಗೆ ತೆರೆ; ಇನ್ನೇನಿದ್ದರೂ ಸೋಲು-ಗೆಲುವಿನ ಲೆಕ್ಕಾಚಾರ

ಐದೂ ರಾಜ್ಯಗಳ ವಿವಿಧ ಹಂತಗಳ ಚುನಾವಣೆಗೆ ತೆರೆ ಬೀಳಲಿದೆ. ಇನ್ನು ಇಂದು ಉತ್ತರ ಪ್ರದೇಶದಲ್ಲಿ 7ನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿದೆ. ಇದೇ 10ರಂದು ಚುನಾವಣಾ ಫಲಿತಾಂಶ ಹೊರಬರಲಿದ್ದು, ಯಾರಿಗೆ ಗೆಲುವು, ಯಾರಿಗೆ ಸೋಲು ಎನ್ನುವುದು ಗೊತ್ತಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಂಚ ರಾಜ್ಯಗಳ (5 State) ವಿಧಾನಸಭಾ ಚುನಾವಣೆಗೆ (Assembly Election) ಇಂದು ತೆರೆ ಬೀಳಲಿದೆ. ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab), ಗೋವಾ (Goa), ಉತ್ತರಾಖಂಡ (Uttarakhand) ಹಾಗೂ ಮಣಿಪುರ (Manipur) ಸೇರಿದಂತೆ ಐದು ರಾಜ್ಯಗಳಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆದಿದೆ. ಇಂದು ಐದೂ ರಾಜ್ಯಗಳ ವಿವಿಧ ಹಂತಗಳ ಚುನಾವಣೆಗೆ ತೆರೆ ಬೀಳಲಿದೆ. ಇನ್ನು ಇಂದು ಉತ್ತರ ಪ್ರದೇಶದಲ್ಲಿ 7ನೇ ಹಾಗೂ ಅಂತಿಮ ಹಂತದ ಚುನಾವಣೆ (Final Phase Election) ನಡೆಯುತ್ತಿದೆ ಈಗಾಗಲೇ ಮತದಾನ (Voting) ಆರಂಭವಾಗಿದ್ದು, ಸಂಜೆವರೆಗೆ ಮತದಾರರಿಗೆ ತಮ್ಮ ಹಕ್ಕು ಚಲಾಯಿಸುವ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ ಸಿಎಂ (CM) ಯೋಗಿ ಆದಿತ್ಯನಾಥ್ (Yogi Adityanath) ಸೇರಿದಂತೆ ಪಂಚ ರಾಜ್ಯಗಳ ಘಟಾನುಘಟಿ ನಾಯಕರ (Leaders) ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಇದೇ 10ರಂದು ಚುನಾವಣಾ ಫಲಿತಾಂಶ (Election Result) ಹೊರಬರಲಿದ್ದು, ಯಾರಿಗೆ ಗೆಲುವು, ಯಾರಿಗೆ ಸೋಲು ಎನ್ನುವುದು ಗೊತ್ತಾಗಲಿದೆ.

 ಉತ್ತರ ಪ್ರದೇಶದಲ್ಲಿಂದು 7ನೇ ಹಂತದ ಮತದಾನ

403 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಸಲಾಗಿದೆ. ಫೆಬ್ರವರಿ 10ರಿಂದ ಮಾರ್ಚ್‌ 7ರವರೆಗೆ ಅಂದರೆ ಇಂದಿನವರೆಗೆ ಚುನಾವಣೆ ನಡೆದಿದೆ. ಚುನಾವಣಾ ಫಲಿತಾಂಶ ಇದೇ ಮಾರ್ಚ್‌ 10 ರಂದು ಪ್ರಕಟವಾಗಲಿದೆ. ಇನ್ನು ಪಂಜಾಬ್‌ನ 117, ಮಣಿಪುರದ 60 ಮತ್ತು ಗೋವಾದ 40 ಸ್ಥಾನಗಳು ಸೇರಿದಂತೆ ಒಟ್ಟು 690 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

 ಕಣದಲ್ಲಿ ಘಟಾನುಘಟಿ ನಾಯಕರು

ಉತ್ತರ ಪ್ರದೇಶ ಇಡೀ ದೇಶದಲ್ಲೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಹೀಗಾಗಿ ಇಲ್ಲಿನ ಗೆಲುವು ಎಲ್ಲಾ ರಾಜಕೀಯ ಪಕ್ಷಗಳ ಪಾಲಿಗೆ ಮಹತ್ವದ್ದಾಗಿರುತ್ತದೆ. ಇಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಮಾಜಿ ಸಿಎಂ ಅಖಿಲೇಶ್ ಯಾದವ್, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಚಿರಾಗ್ ಪಾಸ್ವಾನ್ ಸೇರಿದಂತೆ ಘಟಾನುಘಟಿ ನಾಯಕರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೀಗಾಗಿ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Shivaji Statue: ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡಿದ ಮೋದಿ

 ಇಂದು ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಚುನಾವಣೆ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 54 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಂದು ಮತದಾರರು 613 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಈ ಚುನಾವಣೆಯಲ್ಲಿ ತಾರಾಪ್ರಚಾರಕ ಮೋದಿ ಅವರ ವರ್ಚಸ್ಸನ್ನೇ ಬಿಜೆಪಿ ಸಂಪೂರ್ಣವಾಗಿ ನೆಚ್ಚಿಕೊಂಡಿದೆ. ಸಮಾಜವಾದಿ ಪಕ್ಷವು ಜಾತಿ ಸಮುದಾಯಗಳನ್ನು ಪ್ರತಿನಿಧಿಸುವ ತನ್ನ ಮಿತ್ರ ಪಕ್ಷಗಳನ್ನು ಗೆಲುವಿಗಾಗಿ ಅವಲಂಬಿಸಿದೆ.

ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ

ಅಜಂಗಡ, ಮೌ, ಜಾನ್‌ಪುರ, ಗಾಜಿಪುರ, ಚಂದೌಲಿ ವಾರಾಣಸಿ, ಮಿರ್ಜಾಪುರ, ಭದೋಹಿ ಹಾಗೂ ಸೋನ್‌ಭದ್ರಾ ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ಇಂದು ಕಣದಲ್ಲಿದ್ದಾರೆ ಈ ನಾಯಕರು

ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ವಾರಾಣಸಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸಚಿವರಾದ ಅನಿಲ್‌ ರಾಜಭರ್ (ಶಿವಪುರ–ವಾರಾಣಸಿ), ರವೀಂದ್ರ ಜೈಸ್ವಾಲ್ (ವಾರಾಣಸಿ ಉತ್ತರ), ಗಿರೀಶ್‌ ಯಾದವ್ (ಜಾನ್‌ಪುರ) ಹಾಗೂ ರಮಾಶಂಕರ್ ಸಿಂಗ್ ಪಟೇಲ್ (ಮಡಿಹಾನ್–ಮಿರ್ಜಾಪುರ) ಇಂದು ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

ಇದನ್ನೂ ಓದಿ: Video: ವಿಶ್ವನಾಥನ ಎದುರು ಡಮರು ಬಾರಿಸಿದ್ರು, ಜನರ ಜೊತೆ ಚಹಾ ಕುಡಿದ್ರು! Modi ರೋಡ್‌ ಶೋ ವಿಡಿಯೋ ವೈರಲ್

ನಾಯಕರ ಅಬ್ಬರದ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಿದರು. ವಾರಾಣಸಿ ಯಲ್ಲದೇ, ಅಕ್ಕ ಪಕ್ಕದ ಜಿಲ್ಲೆಗಳ ಕ್ಷೇತ್ರಗಳ ಮತದಾರರನ್ನು ಓಲೈಸುವ ಸಲು ವಾಗಿ ಮೋದಿ ಅವರು ಬಹಿರಂಗ ಸಭೆಗಳಲ್ಲದೇ, ವಾರಾಣಸಿ ದಂಡು ಪ್ರದೇಶ, ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಸಿದ್ದರು.
Published by:Annappa Achari
First published: