ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸದಂತೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ ಹರಿಕೃಷ್ಣ: ಏನಿರಬಹುದು ಹಿಂದಿನ ಮರ್ಮ?

news18
Updated:August 29, 2018, 2:02 PM IST
ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸದಂತೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ ಹರಿಕೃಷ್ಣ: ಏನಿರಬಹುದು ಹಿಂದಿನ ಮರ್ಮ?
news18
Updated: August 29, 2018, 2:02 PM IST
 ಅನಿತಾ ಈ, ನ್ಯೂಸ್​ 18 ಕನ್ನಡ

ಇನ್ನೇನು ಇಂದಿನಿಂದ ಸರಿಯಾಗಿ ಐದು ದಿನಕ್ಕೆ ಹರಿಕೃಷ್ಣ 62ನೇ ವಸಂತಕ್ಕೆ ಕಾಲಿಡಬೇಕಿತ್ತು. ಹೌದು ಸೆಪ್ಟೆಂಬರ್​ 2ರಂದು ಅವರ ಹುಟ್ಟುಹಬ್ಬಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿತ್ತು. ಆದರೆ ಇಂದು ಆ ಮನೆಯಲ್ಲಿ ನೀರವ ಮೌನ.

ಪ್ರತಿ ಬಾರಿ ಅಭಿಮಾನಿಗಳು ಹರಿಕೃಷ್ಣ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು. ಎಲ್ಲೆಡೆ ದೊಡ್ಡ ದೊಡ್ಡ ಕಟೌಟ್​, ಹೂವಿನ ಹಾರ, ಕೇಕ್​ ಹೀಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಹರಿಕೃಷ್ಣ ತಮ್ಮ ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ಅಭಿಮಾನಿಗಳಿಗೆ ಪತ್ರವನ್ನು ಬರೆದಿದ್ದರು.

ಆಂಧ್ರದಲ್ಲಿ ಸಿನಿ ತಾರೆಯರಿಗೆ ಇರುವ ಅಭಿಮಾನಿಗಳ ಅಭಿಮಾನದ ಬಗ್ಗೆ ಹೇಳಬೇಕಿಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡುವಷ್ಟು ಹುಚ್ಚು ಅಭಿಮಾನ ಇರುತ್ತದೆ. ಅದಕ್ಕಾಗಿಯೇ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸದಂತೆ ಕೋರಿ ಹರಿಕೃಷ್ಣ ಅಭಿಮಾನಿಗಳಿಗೆ ಪತ್ರ ಬರೆದಿದ್ದರು. ಹೌದು ಹರಿಕೃಷ್ಣ ಅಭಿಮಾನಿಗಳಿಗೆ ಬರೆದ ಕೊನೆಯ ಪತ್ರವಿದು.

ತಮ್ಮ ಹುಟ್ಟುಹಬ್ಬಕ್ಕೆ ವೆಚ್ಚ ಮಾಡುವ ಹಣವನ್ನೆಲ್ಲ ಕೇರಳದಲ್ಲಿ ಪ್ರವಾಹದಿಂದಾಗಿ ಜೀವ ಕಳೆದುಕೊಂಡವರು, ಮನೆ ಕಳೆದುಕೊಂಡವರಿಗೆ ನೀಡುವಂತೆ ಆ ಪತ್ರದಲ್ಲಿ ಬರೆದಿದ್ದಾರೆ. ಯಾರೂ ಸಹ ಹೂ, ಕಟೌಟ್​, ಬ್ಯಾನರ್​ ಎಂದು ದುಂದು ವೆಚ್ಚ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದರು. ಆದರೆ ಹುಟ್ಟುಬಹ್ಬದ ಸಂಭ್ರಮವಿರಬೇಕಿದ್ದ ಮನೆಯನ್ನು ಇಂದು ಸಾವಿನ ಸೂತಕದ ಛಾಯೆ ಆವರಿಸಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...