ಐಟಿ ರಿಟರ್ನ್ಸ್​ ಫೈಲ್​ ಮಾಡಲು ಕೆಲವೇ ಗಂಟೆಗಳು ಬಾಕಿ: ಮಾಡದಿದ್ದರೆ ಈ ಸಮಸ್ಯೆಗಳನ್ನೆದುರಿಸಲು ಸಿದ್ಧರಾಗಿ!


Updated:August 31, 2018, 2:04 PM IST
ಐಟಿ ರಿಟರ್ನ್ಸ್​ ಫೈಲ್​ ಮಾಡಲು ಕೆಲವೇ ಗಂಟೆಗಳು ಬಾಕಿ: ಮಾಡದಿದ್ದರೆ ಈ ಸಮಸ್ಯೆಗಳನ್ನೆದುರಿಸಲು ಸಿದ್ಧರಾಗಿ!

Updated: August 31, 2018, 2:04 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.31): ಐಟಿ ರಿಟರ್ನ್ಸ್​​​ ಸಲ್ಲಿಸಲು ಇನ್ನು ಕೆಲವೇ ಗಂಟೆಗಳು ಉಳಿದಿವೆ. ಒಂದು ವೇಳೆ ಇನ್ನುಳಿದ ಈ ಕೆಲ ಗಂಟೆಗಳಲ್ಲಿ ಒಂದು ವೇಳೆ ರಿಟರ್ನ್ಸ್​​ ಸಲ್ಲಿಸದಿದ್ದರೆ ಏನಾಗುತ್ತದೆ ಎಂದು ತಜ್ಙರ ಬಳಿ ಮಾಹಿತಿ ಪಡೆದಾಗ, ಆದಾಯ ತೆರಿಗೆ ಇಲಾಖೆ ಭಾರೀ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಗಳಿವೆ ಎಂದಿದ್ದಾರೆ. ಇದನ್ನು ಹೊರತುಪಡಿಸಿ ಒಂದು ವೇಳೆ ಮೌಲ್ಯಮಾಪನ ಮಾಡಿದ ಬಳಿಕ ಹೆಚ್ಚುವರಿ ತೆರಿಗೆ ಸಲ್ಲಿಸಲು ಸೂಚಿಸಿದರೆ ದಂಡದ ಜೊತೆಗೆ ಈ ತೆರಿಗೆಯನ್ನೂ ನೀಡಬೇಕಾಗುತ್ತದೆ. ಇದೇ ಕಾರಣದಿಂದ ನಿಗಧಿತ ಸಮಯದೊಳಗೆ ಐಟಿ ರಿಟರ್ನ್​ ಸಲ್ಲಿಸುವುದು ಸೂಕ್ತ. ಇದಕ್ಕೆ ಸಂಬಂಧಿಸಿದ ಕೆಲ ಮಾಹಿತಿ ಹೀಗಿದೆ.

ಫೈಲ್​ ಮಾಡದಿದ್ದರೆ ಏನಾಗುತ್ತದೆ?:

2017-18ನೇ ಹಣಕಾಸು ಮೌಲ್ಯಮಾಪನ ವರ್ಷದವರೆಗೆ ಐಟಿ ರಿಟರ್ನ್ಸ್​ ಸಲ್ಲಿಸಲು ತಡವಾದರೆ ಯಾವುದೇ ರೀತಿಯ ದಂಡ ವಿಧಿಸುತ್ತಿರಲಿಲ್ಲ. ಆದರೆ ಪ್ರಸ್ತುತ ವರ್ಷದಿಂದ ದಂಡ ವಿಧಿಸುವ ನಿಯಮ ಜಾರಿಗೊಳಿಸಲಾಗಿದೆ.

ದಂಡ ವಿಧಿಸಬೇಕಾಗುತ್ತದೆ:

ಆದಾಯ ತೆರಿಗೆ ಕಾನೂನಿನಲ್ಲಿ ಕೇಂದ್ರ ಸರ್ಕಾರವು 234F ಎಂಬ ಹೊಸ ಸೆಕ್ಷನ್​ ಸೇರಿಸಿದೆ. ಇದರ ಅನ್ವಯ ಕೊನೆಯ ದಿನಾಂಕದ ಬಳಿಕ ಐಟಿ ರಿಟರ್ನ್ಸ್​ ಸಲ್ಲಿಸಿದರೆ 10 ಸಾವಿರ ರೂಪಾಯಿವರೆಗೆ ದಂಡ ನೀಡಬೇಕಾಗುತ್ತದೆ.
Loading...

ತಜ್ಞರ ಅನ್ವಯ ಹಣಕಾಸು ಕಾಯ್ದೆ 2017ರಲ್ಲಾದ ಬದಲಾವಣೆ ಬಳಿಕ, ಒಂದು ವೇಳೆ 2017-18ನೇ ಹಣಕಾಸು ವರ್ಷದ ಐಟಿ ರಿಟರ್ನ್ಟ್​ 2018ರ ಆಗಸ್ಟ್​ 31ರ ಬಳಿಕ ಹಾಗೂ ಡಿಸೆಂಬರ್​ 31ರ ಒಳಗೆ ಸಲ್ಲಿಸಿದರೆ 5000 ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದಿದ್ದಾರೆ.

2019 ಜನವರಿ 1ರ ಬಳಿಕ ಐಟಿ ರಿಟರ್ನ್ಸ್​ ಸಲ್ಲಿಸಿದರೆ 10 ಸಾವಿರ ರೂಪಾಯಿ ದಂಡ ನೀಡಬೇಕಾಗುತ್ತದೆ. ಒಂದು ವೇಳೆ ವ್ಯಕ್ತಿಯೊಬ್ಬನ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ದಂಡ 1000 ರೂಪಾಯಿಗಿಂತ ಕಡಿಮೆ ಇರಲಿದೆ.

ಬಡ್ಡಿ ನೀಡಬೇಕಾಗುತ್ತದೆ:

ವ್ಯಕ್ತಿಯೊಬ್ಬ ವೇತನ ಪಡೆದು ಹಣ ಗಳಿಸುತ್ತಿಲ್ಲವೆಂದಾದರೂ, ತಡವಾಗಿ ಐಟಿ ರಿಟರ್ನ್ಸ್​ ಫೈಲ್​ ಮಾಡಿದಲ್ಲಿ ಬಡ್ಡಿ ಭರಿಸಬೇಕಾಗುತ್ತದೆ.

ನಿಗಧಿತ ಸಮಯದ ಬಳಿಕ ಐಟಿ ರಿಟರ್ನ್ಸ್​ ಫೈಲ್​ ಮಾಡುವುದು ಹೇಗೆ?

ಈ ಪ್ರಕ್ರಿಯೆ ಸಾಮಾನ್ಯವಾಗಿ ಐಟಿ ರಿಟರ್ನ್ಟ್​ ಫೈಲ್​ ಮಾಡುವಾಗ ಅನುಸರಿಸುವ ವಿಧಾನಬವೇ ಆಗಿದೆ. ಆದರೆ ಫಾರ್ಮ್​ ಆಯ್ಕೆ ಮಾಡುವಾಗ 'ರಿಟರ್ನ್​​ ಫೈಲ್​ ಅಂಡರ್​ ಸೆಕ್ಷನ್​ 139(4) ಎಂಬುವುದನ್ನು ಆಯ್ಕೆ ಮಾಡಬೇಕಾಗುತ್ತದೆ. ಇದಾದ ತಡವಾಗಿ ರಿಟರ್ನ್ಸ್​ ಫೈಲ್​ ಮಾಡುವುದರಿಂದ ಕೆಲ ಲಾಭಗಳು ನಿಮಗೆ ಸಿಗುವುದಿಲ್ಲ. ಹಾಗೂ ದ.ಡವನ್ನೂ ವಿಧಿಸಬೇಕಾಗುತ್ತದೆ.

ಸೂಕ್ತ ಮಾಹಿತಿಯನ್ನು ಭರ್ತಿ ಮಾಡಿ, ಈ ಮಾಹಿತಿಯನ್ನು ನೀವು ಖಚಿತಪಡಿಸಬೇಕಾಗುತ್ತದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...